More

    2 ಎ ಮೀಸಲಾತಿ ಕಲ್ಪಿಸಲು ಆಗ್ರಹ

    ಬಾಗಲಕೋಟೆ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಬೇಕು, ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸಮಾಜವನ್ನು ಸೇರ್ಪಡೆ ಮಾಡಲು ಶಿಾರಸ್ಸು ಮಾಡಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು, ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರ ಮೂಲಕ ಸಿ.ಎಂ.ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು 86 ಲಕ್ಷೃ ಜನ ಸಂಖ್ಯೆ ಹೊಂದಿದೆ. ಇದರಲ್ಲಿ ಶೇ. 90 ರಷ್ಟು ಜನ ಕೃಷಿ ಹಾಗೂ ಕಾರ್ಮಿಕ ಕೆಲಸ ಮಾಡುತ್ತಿದ್ದು, ಸಮಾಜದ ಮಕ್ಕಳಿಗೆ ಶಿಕ್ಷೃಣ ಹಾಗೂ ಉದ್ಯೋಗ ಮೀಸಲಾತಿ ಅಗತ್ಯವಾಗಿದೆ. ಸಮಾಜವನ್ನು ಪ್ರವರ್ಗ 2 ಎ ದಲ್ಲಿ ಸೇರಿಸಿ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಶಿಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೃ ಸಿದ್ದಣ್ಣ ಹಂಪನಗೌಡರ, ಕಾರ್ಯದರ್ಶಿ ಬಸವರಾಜ ರಾಜೂರ, ಸಹ ಕಾರ್ಯದರ್ಶಿ ಪರಶುರಾಮ ಮುಳಗುಂದ, ಮುಖಂಡರಾದ ಸುರೇಶ ರೇವಡಿಗಾರ, ಸಂತೋಷ ಜಕಾತಿ, ನಾಗರಾಜ ಕೊಟಗಿ, ಶಂಕರ ಅರಶಿನಗೋಡಿ, ಮಲ್ಲಿಕಾರ್ಜುನ ಐಗಳಿ, ಪ್ರಶಾಂತ ಕಗ್ಗೋಡ, ರಾಮನಗೌಡ ಶೀಲವಂತರ, ನಿಂಗಣ್ಣ ಪಲ್ಲೇದ, ನೀಲಪ್ಪ ಬೇವೂರ, ಬಸವರಾಜ ಬಗಲಿ, ರಮೇಶ ಅಂಗಡಿ, ಬಸವರಾಜ ಹುನಗುಂದ, ವೀರಣ್ಣ ಕಲಬುರ್ಗಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts