More

    ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

    ಬಾಗಲಕೋಟೆ: ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ರಸ್ತೆ, ಫುಟ್‌ಪಾತ್, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲಕ ಶನಿವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಎಂಬಿಎ ಕಾಲೇಜು ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 367 ರವರೆಗೆ ರಸ್ತೆ ವಿಸ್ತರಣೆ, 1400 ಮೀಟರ್ ರಸ್ತೆ, ಚರಂಡಿ, ಎರಡು ಸಿಡಿಗಳ ನಿರ್ಮಾಣ ಕಾಮಗಾರಿಯನ್ನು 12.60 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ನವನಗರದ ಸೆಕ್ಟರ್ ನಂ. 61 ಮತ್ತು 62 ರಲ್ಲಿ 2.20 ಕಿ.ಮೀ. ಉದ್ದ, 9 ಮೀ. ಅಗಲಕ್ಕೆ ಮರು ಡಾಂಬರೀಕರಣ, ಸೆಕ್ಟರ್ ನಂ. 63ಎ ನಲ್ಲಿ 4.01 ಕಿ.ಮೀ. ಉದ್ದ ಹಾಗೂ 9.75 ಮೀ., 9ಮೀ., 3.75 ಮೀಟರ್ ಅಗಲಕ್ಕೆ ಡಾಂಬರೀಕರಣ, ಸೆಕ್ಟರ್ ನಂ. 61, 62 ಹಾಗೂ ಜೆ ರಸ್ತೆಯಲ್ಲಿ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಎದುರುಗಡೆ ಚರಂಡಿ ಪುನರ್ ನಿರ್ಮಾಣಕ್ಕಾಗಿ 2.67 ಕೋಟಿ ರೂ. ಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

    ಎಂಬಿಎ ಕಾಲೇಜು ಸರ್ಕಲ್‌ದಿಂದ ಇಂಜಿನಿಯರಿಂಗ್ ಕಾಲೇಜಿನ ಸ್ಟಾಫ್ ಕ್ವಾರ್ಟರ್ಸ್‌ವರೆಗೆೆ ಎರಡು ಬದಿಗೆ 3.20 ಕಿ.ಮೀ. ಉದ್ದ ಹಾಗೂ 1.95 ಮೀ. ಅಗಲಕ್ಕೆ ಫುಟ್‌ಪಾತ್ ನಿರ್ಮಾಣ, ನವನಗರದ ಸಿ ರಸ್ತೆಯಿಂದ ಕರ್ನಾಟಕ ಗೃಹ ಮಂಡಳಿವರೆಗೆ ಎರಡು ಬದಿಗೆ 850 ಮೀ. ಉದ್ದದ ಚರಂಡಿ ನಿರ್ಮಾಣ ಹಾಗೂ ಆಟೋ ಸೆಕ್ಟರ್‌ನಲ್ಲಿ ಸಿ.ಡಿ. ನಿರ್ಮಾಣ ಕಾಮಗಾರಿಯನ್ನು 4.53 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

    ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿಪಡಿಸಿದ ಅವಧಿಯೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಬಿಟಿಡಿಎ ಮುಖ್ಯ ಅಭಿಯಂತರ ಅಶೋಕ ವಾಸನದ, ಅಧೀಕ್ಷಕ ಅಭಿಯಂತರ ಡಿ.ಜಿ. ಕಲ್ಲೂರಮಠ, ಕಾರ್ಯ ನಿರ್ವಾಹಕ ಅಭಿಯಂತರ ಬಿ.ಎಚ್. ಪಾಟೀಲ, ಬಿ.ಕೆ. ಶೆಟ್ಟರ ಇದ್ದರು.



    ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts