More

    ಧಾರ್ಮಿಕ ಕೇಂದ್ರಗಳಲ್ಲಿ ಹೋಮ

    ಬಾಗಲಕೋಟೆ: ಅಧಿಕ ಮಾಸದ ನಿಮಿತ್ತ ನವನಗರದ ಶ್ರೀ ಉತ್ತರಾಧಿ ಮಠದಲ್ಲಿ 107 ಅಧ್ಯಾಯ ಮನನ ಮಾಡುವ ಭಾಗವತ ದಶಮಸ್ಕಂದ ಹೋಮ, ಜಗತ್ತಿಗೆ ರೋಗವ್ಯಾದಿ ನಿವಾರಿಸಲು ಪ್ರಾರ್ಥಿಸಿ ವಿದ್ಯಾಗಿರಿ ವಿಪ್ರ ಮಂಡಳಿಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಧನ್ವಂತರಿ ಹೋಮ ಭಾನುವಾರ ನೆರವೇರಿಸಲಾಯಿತು.

    ಎರಡು ಮಠಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ 40 ದಂಪತಿ ಹೋಮ ಹವನಾದಿಯನ್ನು ನೆರವೇರಿಸಿ ಪೂರ್ಣಾಹುತಿ ನೀಡಿ ಜಗತ್ತಿಗೆ ಶಾಂತಿ ಸಮೃದ್ಧಿಗಾಗಿ ಪ್ರಾರ್ಥಿಸಿದರು.

    ರಾಯರಮಠದಲ್ಲಿ
    ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಮಂಡಳಿಯ ರಾಯರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂ. ರಾಘವಾಚಾರ್ಯ ಕಿರಸೂರ ನೇತೃತ್ವದಲ್ಲಿ ನವಗ್ರಹ, ಧನ್ವಂತರಿಯನ್ನು ಆಹ್ವಾನಿಸಿ ಹೋಮ ಕಾರ್ಯಕ್ರಮ ನೆರವೇರಿಸಲಾಯಿತು. ಇಲ್ಲಿ 35 ದಂಪತಿಗೂ ಪ್ರತ್ಯೇಕ ಹೋಮಕುಂಡ, ಪೂಜಾ ಸಲಕರಣೆ ಒದಗಿಸಿ ಪ್ರತ್ಯೇಕ ಪೂರ್ಣಾಹುತಿ ಮಾಡಿಸಲಾಯಿತು. ಪ್ರತಿಯೊಬ್ಬರಿಗೂ ಧನ್ವಂತರಿ ಪ್ರತಿಮೆ, ಲಪುಷ್ಪ ನೀಡಿ ಆಶೀರ್ವದಿಸಲಾಯಿತು. ಶನಿ ಭೂಮಿಯ ಅಧಿಪತಿ ಆತನ ಸ್ಮರಣೆ ಮೂಲಕ ನವಗ್ರಹ ಆರಾಧನೆ, ಧನ್ವಂತರಿಗೆ ಶರಣು ಹೋಗಬೇಕು ಎಂದು ರಾಘವಾಚಾರ್ಯ ಕಿರಸೂರ ಈ ವೇಳೆ ಹೇಳಿದರು.

    ವಿಪ್ರ ಮಂಡಳಿಯ ಅಧ್ಯಕ್ಷ ಎ.ಕೆ.ಸರಾಫ್, ಮುಖಂಡರಾದ ಜೆ.ವಿ.ಜೋಶಿ, ಹರಿ ಪಾಟೀಲ, ವಿಕಾಸ ದೇಶಪಾಂಡೆ, ಮುರಳಿ ಪರಾಂಡೆ, ಹೃಷಿಕೇಶ ಗುಡಿ, ಅನಿಲ ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ಅರವಿಂದ ಕಟ್ಟಿ, ಪ್ರವೀಣ ಗುಮಾಸ್ತೆ ಇದ್ದರು.

    ದಶಮಸ್ಕಂದ ಹೋಮ
    ನವನಗರದ ಉತ್ತರಾಧಿಮಠದಲ್ಲಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಂತೆ ಮಠಾಧಿಕಾರಿ ಪಂ.ಭೀಮಸೇನಾಚಾರ್ಯ ಪಾಂಡುರಂಗಿ ನೇತೃತ್ವದಲ್ಲಿ ದಶಮಸ್ಕಂದ ಹೋಮ ನೆರವೇರಿತು. ಭಾಗವತದ 107 ಅಧ್ಯಾಯದ ಪುನಶ್ಚರಣದ ಈ ಹೋಮ ಶನಿವಾರ ಆರಂಭ ಮಾಡಿ ಭಾನುವಾರ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಳಿಸಲಾಯಿತು. ಧಾರವಾಡದ ಪಂ.ವಾದಿರಾಜಾಚಾರ್ಯ ಮಠದ ಅವರು ಹೋಮ ನೆರವೇರಿಸಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಶಮಸ್ಕಂದ ಭಾಗವತ ಹೋಮ ನೆರವೇರಿಸುತ್ತಿರುವುದು ಇದೇ ಪ್ರಥಮ ಎಂದು ಬಣ್ಣಿಸಿದರು.

    ಸೇವಾಕರ್ತರಿಗೆ ಭಾಗವತ ದಶಮಸ್ಕಂದ ಭಾವಚಿತ್ರ, ಲಪುಷ್ಪ ಕಾಣಿಕೆ ನೀಡಲಾಯಿತು. ಪಂ ಬಿಂದಾಚಾರ್ಯ ನಾಗಸಂಪಿಗಿ, ಪಂ.ರಘೋತ್ತಮಾಚಾರ್ಯ ನಾಗಸಂಪಿಗಿ ಉಪನ್ಯಾಸ ನೀಡಿದರು. ಅರ್ಚಕರಾದ ಮಧ್ವೇಶಾರ್ಚಾ ಹಿಪ್ಪರಗಿ, ಕೃಷ್ಣಾಚಾರ್ಯ ಗುಮಾಸ್ತೆ, ವಾದಿರಾಜಾಚಾರ್ಯ ಇಂಗಳೆ, ಉಡುಪಿ ಕೃಷ್ಣಾಚಾರ್ಯ, ಸಮೀರಾಚಾರ್ಯ ದೇಶಪಾಂಡೆ , ಆರ್.ಆರ್.ಕುಲಕರ್ಣಿ, ರಾಮರಾವ ದೇಸಾಯಿ, ಶ್ರೀನಾಥ ಮಳಗಿ, ವಿಜಯೀಂದ್ರ ಮಿರ್ಜಿ, ಗೋಪಾಲ ಜಂಬಗಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts