More

    ಏಪ್ರಿಲ್‌ನಲ್ಲಿ ಚಲನ ಚಿತ್ರೋತ್ಸವ

    ಬಾಗಲಕೋಟೆ: ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಡಿಸೆಂಬರ್‌ನಲ್ಲಿ ಏರ್ಪಡಿಸುತ್ತಿದ್ದೆವು. ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಚಲನ ಚಿತ್ರೋತ್ಸವವನ್ನು ಏಪ್ರಿಲ್‌ನಲ್ಲಿ ನಡೆಸಲಾಗುವುದು ಎಂದು ಖ್ಯಾತ ಚಲನಚಿತ್ರ ನಟ, ಕನ್ನಡ ಚಿತ್ರರಂಗದ ಕಲಾವಿದರ ಸಂಘದ ಖಜಾಂಚಿ ದೊಡ್ಡಣ್ಣ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾನಿಪ ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಲನ ಚಿತ್ರೋತ್ಸವ ಅತ್ಯಂತ ಯಶಸ್ಸಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆದಿದೆ ಎಂದರು.

    ಹೆಮ್ಮಾರಿ ಕರೊನಾ ಚಿತ್ರರಂಗದ ಮೇಲೆ ದೊಡ್ಡಮಟ್ಟದಲ್ಲಿ ಕರಿನೆರಳು ಆವರಿಸುವಂತೆ ಮಾಡಿತು. ಕಾರ್ಮಿಕರು, ಕಲಾವಿದರು ಸಂಕಷ್ಟ ಎದುರಿಸಿದರು. ಆ ಸಂದರ್ಭದಲ್ಲಿ ನೆರವಿನ ಮಹಾಪೂರ ಹರಿದು ಬಂದಿತು. ಸಚಿವ ಗೋಪಾಲಯ್ಯ 1 ಸಾವಿರ ಮೂಟೆ ಅಕ್ಕಿ ಕಳುಹಿಸಿದರು. ಪ್ರತಿಯೊಬ್ಬರಿಗೆ ವ್ಯವಸ್ಥಿತವಾಗಿ ತಲುಪುವಂತೆ ಮಾಡಲಾಯಿತು ಎಂದು ತಿಳಿಸಿದರು.

    ಕೋವಿಡ್ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳು ಸ್ತಬ್ಧಗೊಂಡಿವೆ. ಸರ್ಕಾರ ನಿಯಮಾನುಸಾರ ಪರವಾನಗಿ ನೀಡಿದೆ. ಆದರೆ, ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಬೇಕು. ಸಬ್ಸಿಡಿ ಹೆಚ್ಚಳ ಮಾಡಬೇಕು ಅಂತ ಸರ್ಕಾರಕ್ಕೆ ಫೆಬ್ರವರಿಯಲ್ಲಿ ಮನವಿ ಸಲ್ಲಿಸಲಿದ್ದೇವೆ ಎಂದರು.

    ಕನ್ನಡ ತಾಯಿ ಇದ್ದಂತೆ. ತಾಯಿ ಭಾಷೆ ಯಾರೂ ಮರೆಯಬಾರದು. ಇಂಗ್ಲಿಷ್ ಭಾಷೆಗೆ ಮಾರು ಹೋಗಿ ಕನ್ನಡ ಬಗ್ಗೆ ತಾತ್ಸಾರ ಮಾಡಬಾರದು. ಚಿತ್ರರಂಗದಲ್ಲಿ ಡ್ರಗ್ಸ್ ನಂಟು ನಮ್ಮ ಕಾಲದಲ್ಲಿ ಇರಲಿಲ್ಲ. ಇದಕ್ಕೆ ಹೆಚ್ಚು ಉತ್ತರ ನೀಡುವುದಿಲ್ಲ. ರಾಜಕೀಯದವರು ಉತ್ತರಿಸಬೇಕು ಎಂದ ಅವರು, ಚಿತ್ರರಂಗದೊಂದಿಗೆ 40 ವರ್ಷ ಒಡನಾಟ ಬಿಚ್ಚಿಟ್ಟರು. ನ್ಯಾಯವಾದಿ ಎಸ್.ಎಸ್. ಮಿಟ್ಟಲಕೋಡ, ಕಾನಿಪ ಜಿಲ್ಲಾಧ್ಯಕ್ಷ ಸುಭಾಶ ಹೊದ್ಲೂರ ಇದ್ದರು.



    ಏಪ್ರಿಲ್‌ನಲ್ಲಿ ಚಲನ ಚಿತ್ರೋತ್ಸವ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts