More

    ಅಂಗವಿಕಲರ ಸಮಸ್ಯೆ ಪರಿಹರಿಸಿ

    ಬಾಗಲಕೋಟೆ: ವಿಳಂಬವಾಗುತ್ತಿರುವ ಅಂಗವಿಕಲರ ಮಾಶಾಸನ ಪ್ರತಿ ತಿಂಗಳು ಜಮೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕ್ರಾಂತಿ ದಿವ್ಯಾಂಗ ರಾಜ್ಯ ಒಕ್ಕೂಟದ ನೇತೃತ್ವದಲ್ಲಿ ಅಂಗವಿಕಲರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಅಂಗವಿಕಲರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಅಂಗವಿಕಲರ ಮುಖಂಡ, ಅಂಗವಿಕಲರ ಬಗ್ಗೆ ಸರ್ಕಾರಗಳು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿವೆ. ಅವರ ಸಮಸ್ಯೆ ಸ್ಪಂದಿಸಿ ಪರಿಹರಿಸಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಅಂಗವಿಕಲರಿಗೆ ತಲುಪಿಲು ಆಸಕ್ತಿ ವಹಿಸುತ್ತಿಲ್ಲ. ಅಂಗವಿಕಲರು ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಅಂಗವಿಕಲರ ಸಮುದಾಯ ಭವನ ನಿರ್ಮಿಸಬೇಕು, ಶ್ರವಣದೋಷ ಅಂಗವಿಕಲರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆಡಿಯೋಗ್ರಾಮ್ ಮತ್ತು ಬೀರೊಟೆಸ್ಟ್ ಮಾಡಬೇಕು, ಆಸ್ಪತ್ರೆಯಲ್ಲಿ ಬುದ್ದಿಮಾಂದ್ಯ ಅಂಗವಿಕಲರಿಗೆ ಪ್ರತ್ಯೇಕ ಎಂಆರ್ ಸ್ಕಾೃನ್ ಸ್ಥಾಪಿಸಬೇಕು. ಪ್ರತಿ ತಾಲೂಕಿನಲ್ಲಿ ವಾರಕ್ಕೆ ಒಂದು ದಿನ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು, ಸರ್ಕಾರದ ಇಲಾಖೆಗಳು ಅಂಗವಿಕಲರಿಗೆ ಮೀಸಲಿರುವ ಶೇ.5 ಅನುದಾನ ಕಡ್ಡಾಯವಾಗಿ ಬಳಕೆ ಮಾಡಬೇಕು. ಜಿಲ್ಲಾ ಡಿಡಿಆರ್‌ಸಿ ಕಾರ್ಯಕ್ರಮ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಆಚರಿಸುವುದು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 32016 ರ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಎಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ರಘು ಹುಬ್ಬಳ್ಳಿ, ಸಂಗಮೇಶ ಭಾವಿಕಟ್ಟಿ, ರಾಜು ತೇರದಾಳ, ಪ್ರಲ್ಹಾದ ಜೋಶಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಅಂಗವಿಕಲರ ಸಮಸ್ಯೆ ಪರಿಹರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts