ಲಾಕ್​ಡೌನ್​ನಿಂದ ಹಳ್ಳಿಗಳ ರಸ್ತೆ ಬಂದ್: ಆಸ್ಪತ್ರೆಗೆ ಸಾಗಿಸಲಾಗದೇ ಮಾರ್ಗಮಧ್ಯೆ ವೃದ್ಧೆ ಸಾವು

Woman Death
Published on

ಬಾಗಲಕೋಟೆ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ರಸ್ತೆ ಬಂದ್​ ಮಾಡಿರುವ ಪರಿಣಾಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸಾವಿಗಿಡಾಗಿರುವ ಘಟನೆ ತೇರದಾಳದಲ್ಲಿ ಭಾನುವಾರ ನಡೆದಿದೆ.

ತೇರದಾಳ ಪಟ್ಟಣದ ನಿವಾಸಿ ನಿರ್ಮಲಾ ತೆಳಗಿನಮನಿ(61) ಚಿಕಿತ್ಸೆ ಸಿಗದೆ ಮೃತಪಟ್ಟ ಮಹಿಳೆ. ಹೃದಯದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೇರದಾಳದಿಂದ ಬೆಳಗಾವಿ ಜಿಲ್ಲೆ ಹಾರೂಗೇರಿ ಗ್ರಾಮದ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದರು.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾವುದೇ ಮಾರ್ಗವಾಗಿ ಹೋದರು ಕಲ್ಲು, ಮುಳ್ಳು ಹಾಗೂ ಮಣ್ಣು ಹಾಕಿ ಗ್ರಾಮದ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಎಲ್ಲಾ ಕಡೆ ಸುತ್ತಿದರೂ ಹಾರೋಗೇರಿಗೆ ಹೋಗಲು ಅವಕಾಶ ಸಿಗದೆ, ಮಾರ್ಗದಲ್ಲೇ ಮಹಿಳೆ ಅಸುನೀಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net