More

    ಶರಣರ ತತ್ವಾದರ್ಶ ಪಾಲಿಸಿ

    ಬಾಗಲಕೋಟೆ: ಹಳ್ಳ, ಕೊಳ್ಳ, ನದಿಗಳು ಸಮುದ್ರ ಸೇರಿ ಹೇಗೆ ಒಂದೇ ಆಗುತ್ತವೆಯೋ ಅದರಂತೆ ಎಲ್ಲ ಶರಣರ ತತ್ವಾದರ್ಶಗಳು ಬೇರೆ ಬೇರೆಯಾಗಿದ್ದರೂ ಅವರ ಅಂತಿಮ ಸಂದೇಶ ಒಂದೇಯಾಗಿದೆ. ಅಂತಹ ಶರಣರನ್ನು ನೆನೆಯುವುದೇ ಘಣ ಮುಕ್ತಿ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ವೇಮನರು ಮಹಾಯೋಗಿಯಾಗಬೇಕಾದರೆ ಅವರ ಹಿಂದೆ ಶಕ್ತಿಯಾಗಿದ್ದವರು ಹೇಮರೆಡ್ಡಿ ಮಲ್ಲಮ್ಮ. ವೇಮನರು ಆರೂಢಾವಸ್ಥೆ ಕಡೆ ಹೋದರೆ ಮಲ್ಲಮ್ಮ ಶರಣ ಸಂಸ್ಕೃತಿ ಕಡೆ ವಾಲಿದ್ದರು. ಆದರೆ, ಇಬ್ಬರ ಗುರಿ ಒಂದೇ ಆಗಿತ್ತು. ಇಂತಹ ಮಹಾತ್ಮರ ತತ್ವದಾರ್ಶಗಳನ್ನು ಅಳವಡಿಸಬೇಕು ಎಂದರು.

    ಸಿ.ಡಿ.ಬೆನ್ನೂರ ಉಪನ್ಯಾಸ ನೀಡಿ, ಸಂಸಾರದ ಜಂಜಾಟದಲ್ಲಿ ನೆಮ್ಮದಿ ಇಲ್ಲದೆ ಅಲೆದಾಡುವ ಮನುಷ್ಯನಿಗೆ ಸುಖ, ಸಮೃದ್ಧಿಗಾಗಿ ಜೀವನ ಸಾಗಿಸುವ ಕಲೆ ತಿಳಿಸಿಕೊಡುವುದು ಶರಣರ ಗುರಿಯಾಗಿತ್ತು. ಅದನ್ನೆ ನೀಡಿದ ಅನೇಕ ಸಂತ, ಶರಣ, ಯೋಗಿಗಳ ಸಾಲಿನಲ್ಲಿ ಮಹಾಯೋಗಿ ವೇಮನರು ಒಬ್ಬರು ಎಂದು ಹೇಳಿದರು.

    ವೇಮನರು ತಾಳೆ ಗರಿಯಲ್ಲಿ ರಚಿಸಿದ ಅಸಂಖ್ಯಾತ ವಚನಗಳು ಬೇರೆ ಭಾಷೆಯಲ್ಲಿವೆ. ಹೀಗಾಗಿ ಅವುಗಳಲ್ಲಿ ಕೆಲವೊಂದು ಮಾತ್ರ ನಮಗೆ ದೊರೆತಿವೆ. ಅಂತಹ ವಚನಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಿದ್ದು, ವಿದೇಶಿಯ ನಾಗರಿಕ ಪಿ.ಸಿ. ಬ್ರೌನ್ ವೇಮನರ ವಚನಗಳಿಗೆ ಮಾರುಹೋಗಿದ್ದರು. ಕನ್ನಡ ಭಾಷೆಯನ್ನು ಕಲಿತು ತೆಲುಗು ಭಾಷೆಯಲ್ಲಿರುವ ವಚನಗಳನ್ನು ಕನ್ನಡಕ್ಕೆ ಅನುವಾದಿಸಿದರು ಎಂದು ಹೇಳಿದರು.

    ಜಿಪಂ ಸಿಇಒಒ ಟಿ.ಭೂಬಾಲನ್, ಶಿಕ್ಷಕ ಸಂಜಯ್ ಮೇಲಿನಮನಿ, ಹೇಮವೇಮ ಸಂಸ್ಥೆ ಅಧ್ಯಕ್ಷ ಡಾ.ಇ.ಆರ್. ಹಲಗಲಿ, ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸಿ.ಕೆ. ಒಂಟಗೂಡಿ, ನಾರಾಯನ ಹಾದಿಮನಿ, ಸುರೇಶ ನಾಲತವಾಡ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಉಪನಿರ್ದೇಶಕಿ ಹೇಮಲತಾ ಎನ್. ಉಪಸ್ಥಿತರಿದ್ದರು. ಜಾಸ್ಮೀನ್ ಕೀಲ್ಲೆದಾರ ಸ್ವಾಗತಿಸಿದರು. ಈಶ್ವರ ಕೋಣಪ್ಪನವರ ವಂದಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts