More

    ಶೂನ್ಯ ಸ್ಥಿತಿಯಲ್ಲಿ ರಾಜ್ಯ ಕಸಾಪ

    ಬಾಗಲಕೋಟೆ: ಸಾಹಿತ್ಯ, ಸಂಸ್ಕೃತಿ ಉಳಿಸುವ ಚುಟುವಟಿಕೆಯಲ್ಲಿ ತೋಡಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಭ್ರಷ್ಟಾಚಾರದಿಂದ ನಲುಗಿ ಹೋಗಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಹೊಸ ಚೈತನ್ಯ ನೀಡುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ, ಅಣ್ಣ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮುಲಾಲಿ ಹೇಳಿದರು.

    ರಾಜ್ಯದಲ್ಲಿ 4 ಲಕ್ಷ ಜನ ಸದಸ್ಯರು ಇದ್ದಾರೆ. 3.45 ಲಕ್ಷ ಮತದಾರರು ಇದ್ದಾರೆ. ಆದರೆ, ಕಸಾಪ ನಿವೃತ್ತ ನೌಕರರ ತಾಣವಾಗಿದೆ. ಸಾಹಿತ್ಯ ಚಟುವಟಿಕೆಗಿಂತ ಗಂಜಿ ಕೇಂದ್ರವಾಗಿ ಮಾರ್ಪಟ್ಟಿದೆ. ಸದ್ಯಕ್ಕೆ ಶೂನ್ಯ ಸ್ಥಿತಿಯಲ್ಲಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಾಮಾಣಿಕವಾಗಿ ಸೇವೆ ಮಾಡುವ ಆಕಾಂಕ್ಷಿಗಳಿಗೆ ಅವಕಾಶ ಸಿಗಬೇಕು. ಹೀಗಾಗಿ ನನಗೆ ಕಸಾಪ ಮತದಾರರು ಬೆಂಬಲ ನೀಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಾಜ್ಯವು ಗಡಿ ಗಲಾಟೆ, ಅಂತರ ರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದುಸ್ಥಿತಿ ಸೇರಿ ಹಲವು ಸಮಸ್ಯೆಗಳು ಕಾಡುತ್ತಿವೆ. ಕಸಾಪ ಚುಕ್ಕಾಣೆ ಹಿಡಿದವರ ನಿರ್ಲಕ್ಷೃದಿಂದ ನವ್ಯ ಕಾವ್ಯ, ಬಂಡಾಯದ ಪರಂಪರೆ ಹೊಂದಿರುವ ಕನ್ನಡ ನಾಡಿನ ಸಾಹಿತ್ಯ ಲೋಕ ನೂರೆಂಟು ವಿಘ್ನಗಳನ್ನು ಎದುರಿಸುತ್ತಿವೆ ಎಂದು ದೂರಿದರು. ಮುಖಂಡರಾದ ದುರುಗೇಶ ಉಪ್ಪಾರ, ತರುಣಕುಮಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಶೂನ್ಯ ಸ್ಥಿತಿಯಲ್ಲಿ ರಾಜ್ಯ ಕಸಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts