More

    ಅಂಗವಿಕಲರಿಗೆ ವಿಶೇಷ ಶಾಲೆ ಸ್ಥಾಪನೆಗೆ ಪ್ರಸ್ತಾವನೆ

    ಬಾಗಲಕೋಟೆ: ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ವಸತಿಯುತ ವಿಶೇಷ ಶಾಲೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ವಿಕಲಚೇತನರ 2016ರ ಕಾಯ್ದೆಯ ಕುರಿತು ಚರ್ಚಿಸಲು ಜರುಗಿದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಜಿಲ್ಲೆಯಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಾಗಿದೆ. ವಿಕಲಚೇತನತ ವಸತಿಯುತ ಶಾಲೆ ಅವಶ್ಯಕತೆಯನ್ನು ಮನಗಂಡು ವಿಶೇಷ ಶಾಲೆ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಸತಿ ಶಾಲೆೆ ಸ್ಥಾಪನೆಗೆ 2 ಎಕರೆ ನಿವೇಶನ ಅವಶ್ಯವಿದ್ದು, ಬಿಟಿಡಿಎಗೆ ಭೂಮಿ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ ವಿವಿಧ ಸ್ವರೂಪವುಳ್ಳ ಒಟ್ಟು 27998 ಅಂಗವಿಕಲರಿದ್ದು,ಅವರಿಗೆ ನೀಡುತ್ತಿರುವ ಯುಡಿಐಡಿ ಕಾರ್ಯ ಪ್ರಗತಿ ಉತ್ತಮವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ವರ್ಗ ಐಡಿ ಕಾರ್ಡ್ ನೀಡುವ ಕಾರ್ಯ ಸಂಪೂರ್ಣ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಯುಡಿಐಡಿ ಕಾರ್ಡ್‌ಗಾಗಿ 30012 ಅರ್ಜಿ ಆನ್‌ಲೈನ್‌ನಲ್ಲಿ ಸ್ವೀಕೃತಗೊಂಡಿದ್ದು, ಅದರಲ್ಲಿ 13398 ಜನರೇಟ ಆಗಿರುತ್ತವೆ. ಅದರಲ್ಲಿ 1205 ತಿರಸ್ಕೃತಗೊಂಡಿದ್ದು, 15409 ಮಾತ್ರ ಬಾಕಿ ಉಳಿದಿವೆ. ಅಂಗವೈಕಲ್ಯತೆ ಪ್ರಮಾಣದ ಪರೀಕ್ಷೆಗೆ ಬರದ ಕಾರಣ ಬಾಕಿ ಉಳಿದಿರುವದನ್ನು ಕಂಡು ಅಂತವರಿಗೆ ಕಾಲಾವಕಾಶ ನೀಡಿ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು.

    ಶ್ರವಣ ನ್ಯೂನತೆ ಹೊಂದಿದ ಮಕ್ಕಳ ಬಿರಾಟೆಸ್ಟ್‌ಗೆ ಪ್ರತಿ ಮಕ್ಕಳಿಗೆ 1200 ಖರ್ಚಾಗಲಿದ್ದು, ಇದು ಅವರಿಗೆ ಭಾರವಾಗಲಿದೆ ಎಂದು ಅರಿತು ನಗರದ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆಸಲು ಉದ್ದೇಶಲಾಗಿದೆ. ಇದಕ್ಕೆ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿರುವ ಶ್ರವಣ ನ್ಯೂನತೆ ಇರುವ ಮಕ್ಕಳ ಪಟ್ಟಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಅವರಿಗೆ ಸೂಚಿಸಿದರು. ಪಿಡಬ್ಲೂಡಿ ವತಿಯಿಂದ ನಿರ್ಮಾಣಗೊಂಡ ಸರ್ಕಾರಿ ಕಟ್ಟಡಗಳಲ್ಲಿ ವೈಜ್ಞಾನಿಕವಾಗಿ ರ‌್ಯಾಂಪ್ ನಿರ್ಮಿಸಿದ ಬಗ್ಗೆ ಪರಿಶೀಲಿಸಲು ತಿಳಿಸಿದರು.

    ಜಿಲ್ಲೆಯ ವಿವಿಧ ಇಲಾಖೆಯಡಿ ಬಿಡುಗಡೆಯಾದ ಅನುದಾನದಲ್ಲಿ ಶೇ.5 ರಷ್ಟು ಅಂಗವಿಕಲರಿಗೆ ಮೀಸಲಿರುಸುತ್ತಿದ್ದು, ಈ ಅನುದಾನದಡಿ ಶ್ರವಣಯಂತ್ರಗಳನ್ನು ಖರೀದಿಸಿ ವಿತರಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಯವರು ಶೇ.5ರ ಅನುದಾವನ್ನು ಯಾವುದೇ ರೀತಿಯ ಕ್ರಿಯಾಯೋಜನೆ ರೂಪಿಸದೇ ಎಲ್ಲ ಇಲಾಖೆಯ ಶೇ.5 ರಷ್ಟು ಅನುದಾವನ್ನು ಸಂಗ್ರಹಿಸಲು ಕ್ರಮಕೈಗೊಳ್ಳಲಾಗುವುದು. ಇದರಿಂದ ಶ್ರವಣ ದೋಶ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಕಾರಿಗಳು ತಿಳಿಸಿದರು.

    ಪಿಡಬ್ಲೂಡಿ 2016ರ ಕಾಯ್ದೆಯನ್ವಯ 21 ವಿವಿಧ ಅಂಗವಿಕಲರನ್ನು ಗುರಿತಿಸಿದ್ದು, ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳು ಅರ್ಹ ಅಂಗವಿಕಲರಿಗೆ ತಲುಪಿಸುವ ಕಾರ್ಯ ಸಮಿತಿಯದ್ದಾಗಿದೆ. ಸರ್ಕಾರದ ಸೌಲಭ್ಯದ ಜೊತೆಗೆ ಯಾವುದೇ ರೀತಿಯ ತಾರತಮ್ಯವಾಗದಂತೆ ಕ್ರಮವಹಿಸಬೇಕು. ಬಹು ವಿಧದ ಅಂಗವಿಕಲತೆ ಹೊಂದಿದವರಿಗೆ ನಿರಾಮಯಿ ಕಾರ್ಡ್ ನೀಡಲು ಈ ಹಿಂದೆ 250 ರೂ.ಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಈಗ ಅದನ್ನು ಸಹ ಉಚಿತವಾಗಿ ನೀಡಲಾಗುತ್ತಿದ್ದು, ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

    ಸಭೆಯಲ್ಲಿ ಜಿ.ಪಂ ಸಿಇಒ ಟಿ.ಭೂಬಾಲನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಶಾಂತ ಗಿಡದಾನಪ್ಪಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಜಿಲ್ಲೆಯಲ್ಲಿ 4 ಸಾವಿರ ಬಹುವಿಧ ಅಂಗವಿಲತೆ ಹೊಂದಿದವರಿದ್ದು, ಅದರಲ್ಲಿ ಒಂದು ಸಾವಿರ ಜನವರಿಗೆ ನಿರಾಮಯ ಕಾರ್ಡ್ ನೀಡಲಾಗಿದ್ದು, ಉಳದಿ 3 ಸಾವಿರ ಜನರಿಗೆ ಕಾರ್ಡ್ ನೀಡಲು ಕ್ರಮವಹಿಸಲಾಗುವುದು.
    – ಸವಿತಾ ಕಾಳೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts