More

    ಮಕ್ಕಳ ಹಕ್ಕುಗಳ ರಕ್ಷಣೆಗೆ ಶ್ರಮ

    ಬಾಗಲಕೋಟೆ: ಸಾಮಾಜಿಕ, ಆರ್ಥಿಕವಾಗಿ ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಪರಿವರ್ತಿಸುವ ಕೆಲಸ ಬಾಲ ನ್ಯಾಯ ಮಂಡಳಿಯಿಂದ ಮಾಡಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ಅಭಿಪ್ರಾಯಪಟ್ಟರು.

    ನವನಗರದ ಬಾಲಕರ ಬಾಲ ಮಂದಿರದಲ್ಲಿ ಬಾಲ ನ್ಯಾಯ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸ್ಥಾಪಿಸಲಾದ ನವೀಕೃತ ಮಕ್ಕಳ ಸ್ನೇಹಿ ಬಾಲ ನ್ಯಾಯ ಮಂಡಳಿ ಮತ್ತು ವಿಡಿಯೋ ಸಮಾಲೋಚನಾ ಸೌಕರ್ಯಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಮಕ್ಕಳ ಸರ್ವೋತ್ತಮ ಅಭಿವೃದ್ಧಿಗಾಗಿ ಮಕ್ಕಳ ಹಕ್ಕುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿ ಜಾರಿಗೊಳಿಸಲು ಬಾಲ ನ್ಯಾಯ ಮಂಡಳಿ ಶ್ರಮಿಸುತ್ತಿದೆ. ಈ ನ್ಯಾಯ ಮಂಡಳಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ನವೀಕರಣಗೊಳಿಸುವ ಮೂಲಕ ಉತ್ತಮ ವಾತಾವರಣ ಕಲ್ಪಿಸಲಾಗಿದ್ದು, ಇದರಿಂದ ಮಕ್ಕಳ ಪರಿವರ್ತನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

    2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ. ಮಾತನಾಡಿ, ಮಕ್ಕಳ ಸ್ನೇಹಿ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಬಾಲ ನ್ಯಾಯ ಮಂಡಳಿಯನ್ನು ನವೀಕರಣಗೊಳಿಸಿದ್ದು, ಮಕ್ಕಳ ಪರಿವರ್ತನೆಗೆ ಇದು ಪೂರಕವಾಗಿದೆ ಎಂದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತನಾಡಿ, ಸರ್ಕಾರ ಜಾರಿಗೊಳಿಸಿರುವ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
    ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಪ್ರಕಾಶ ವಿ.ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ನಾಗರಾಜ, ಬಾಲ ನ್ಯಾಯಮಂಡಳಿಯ ಪರಿವೀಕ್ಷಣಾಧಿಕಾರಿ ರತ್ನಾ ಬೂದಿಹಾಳ, ಸದಸ್ಯೆ ಸುಜಾತಾ ಕೋರಿ ಸೇರಿ ಇತರರು ಉಪಸ್ಥಿತರಿದ್ದರು.

    ಮಕ್ಕಳ ಸರ್ವತೋಮುಖ ಬೆಳವಣಿಗೆ, ವ್ಯಕ್ತಿತ್ವ ವಿಕಾಸ, ಮಾನವೀಯ ಮೌಲ್ಯದ ಬೆಳವಣಿಗೆ ಹಾಗೂ ಪರಿವರ್ತನೆಗೆ ಬಾಲ ನ್ಯಾಯ ಮಂಡಳಿ ಶ್ರಮಿಸುತ್ತಿದೆ. ಮಕ್ಕಳ ಮನೋವಿಕಾಸ, ಪರಿವರ್ತನೆಗೆ ಉತ್ತಮ ವಾತಾವರಣ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಸ್ನೇಹಿಯಾಗಿ ಬಾಲ ನ್ಯಾಯಮಂಡಳಿಯನ್ನು ನವೀಕರಿಸಲಾಗಿದೆ. ವಿಡಿಯೋ ಸಮಾಲೋಚನೆಗೂ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ.
    ಪಿ.ಎನ್.ಪಾಟೀಲ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts