More

    ಕೋಟೆನಾಡಿನಲ್ಲಿ ಕರೊನಾ ಎರಡನೇ ಅಲೆ ಭೀತಿ…!

    ಬಾಗಲಕೋಟೆ: ಬಾಗಲಕೋಟೆಗೂ ಲಂಡನ್ ಎರಡನೇ ಅಲೆ ಕರೊನಾ ಭೀತಿ ಶುರುವಾಗಿದೆ. ಲಂಡನ್‌ನಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಳ್ಳಿಯೊಂದಕ್ಕೆ ಮಹಿಳೆ ಬಂದಿದ್ದರಿಂದ ಭೀತಿ ಸೃಷ್ಟಿಯಾಗಿದೆ.

    ಲಂಡನ್‌ನಿಂದ ಡಿಸೆಂಬರ್ 14 ಕ್ಕೆ ಬೆಂಗಳೂರಿಗೆ ಬಂದ 35 ವರ್ಷದ ಮಹಿಳೆ ಡಿ. 15 ಅಲ್ಲಿಂದ ನೇರವಾಗಿ ಜಮಖಂಡಿ ತಾಲೂಕಿನ ಗ್ರಾಮವೊಂದಕ್ಕೆ ತೆರಳಿದ್ದಾರೆ. ಗ್ರಾಮದಲ್ಲಿ ಅತ್ತೆ ಮಾವನ ಜೊತೆ ನೆಲೆಸಿದ್ದರು.

    ಮಹಿಳೆ ಡಿ. 21ರವರೆಗೂ ಗ್ರಾಮದಲ್ಲಿದ್ದು ಸೋಮವಾರ ಬೆಳಗಾವಿಯ ತನ್ನ ತವರು ಮನೆಗೆ ತೆರಳಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಮಹಿಳೆಯನ್ನು ಕ್ವಾರಂಟೈನ್ ಮಾಡಲಾಗಿದೆ. ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಬಾಗಲಕೋಟೆ ಜಿಲ್ಲಾಡಳಿತ ವರದಿ ನಿರೀಕ್ಷೆಯಲ್ಲಿದೆ.

    ಇತ್ತ ಲಂಡನ್‌ನಿಂದ ಮಹಿಳೆ ಬಂದಿರುವ ಹಿನ್ನೆಲೆ ಜಮಖಂಡಿ ತಾಲೂಕಿನ ಆ ಗ್ರಾಮಕ್ಕೆ ತೆರಳಿದ ಆರೋಗ್ಯ ಇಲಾಖೆ ತಂಡ ಗ್ರಾಮದಲ್ಲಿ ನೆಲೆಸಿರುವ ಮಹಿಳೆಯ ಅತ್ತೆ, ಮಾವ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಿದೆ. ಅಲ್ಲದೇ ಗ್ರಾಮದಲ್ಲಿ ಲಂಡನ್ ನಿಂದ ಬಂದಿರುವ ಮಹಿಳೆ ಹಾಗೂ ಗ್ರಾಮದಲ್ಲಿ ಇರುವ ಅವರ ಅತ್ತೆ, ಮಾವನ ಟ್ರಾವಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆಹಾಕುತ್ತಿದೆ. ಮತ್ತೊಂದೆಡೆ ಮಹಿಳೆ ಲಂಡನ್‌ನಿಂದ ಜಮಖಂಡಿಗೆ ಬಂದು ಬೆಳಗಾವಿಗೆ ಹೋದ ಹಿನ್ನೆಲೆ ಬಾಗಲಕೋಟೆ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ ಏರ್‌ಪೋರ್ಟ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವ ಬಾಗಲಕೋಟೆ ಜಿಲ್ಲಾಡಳಿತ ಲಂಡನ್ ಹಾಗೂ ಯುರೋಪ್ ದೇಶಗಳಿಂದ ಬಾಗಲಕೋಟೆ ಮೂಲದ ಯಾರೇ ಬಂದರೂ ತಿಳಿಸಲು ಸೂಚಿಸಿದೆ.

    ಜೊತೆಗೆ ಜಿಲ್ಲೆಯ ಎಲ್ಲ ಪಿಡಿಒ, ಆಶಾ ಕಾರ್ಯಕರ್ತೆಯರ ಮೂಲಕ ಬೂತ್‌ಮಟ್ಟದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ, ಆಯಾ ತಾಲೂಕು ತಹಸೀಲ್ದಾರ, ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸದ್ಯ ಲಂಡನ್‌ನಿಂದ ಬಂದ ಜಮಖಂಡಿ ಮಹಿಳೆ ಬಗ್ಗೆ ಹೆಚ್ಚಿನ ಟ್ರಾವೆಲ್ ಹಿಸ್ಟರಿ ಹಾಗೂ ಸಂಪರ್ಕಿತರ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts