More

    ಮಾಚಿದೇವರು ಶರಣರ, ವಚನಗಳ ರಕ್ಷಕ

    ಬಾಗಲಕೋಟೆ: ಕಲ್ಯಾಣ ಕ್ರಾಂತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಧೃತಿಗೇಡದ ದೃಢಶರಣ ಎಂದರೆ ಮಡಿವಾಳ ಮಾಚಿದೇವರು. ಶರಣರ, ವಚನಗಳ ರಕ್ಷಕರಾಗಿದ್ದರು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶರಣಬಸವ ಅಪ್ಪಂಗಳ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಿಕ್ಷಿಪ್ತ ಮನಸ್ಸುಗಳ ನಡುವೆ ವಿಶೇಷ ವ್ಯಕ್ತಿತ್ವ ಹೊಂದಿದವರು ಮಾಚಿದೇವರು. ಮಡಿ ಎಂದರೆ ಸಾಯುವ ಹಾಗೂ ಶುದ್ಧೀಕರಿಸುವ ಉಭಯಾರ್ಥಗಳನ್ನು ನೀಡುತ್ತದೆ. ಗೊಡ್ಡು ಸಂಪ್ರದಾಯಗಳನ್ನು, ಸಮಾಜದಲ್ಲಿರುವ ಅನಿಷ್ಟತೆಯನ್ನು ಮಡಿ ಮಾಡಿದ ಮಹಾಶರಣ ಮಡಿವಾಳ ಮಾಚಿದೇವ ಎಂದು ಬಣ್ಣಿಸಿದರು.

    ಮಾಚಿದೇವರ ವ್ಯಕ್ತಿತ್ವ ಮತ್ತು ಅವರ ಅಭಿವ್ಯಕ್ತದ ವಚನಗಳಿಂದ ಬಸವಣ್ಣನವರ ಸಿದ್ಧಾಂತಗಳಿಗೆ ಇನ್ನಿಲ್ಲದ ಅನನ್ಯತೆ ಮತ್ತು ಸೋಪಜ್ಞತೆ ಲಭ್ಯವಾಯಿತು. ಸಾಮಾಜಿಕ ನ್ಯಾಯಕ್ಕೆ ವಚನ ಚಳವಳಿ ದೊಡ್ಡ ಶಕ್ತಿ. ವಚನಗಳ ಮೌಲ್ಯಕ್ಕೆ ಮಾಚಿದೇವರ ಜೀವನ ಆದರ್ಶ. ಸಂಸಾರ ಜನ್ಯದಿಂದ ಸಂಸ್ಕಾರಜನ್ಯ ಅನುಭವದ ಅರಿವೆಯಂತೆ ಇರುವ ಅರಿವನ್ನು ಸಮಾಜಕ್ಕೆ ಅರ್ಪಿಸಿದ ಅಗ್ರಜ. ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮಾಚಿದೇವರು ಜೀವನ ಆಚಾರ, ವಚನ ವಿಚಾರಗಳು ಸಮಾಜೋಧಾರ್ಮಿಕ ಸಂಘರ್ಷದ ಚಾರಿತ್ರಿಕ ಇತಿಹಾಸ ಸೃಷ್ಟಿಸಿವೆ ಎಂದರು. ಶ್ರೀಪೀಠದ ವ್ಯವಸ್ಥಾಪಕ ಬಸನಗೌಡ ಎಂ., ಗುರುಕುಲದ ವಟುಗಳು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts