More

    ಕಾಮಗಾರಿ ಕಳಪೆಯಾಗಿದ್ದರೆ ಸಹಿಸಲ್ಲ

    ಬಾಗಲಕೋಟೆ: ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ 1.60 ಕೋಟಿ ರೂ., ಮನ್ನಿಕಟ್ಟಿ ಗ್ರಾಮದಲ್ಲಿ 59.68 ಲಕ್ಷ ರೂ. ಹಾಗೂ ಕಡ್ಲಿಮಟ್ಟಿ ಗ್ರಾಮದಲ್ಲಿ 41.08 ಲಕ್ಷ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಕಲ್ಪಿಸುವ ಕಾಮಗಾರಿಗೆ ಶಾಸಕ ಡಾ.ವೀರಣ್ಣ ಚರಂತಿಮಠ ಶನಿವಾರ ಭೂಮಿಪೂಜೆ ನೆರವೇರಿಸಿದರು.

    ಬೆನಕಟ್ಟಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ಪ್ರತಿ ಮನೆಗೂ ನಳಗಳ ಮೂಲಕ ನೀರು ಒದಗಿಸುವುದು ಕೇಂದ್ರ, ರಾಜ್ಯ ಸರ್ಕಾರ ಉದ್ದೇಶವಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಸರಿಯಾಗಿ ಕೈಗೊಳ್ಳದ ಪರಿಣಾಮ ಜಮಖಂಡಿ ತಾಲೂಕಿನ ಗ್ರಾಮವೊಂದರಲ್ಲಿ ಗ್ರಾಮಸ್ಥರು ಕೆಲಸವನ್ನೇ ಸ್ಥಗಿತಗೊಳಿಸಿದ್ದಾರೆ. ಇಲ್ಲಿ ಹಾಗಾಗದಂತೆ ನೋಡಿಕೊಳ್ಳಬೇಕು ಎಂದರು.

    ಗ್ರಾಮಸ್ಥರು ಗುತ್ತಿಗೆದಾರರಿಂದ ಒಳ್ಳೆಯ ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರು ಸಹ ಉತ್ತಮ ಕೆಲಸ ನಿರ್ವಹಿಸಬೇಕು. ಕಳಪೆ ಕಾಮಗಾರಿಯಾದರೆ ಸಹಿಸುವುದಿಲ್ಲ. ಇಲಾಖೆಯ ಅಧಿಕಾರಿಗಳು ಉಸ್ತುವಾರಿ ವಹಿಸಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಮುಖಂಡರಾದ ಎಚ್.ಜಿ.ಬಾಳಕ್ಕನವರ, ಮೇಲಪ್ಪ ಬೆಣ್ಣೂರ, ಹುಲಗಪ್ಪ ಪಾತ್ರೋಟಿ, ಬೆನಕಟ್ಟಿ ಗ್ರಾಪಂ ಅಧ್ಯಕ್ಷ ವೇಮರಡ್ಡಿ ಯಡಹಳ್ಳಿ, ಉಪಾಧ್ಯಕ್ಷೆ ರೇಣುಕಾ ಪಾದನಕಟ್ಟಿ, ಸದಸ್ಯರಾದ ವಿನೋದ ನಾಯಕ, ವೆಂಕಟೇಶ ದಾಸಪ್ಪನವರ, ರೇಣುಕಾ ಆಲೂರ, ಬಾಲವ್ವ ಮಾದರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ಮುಖಂಡರಾದ ರಾಜು ಮುದೇನೂರ, ರಂಗಣ್ಣ ಬೆಣ್ಣೂರ, ಎಂ.ಎಸ್.ಗೌಡರ ಉಪಸ್ಥಿತರಿದ್ದರು.





    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts