More

    ಬಜಗೋಳಿಗೆ ಬಾಹುಬಲಿ ಮೂರ್ತಿ 

    ಕಾರ್ಕಳ: ಬಜಗೋಳಿಯ ಐತಿಹಾಸಿಕ ಜೈನ ಪರಂಪರೆಯ ಮುಡಾರು ಗ್ರಾಮದ ಬಜಗೋಳಿ ಸುಮ್ಮ ಗುತ್ತು ಬಂಡಸಾಲೆಯ ಧರ್ಮಶಾಲೆಯಲ್ಲಿ 15.5 ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದ್ದು, ಅ.19ರಂದು ವಿಗ್ರಹ ಮೂಡುಬಿದಿರೆಯಿಂದ ವಿಗ್ರಹ ಕೊಂಡೊಯ್ಯಲಾಗುವುದು. ಮೂಡುಬಿದಿರೆ ಶ್ರೀ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 2014ರಲ್ಲಿ 15.5 ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ನಿರ್ಮಿಸಲಾಗಿತ್ತು.
    19ರ ಮಧ್ಯಾಹ್ನ 1.30ಕ್ಕೆ ಶ್ರೀಗಳು ಸಾಯಂಕಾಲ 4 ಗಂಟೆಗೆ ಬಜಗೋಳಿಗೆ ವಿಹಾರದೊಂದಿಗೆ ಆಗಮಿಸಲಿದ್ದಾರೆ. ಅಪ್ಪಾಯಿ ಬಸದಿಯಲ್ಲಿ ಅಭಿಷೇಕ ಪೂಜೆ ನೆರವೇರಿಸಿ 5 ಗಂಟೆಗೆ ಬಜಗೋಳಿ ಸುಮ್ಮ ಗುತ್ತು ಬಂಡಸಾಲೆ, ಧರ್ಮಶಾಲೆಗೆ ಪುರ ಪ್ರವೇಶಗೈಯುವರು ಎಂದು ಮೂಡುಬಿದಿರೆ ಶ್ರೀ ಜೈನ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts