More

    ಖರೀದಿಗೂ ಮುನ್ನ ಎಚ್ಚರವಿರಲಿ

    ಬಾಗಲಕೋಟೆ: ಗ್ರಾಹಕರಿಗೆ ಒಂದಲ್ಲ ಒಂದು ರೀತಿಯಲ್ಲಿ ವಸ್ತುಗಳ ಖರೀದಿಯಲ್ಲಿ ಮೋಸವಾಗುತ್ತಿದೆ. ಈ ಬಗ್ಗೆ ಪ್ರಶ್ನಿಸುವ ಮನೋಭಾವ ಹೊಂದಬೇಕಾದರೆ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಹಕರಾದವರು ಯಾವುದೇ ವಸ್ತುಗಳನ್ನು ಖರೀದಿಸುವ ಮೊದಲು ವಸ್ತುವಿನ ಗುಣಮಟ್ಟ ಹಾಗೂ ಮೇಲೆ ನಮೂದಿಸಿದ ದಿನಾಂಕ ಗಮನಿಸಬೇಕು. ಅಲ್ಲದೆ ಕಡ್ಡಾಯವಾಗಿ ರಸೀದಿ ಪಡೆಯುವುದು ಅವಶ್ಯಕವಾಗಿದೆ. ಖರೀದಿಸಿದ ವಸ್ತುವಿಗೆ ರಸೀದಿ ಪಡೆದಲ್ಲಿ ಮಾತ್ರ ಖರೀದಿಯಲ್ಲಿ ಮೋಸದ ಪ್ರಶ್ನಿಸುವ ಹಕ್ಕು ಪಡೆದುಕೊಳ್ಳಲು ಸಾಧ್ಯ. ಸ್ಥಳೀಯವಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಅಲ್ಲದೆ ರುಚಿಕರವಾದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು ಎಂದು ಸಲಹೆ ನೀಡಿದರು.

    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಶಾರದಾ ಕೆ. ಮಾತನಾಡಿ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಬೇಕಾಗಿದೆ. ಮಾರುಕಟ್ಟೆ ಮತ್ತು ಗ್ರಾಹಕ ಎಂದರೆ ಕೇವಲ ತೂಕ, ಕಲಬೆರಿಕೆ, ಬೆಲೆ ಹೆಚ್ಚಳ, ವಸ್ತುಗಳನ್ನು ಕೊಂಡುಕೊಳ್ಳುವುದು ಅಷ್ಟೆ ಅಲ್ಲದೆ ಅದರಲ್ಲಿ ಇನ್ಸುರೆನ್ಸ್, ಮೆಡಿಕಲ್, ಕಟ್ಟಡದ ನ್ಯೂನ್ಯತೆ, ಕೊರಿಯರ್ ಹೀಗೆ ಅನೇಕ ಸೇವೆಗಳು ವ್ಯಾಪ್ತಿಗೆ ಒಳ ಪಡುತ್ತೇವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.

    ನ್ಯಾಯಾವಾದಿ ಅರುಣಾ ರಘುವೀರ ಮಾತನಾಡಿ, ನಾವು ಬಳಸುವ ಪ್ಲಾಸ್ಟಿಕ್‌ನಿಂದ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಮರು ಬಳಕೆಗೆ ಯೋಗ್ಯವಿರುವ ವಸ್ತುಗಳನ್ನು ಮಾತ್ರ ಹೆಚ್ಚಾಗಿ ಬಳಸುವುದು ಸೂಕ್ತ. ಹೂಸ ಗ್ರಾಹಕ ಕಾಯ್ದೆ-2019 ಅನ್ವಯ ಗ್ರಾಹಕ ಕಾಯ್ದೆಗಳಲ್ಲಿ ಬದಲಾವಣೆಯಾಗಿದ್ದು, ಗ್ರಾಹಕರ ರಕ್ಷಣೆಯೇ ಮುಖ್ಯ ಕರ್ತವ್ಯ. ಇ-ಕಾಮರ್ಸ ಟ್ರಾಂಜೆಕ್ಷನ್‌ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸುವಾಗ ಉಂಟಾಗುವ ತೊಂದರೆ ಕುರಿತಾಗಿ ಗ್ರಾಹಕರು ಎಲ್ಲಂದರಲ್ಲಿ ಬೇಕಾದರು, ವಿಡಿಯೋ ಕಾನ್ಪೂರೆನ್ಸ್ ಮೂಲಕ ದೂರು ದಾಖಲಿಸುವ ಹಕ್ಕನ್ನು ನೀಡಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಗ್ರಾಹಕರ ಹಕ್ಕುಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶನೆ ನಡೆಯಿತು. ಗ್ರಾಹಕರ ಹಕ್ಕುಗಳ ಕುರಿತಾದ ಹಮ್ಮಿಕೊಂಡ ವಿವಿಧ ಅರಿವು ಕಾರ್ಯಕ್ರಮ, ಬೀದಿನಾಟಕ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಂಗನಗೌಡ ದಂಡಣ್ಣವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರ ಇತರರು ಉಪಸ್ಥಿತರಿದ್ದರು.



    ಖರೀದಿಗೂ ಮುನ್ನ ಎಚ್ಚರವಿರಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts