More

    ಯುಪಿ ಸರ್ಕಾರ ವಜಾಗೊಳಿಸಿ

    ಬಾಗಲಕೋಟೆ: ಉತ್ತರ ಪ್ರದೇಶದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕಟಣೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟದಿಂದ ನಗರದ ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಿತಿ ಕಾರ್ಯಕರ್ತರು, ಮುಖಂಡರು ಉತ್ತರ ಪ್ರದೇಶದ ಸಿಎಂ ಯೋಗಿಆದಿತ್ಯನಾಥ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಅವರಿಗೆ ಮನವಿ ಸಲ್ಲಿಸಿದರು.

    ಸಂಘಟನೆ ಜಿಲ್ಲಾ ಸಂಚಾಲಕ ಹನುಮಂತ ಚಿಮ್ಮಲಗಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಭಯದ ನೆರಳಿನಲ್ಲಿ ಬದುಕು ನಡೆಸುವಂತಾಗಿದೆ. ಅದರಲ್ಲೂ ಯುವತಿರನ್ನು ಗುರಿಯಾಗಿ ಅತ್ಯಾಚಾರ, ಕೊಲೆ ಅಂತಹ ಅಮಾನವೀಯ ಕೃತ್ಯ ನಿತ್ಯವು ನಡೆಯುತ್ತಲಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈಚೆಗೆ ನಡೆದ ಯುವತಿ ಮನೀಷಾ ವಾಲ್ಮೀಕಿ ಪ್ರಕರಣ ಇದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಷ್ಟ್ರಪತಿ ರಾಮನಾಥ ಕೋವಿಂದ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 4 ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ನಡೆಸಬೇಕು.

    ಕರಣ ಮುಚ್ಚಿ ಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು, ಅತ್ಯಾಚಾರಿಗಳಿಗೆ ಪುರುಷತ್ವ ಹರಣಗೊಳಿಸುವ ಉಗ್ರವಾದ ಕಾನೂನು ಜಾರಿಗೊಳಿಸಬೇಕು, ಮನೀಷಾ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ಧನ ವಿತರಿಸಿ, ಅವರ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಮುಖಂಡರಾದ ಆನಂದ ದೊಡ್ಡಮನಿ, ಮುತ್ತಣ್ಣ ಮೇತ್ರಿ, ಕೃಷ್ಣಾ ನಾಯಕರ, ಶಿವಾನಂದ ಮಾದರ, ಸಂಗಣ್ಣ ಮಡ್ಡಿ, ಚಂದ್ರು ಹರಿಜನ, ಮಾರುತಿ ಮರೆಗುದ್ದಿ, ಬಸವರಾಜ ಚಲವಾದಿ ಇದ್ದರು.

    ವಾಲ್ಮೀಕಿ ಯುವ ವೇದಿಕೆಯಿಂದ ಪ್ರತಿಭಟನೆ
    ಉತ್ತರ ಪ್ರದೇಶದ ಯುವತಿ ವಾಲ್ಮೀಕಿ ಹತ್ಯಾಚಾರ ಪ್ರಕರಣ ಖಂಡಿಸಿ ಕರ್ನಾಟಕ ವಾಲ್ಲೀಕಿ ಯುವ ವೇದಿಕೆ ಜಿಲ್ಲಾ ಘಟಕ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.

    ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಘಟನೆ ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ಅತ್ಯಂತ ಕ್ರೂರವಾಗಿ ನಡೆದುಕೊಳ್ಳಲಾಗಿದೆ. ಶವವನ್ನು ಕೂಡಾ ಕುಟುಂಬಸ್ಥರಿಗೆ ಕೊಟ್ಟಿಲ್ಲ. ಇದೆನೆಲ್ಲ ನೋಡಿದರೇ ಪ್ರಕರಣದಲ್ಲಿ ರಾಜಕೀಯ ಮುಖಂಡರು, ಪೊಲೀಸ್ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಬಹಿರಂಗ ಸತ್ಯ. ಹೀಗಾಗಿ ಪ್ರಕರಣ ಅಪರಾಧಿಗಳನ್ನು ಎನ್‌ಕೌಂಟರ್ ಮಾಡಬೇಕು. ಇಂಹತ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಮುಖಂಡರಾದ ಸಾಬಣ್ಣ ಊಟಿ, ದ್ಯಾಮಣ್ಣ ಗಾಳಿ, ಯಲ್ಲಪ್ಪ ಗ್ಯಾದಿಗೇರಿ, ಸುಭಾಸ ಗಸ್ತಿ, ಲಕ್ಷ್ಮಣ ಮಾಳಿ, ಹೇಮಂತ ಚೂರಿ, ಮಹಾದೇವ ನಾಯಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts