More

    ಕಮತಗಿಯಲ್ಲಿ ಸರಣಿ ಅಪಘಾತ

    ಬಾಗಲಕೋಟೆ: ರಸ್ತೆ ಬದಿ ನಿಂತಿದ್ದ ಲಾರಿಗೆ ಮೂರು ಲಾರಿ ಹಾಗೂ ಎರಡು ಕ್ಯಾಂಟರ್ ವಾಹನಗಳು ಢಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಕಮತಗಿ ಪಟ್ಟಣದ ಹೊರವಲಯದ ಬಾಗಲಕೋಟೆ-ಇಳಕಲ್ಲ ಮಾರ್ಗದ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

    ಬೆಳಂಬೆಳಿಗ್ಗೆ ಸರಣಿ ಅಪಘಾತದಲ್ಲಿ ನಾಲ್ಕು ಲಾರಿಗಳು ಹಾಗೂ ಎರಡು ಕ್ಯಾಂಟರ್ ವಾಹನಗಳು ಮುಂಭಾಗದಲ್ಲಿ ಸಂಪೂರ್ಣ ನುಜ್ಜುಗುಜ್ಜಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಓರ್ವ ಲಾರಿ ಚಾಲಕನಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ.

    ಪೆಂಟ್ರೋಲ್ ಪಂಪ್ ಬಳಿ ರಸ್ತೆಯ ಪಕ್ಕದಲ್ಲಿ ಕಬ್ಬಿಣದ ಎಂಗಲ್‌ಗಳನ್ನು ಹೊತ್ತು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಢಿಕ್ಕಿ ಹೊಡೆದಿದೆ. ಅದರ ಹಿಂದೆ ಚೆಂಡುಹೂವು ತುಂಬಿಕೊಂಡಿದ್ದ ಇನ್ನೊಂದು ಲಾರಿ ಹಿಂದೆ ಢಿಕ್ಕಿ ಹೊಡೆದಿದೆ. ಇದರ ಹಿಂದೆ ಮತ್ತೊಂದು ಕ್ಯಾಂಟರ್ ವಾಹನವು ಢಿಕ್ಕಿ ಹೊಡೆದಿದೆ. ಹೀಗೆ ಒಂದರ ಹಿಂದೆ ಒಂದು ಲಾರಿಗಳು ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

    ರಸ್ತೆಯ ಮಧ್ಯದಲ್ಲಿಯೇ ಆರು ಲಾರಿಗಳ ನಡುವೆ ಅಪಘಾತವಾಗಿದ್ದರಿಂದ ಬಾಗಲಕೋಟೆ-ಇಳಕಲ್ಲ ಮಾರ್ಗದ ವಾಹನ ಸಂಚಾರಕ್ಕೆ ತಡೆವುಂಟಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ರಸ್ತೆಯ ಮಧ್ಯದಲ್ಲಿದ್ದ ಆರು ವಾಹನಗಳನ್ನು ಜೆಸಿಬಿ ಮೂಲಕ ರಸ್ತೆಯಿಂದ ತೆರವುಗೊಳಿಸಿ ವಾಹನಗಳ ಸಂಚಾರ ಸುಗಮಗೊಳಿಸಿದರು. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts