More

    ನೆಪ ಹೇಳಬೇಡಿ ಕುಡಿಯುವ ನೀರು ಪೂರೈಕೆಯಾಗಲಿ

    ಬಾಗಲಕೋಟೆ: ಹೆರಕಲ್ಲ ಬಳಿ ಬಿಟಿಡಿಎ ವತಿಯಿಂದ ನಿರ್ಮಾಣವಾಗಿರುವ ಶಾಶ್ವತ ಕುಡಿಯುವ ನೀರು ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಮುಗಿಸಿ ಒಂದು ತಿಂಗಳೊಳಗೆ ನಗರಕ್ಕೆ ನೀರು ಪೂರೈಕೆಯಾಗುವಂತೆ ಮಾಡಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಮಠ ಬಿಟಿಡಿಎ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಸೋಮವಾರ ಹೆರಕಲ್ಲ ಬ್ಯಾರೇಜ್ ಬಳಿಯ ನೀರೆತ್ತುವ ಜಾಕ್‌ವೆಲ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. ನೀರು ಎತ್ತುವ ಜಾಕ್‌ವೆಲ್ ಸ್ಥಳದಲ್ಲಿ ಕೆಲವು ಲೋಪದೋಷಗಳು ಕಂಡು ಬಂದವು. ತಕ್ಷಣ ಇದನ್ನು ಸರಿಪಡಿಸಬೇಕು ಎಂದರು.

    ಈಗಾಗಲೇ ಜಾಕ್‌ವೆಲ್ ನಿರ್ಮಾಣವಾಗಿ ಅನೇಕ ವರ್ಷಗಳೇ ಕಳೆದಿವೆ. ಇನ್ನೂ ನೀರು ಪೂರೈಕೆ ಮಾಡುವ ಕೆಲಸ ಆಗುತ್ತಿಲ್ಲ. ಹೀಗೆ ಮುಂದುವರಿದಲ್ಲಿ ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಅಧಿಕಾರಿಗಳು ನೆಪ ಹೇಳುವುದನ್ನು ಬಿಟ್ಟು ಕೆಲಸ ಮಾಡಬೇಕು. ತಕ್ಷಣ ನೀರೆತ್ತುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದರು.

    ಜಾಕ್‌ವೆಲ್ ನಿರ್ಮಾಣಕ್ಕೆ ಎಷ್ಟು ಕೋಟಿ ಖರ್ಚು ಆಗಿದೆ. ಎಷ್ಟು ಮೀಟರ್ ಪೈಪ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಬಿಟಿಡಿಎ ಇಂಜಿನಿಯರ್ ಎ.ಎಚ್.ಪಾಟೀಲ 14370 ಮೀಟರ್ ಪೈಪ್ ಅಳವಡಿಸಲಾಗಿದೆ. ಅಂದಾಜು 14 ಕಿ.ಮೀ.ವರೆಗೆ ಹೆರಕಲ್ ನೀರೆತ್ತುವ ಜಾಕ್‌ವೆಲ್‌ದಿಂದ ಆನದಿನ್ನಿ ಜಾಕವೆಲ್‌ವರೆಗೆ ನೀರು ಪೂರೈಸುವ ಪೈಪ್ ಅಳವಡಿಸಲಾಗಿದೆ ಎಂದು ವಿವರಿಸಿದರು.

    ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ.ಎಚ್.ಪಾಟೀಲ, ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ, ಬಿಟಿಡಿಎ ಸದಸ್ಯರಾದ ಮೋಹನ್ ನಾಡಗೌಡ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts