More

    ಸೌಹಾರ್ದಯುತ ಬದುಕು ನಡೆಸಿ

    ಬಾಗಲಕೋಟೆ: ಮಹಾತ್ಮ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಅವರ ಸರಳ ಬದುಕು ಮಾದರಿಯಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಬಿವಿವಿ ಸಂಘದ ನರ್ಸಿಂಗ್ ಮಹಾವಿದ್ಯಾಲಯದ ನವೀಕೃತಗೊಂಡ ನೂತನ ಕಟ್ಟಡದದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ 151ನೇ ಮತ್ತು ಮಾಜಿ ಪ್ರಧಾನಿ ದಿ.ಲಾಲ್ ಬಹಾದೂರ್ ಶಾಸ್ತ್ರಿ 116ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

    ಅವರ ರಾಷ್ಟ್ರಭಕ್ತಿ, ಆತ್ಮಗೌರವ, ಸ್ವಾಭಿಮಾನ ನಮಗೆ ಅನುಕರಣೀಯವಾಗಬೇಕಾಗಿದೆ. ಈ ದೇಶವನ್ನು ಗೌರವಿಸಿ, ಭಾಷೆ-ನಾಡು-ನುಡಿಯನ್ನು ಅರ್ಥೈಸಿಕೊಂಡು ಸೌಹಾರ್ದಯುತವಾಗಿ ಬದುಕು ನಡೆಸುವುದು ಇಂದಿನ ಅಗತ್ಯವಾಗಿದೆ ಎಂದರು.

    ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಹಾಗೂ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಸಂಘದ ಸದಸ್ಯರಾದ ಸಿ.ಎಂ.ಅಥಣಿ, ಮಲ್ಲಪ್ಪಣ್ಣ ಆರಬ್ಬಿ, ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಡಾ.ಪುಟ್ಟರಾಜ ಗವಾಯಿಗಳ ಸ್ಕೂಲ್‌ಆ್ ಮ್ಯೂಜಿಕ್‌ನ ಸಂಯೋಜಕರು ಮತ್ತು ಪ್ರಾಧ್ಯಾಪಕ ಡಾ. ಸಿದ್ದರಾಮಯ್ಯ ಮಠಪತಿ, ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಎಂ.ಬೆಣ್ಣೂರ, ಡಾ.ಕೆ.ವಿ.ಮಠ ಅವರು ಸಂಯೋಜಿಸಿದ ಮಹಾತ್ಮ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾಗಿದ್ದ ವೈಷ್ಣವಜನತೋ ಮತ್ತು ರಘುಪತಿ ರಾಘವ ರಾಜಾರಾಂ ಎನ್ನುವ ಗಾಂಧಿ ಭಜನ್ ಗೀತೆಯನ್ನು ಡಾ.ಪುಟ್ಟರಾಜ ಗವಾಯಿಗಳ ಸ್ಕೂಲ್‌ಆ್ ಮ್ಯೂಜಿಕ್‌ನ ವಿದ್ಯಾರ್ಥಿಗಳು ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts