More

    ಕನಕದಾಸರ ಬದುಕು ನಮಗೆಲ್ಲ ಆದರ್ಶ

    ಬಾಗಲಕೋಟೆ: ಕನಕದಾಸರು ಮಾನವ ಜನಾಂಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯದ ಮೂಲಕ ಧರ್ಮದ ಹಾದಿಯಲ್ಲಿ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಅವರ ಆದರ್ಶಗಳಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದೇಶದಲ್ಲಿ ಕನಕದಾಸರು, ಬಸವಣ್ಣನವರು, ಕಾಳಿದಾಸರು ಮನಕುಲಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಸಂದೇಶಗಳು ನೀಡಿದ್ದಾರೆ. ಇವರೆಲ್ಲರ ಗುರಿ ಒಂದೇ ಆಗಿತ್ತು. ಆದರೆ, ಹೇಳುವ ಪದ್ಧತಿ ಬೇರೆ ಬೇರೆಯಾಗಿತ್ತು ಎಂದರು.
    ಭಕ್ತ ಕನಸದಾಸರ ಬದುಕು ನಮಗೆಲ್ಲ ಆದರ್ಶ. ಇಡೀ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಜತೆಗೆ ಅವರ ಮಾರ್ಗವನ್ನು ಪಾಲಿಸಬೇಕು. ಕನ್ನಡ ನಾಡಿಗೆ ಕನಕ ದಾಸರ ಕೊಡಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

    ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಿಗಿ, ನಗರಸಭೆ ಮಾಜಿ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯಕರ, ಉಪಾಧ್ಯಕ್ಷ ರಾಜು ರೇವಣಕರ, ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ವೀರಣ್ಣ ಹಳೇಗೌಡರ, ನಗರಸಭೆ ಸದಸ್ಯರಾದ ಸಂಜೀತ ಕುರುಬರ, ಮುತ್ತು ಕುರುಬರ, ನಗರ ಅಧ್ಯಕ್ಷ ಬಸವರಾಜ ಅವರಾದಿ, ಮುಖಂಡರಾದ ಗುಂಡು ಶಿಂಧೆ, ಈರಪ್ಪ ಐಕೂರ, ಜಯಂತ ಕುರಂದವಾಡ ಸೇರಿ ಇತರರು ಇದ್ದರು.

    ಜಿಲ್ಲಾಡಳಿತದಿಂದ ಸರಳ ಆಚರಣೆ
    ಜಿಲ್ಲಾಡಳಿತದ ವತಿಯಿಂದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಜಿಪಂ ಸಭಾಭವನದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಎನ್., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಉಪಸ್ಥಿತರಿದ್ದರು.

    ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ
    ಬಾಗಲಕೋಟೆ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ವಿ.ಪಿ. ಹೊಸಕೇರಿ, ಉಪನ್ಯಾಸಕ ಎಸ್.ಎಸ್.ಮುತ್ತಗಿ, ಪ್ರಶಿಕ್ಷಣಾರ್ಥಿಗಳಾದ ಕಾವೇರಿ ಕೆ., ಮಾಳಮ್ಮ ತುಮಕೂರು, ಸುನಿಲ ಪಾಟೀಲ ಉಪಸ್ಥಿತರಿದ್ದರು. ಸಂಗೀತಾ ಬಾಳಿಕಾಯಿ, ಭರತೇಶ ಬಳಿಗಾರ ಪ್ರಾರ್ಥಿಸಿದರು. ಯಮುನಾ ಘಂಟಿ ಸ್ವಾಗತಿಸಿದರು. ರಾಧಾ ಗುದಗಿ ನಿರೂಪಿಸಿದರು. ಎಂ.ವೀಣಾ ವಂದಿಸಿದರು.

    ತೋವಿವಿಯಲ್ಲಿ
    ಬಾಗಲಕೋಟೆ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಕುಲಸಚಿವ ಡಾ.ಟಿ.ಬಿ.ಅಲ್ಲೋಳ್ಳಿ, ಡಾ.ಎಂ.ಎಸ್. ಕುಲಕರ್ಣಿ, ಡಾ.ಎಸ್.ಐ.ಅಥಣಿ, ಡಾ.ಕುಲಪತಿ ಹಿಪ್ಪರಗಿ, ವಿ.ಎಂ. ಭಜಂತ್ರಿ, ಡಾ.ಬಾಲಾಜಿ ಕುಲಕರ್ಣಿ ಸೇರಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts