ಬಾಗಲಕೋಟೆ: ನವನಗರದ ಉತ್ತರಾಧಿಮಠದಲ್ಲಿ ಸತ್ಯಬೋಧತೀರ್ಥ ಶ್ರೀಪಾದಂಗಳವರ ಆರಾಧನೆಯಲ್ಲಿ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಶ್ರೀಪಾದಂಗಳವರು ವೈಕುಂಠ ರಾಮದೇವರ ಪೂಜೆಯನ್ನು ಮಂಗಳವಾರ ನೆರವೇರಿಸಿದರು.
ಶ್ರೀಗಳು ವೈಕುಂಠ ರಾಮದೇವರ ಪೂಜೆಯನ್ನು ಶಾಸೋಕ್ತವಾಗಿ ನೆರವೇರಿಸಿದಾಗ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಪೂಜಾ ವೈಭವವನ್ನು ಕಣ್ತುಂಬಿಕೊಂಡರು. ಇನ್ನು ಬೆಳಗ್ಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಧನ್ವಂತರಿ ಹೋಮ ಜರುಗಿತು. ಪಂಡಿತರು ಹಾಗೂ ವಿದ್ಯಾರ್ಥಿಗಳು ಶಾಸಾನುವಾಧದಲ್ಲಿ ಪಾಲ್ಗೊಂಡು ಅದಕ್ಕೆ ವಿಶ್ಲೇಷಣೆ ನೀಡಿದರು. ಧಾರ್ಮಿಕ ಅನುಸಂದಾನದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮದ್ಯಾಹ್ನ ತೀರ್ಥಪ್ರಸಾದ ನೆರವೇರಿಸಲಾಯಿತು. ಬುಧವಾರ ರಥೋತ್ಸವ, ರಥಾಂಗ ಹೋಮ, ಪೂರ್ಣಾಹುತಿಯೊಂದಿಗೆ ಆರಾಧನೆ ಸಂಪನ್ನಗೊಂಡಿತು.