More

    ಆಶಾಕಾರ್ಯಕರ್ತೆಯರ ಶ್ರಮ ಅವಿಸ್ಮರಣೀಯ

    ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಜಿಲ್ಲೆಯಲ್ಲಿರುವ ಒಟ್ಟು 1409 ಆಶಾ ಕಾರ್ಯಕರ್ತೆಯರ ಪೈಕಿ 667 ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳಂತೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಧಾನ ಪರಿಷತ್ತ ವಿ.ಪಕ್ಷ ನಾಯಕ ಎಸ್.ಆರ್.ಪಾಟೀಲ ಚಾಲನೆ ನೀಡಿದರು.

    ನವನಗರದ ಬಿಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯ ಸಭಾಭವನದಲ್ಲಿ ಬುಧವಾರ ಸಾಂಕೇತಿಕವಾಗಿ 22 ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ.ಗಳ ಪ್ರೋತ್ಸಾಹಧನ ಚೆಕ್‌ನ್ನು ವಿತರಿಸಿ ಮಾತನಾಡಿ ಅವರು, ಕೋವಿಡ್-19 ನಿಯಂತ್ರಿಸುವ ಕಾರ್ಯಕ್ಕೆ ತಮ್ಮ ಜೀವನವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿತ್ತು. ಇದನ್ನು ಸಹಕಾರ ಇಲಾಖೆಯ ಮೂಲಕ ಭರಿಸಲು ನಿರ್ಧರಿಸಿದ ಹಿನ್ನಲೆಯಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನವರು 20 ಲಕ್ಷ ರೂ.ಗಳನ್ನು ನೀಡಲು ಮುಂದಾಗಿದೆ. ಉಳಿದ ಹಣವನ್ನು ಬೇರೆ ಬೇರೆ ಸಹಕಾರಿ ಸಂಘಗಳ ಮೂಲಕ ಭರಿಸುವ ಕಾರ್ಯವನ್ನು ಸಹಕಾರ ಇಲಾಖೆ ಮಾಡುತ್ತಿದೆ. ಕೊರನಾ ಸೇನಾನಿಗಳಾಗಿ ಶ್ರಮಿಸುತ್ತಿರುವ ಆಶಾಕಾರ್ಯಕರ್ತೆಯರ ಕಾರ್ಯ ಸ್ಮರಣೀಯ ಎಂದರು.

    ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಬಿಡಿಸಿಸಿ ಬ್ಯಾಂಕ್ ಪ್ರಾರಂಭದಲ್ಲಿಯೇ ಕೋವಿಡ್-19 ಪರಿಹಾರ ನಿಧಿಗೆ 50 ಲಕ್ಷ ರೂ.ಗಳನ್ನು ನೀಡಿದೆ. ಬ್ಯಾಂಕಿನಿಂದ ಕೊಡಮಾಡಿದ ಈ 50 ಲಕ್ಷ ರೂ.ಗಳಲ್ಲಿ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಹ ಪರಿಹಾಧನಕ್ಕಾಗಿ ತಮ್ಮ 1 ದಿನದ ಸಂಬಳದಿಂದ ಒಟ್ಟು 10 ಲಕ್ಷ ರೂ.ಗಳನ್ನು ಸಂಗ್ರಹಿಸಿ ನೀಡಿದ್ದಾರೆ ಎಂದು ತಿಳಿಸಿದರು.

    ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಜಕುಮಾರ ಸರನಾಯಕ ಮಾತನಾಡಿ, ರಾಜ್ಯ ಸರ್ಕಾರ ತೀರ್ಮಾನಿಸಿದಂತೆ ಜಿಲ್ಲೆಯಲ್ಲಿರುವ ಒಟ್ಟು 1409 ಆಶಾ ಕಾರ್ಯಕರ್ತೆಯರ ಪೈಕಿ 667 ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನವನ್ನು ಬ್ಯಾಂಕಿನ ವತಿಯಿಂದ ನೀಡಲು ತೀರ್ಮಾನಿಸಿದ್ದು, ಸಾಂಕೇತಿಕವಾಗಿ ಕೆಲವರಿಗೆ ಚೆಕ್ ನೀಡಲಾಗಿದೆ. ಇನ್ನು ಎರಡು ದಿನಗಳಲ್ಲಿ ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು. ಉಳಿದ ಆಶಾ ಕಾರ್ಯಕರ್ತೆಯರಿಗೂ ಸಹ ಬೇರೆ ಬೇರೆ ಎಲ್ಲ ಸಹಕಾರಿ ಬ್ಯಾಂಕ್, ಪತ್ತಿನ ಸಂಘ, ಸೌಹಾರ್ದ ಬ್ಯಾಂಕ್‌ಗಳ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಎಲ್.ಉದಪುಡಿ, ನಿರ್ದೇಶಕರಾದ ಆರ್.ಎಸ್.ತಳೇವಾಡ, ಕುಮಾರಗೌಡ ಜನಾಲಿ, ಬ್ಯಾಂಕಿನ ಸಿಇಒ ಎಸ್.ಎಂ.ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಪ್ರೋತ್ಸಾಯಧನ ವಿತರಣೆ ವಿವರ
    ರಾಜ್ಯ ಸರ್ಕಾರ ತೀರ್ಮಾಣಿಸಿದಂತೆ ಸಹಕಾರ ಇಲಾಖೆಯ ಮೂಲಕ ಭರಿಸಲಾಗುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡುವ ಪ್ರೋತ್ಸಾಧಹನವನ್ನು ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ ಮೂಲಕ ಪ್ರತಿ ಆಶಾ ಕಾರ್ಯಕರ್ತೆಯರಿಗೆ 3 ಸಾವಿರದಂತೆ ಒಟ್ಟು 667 ಜನ ಕಾರ್ಯಕರ್ತೆಯರಿಗೆ ಒಟ್ಟು 20,01,000-00 ಗಳನ್ನು ಆರ್.ಟಿ.ಜಿ.ಎಸ್ ಮೂಲಕ ಜಮಾ ಮಾಡಲಾಗುತ್ತಿದೆ. 667 ಆಶಾ ಕಾರ್ಯಕರ್ತೆಯರ ಪೈಕಿ ಬಾಗಲಕೋಟೆ ತಾಲೂಕಿನ 112, ಬಾದಾಮಿ, ಹುನಗುಂದ, ಜಮಖಂಡಿ, ಮುಧೋಳ ಹಾಗೂ ಬೀಳಗಿ ತಲಾ 111 ಕಾರ್ಯಕರ್ತೆಯರು ಇದ್ದಾರೆ.

    ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ. ಈ ಪ್ರೋತ್ಸಾಹ ಧನ ಕಡಿಮೆ ಎಂದು ಭಾವಿಸಬಾರದು. ಒಳ್ಳೆಯ ಕಾರ್ಯಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕೋವಿಡ್ ಸಂಪೂರ್ಣ ನಿಯಂತ್ರಕ್ಕೆ ತರಲುವ ನಿಟ್ಟಿನಲ್ಲಿ ಶ್ರಮಿಸೋಣ.
    – ಕೆ.ರಾಜೇಂದ್ರ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts