More

    ದೇವದಾಸಿ ಮಹಿಳೆಯರ ಸಬಲೀಕರಣಕ್ಕೆ ಸಮಗ್ರ ಪ್ಯಾಕೇಜ್ ಅಗತ್ಯ

    ಬಾಗಲಕೋಟೆ: ದೇವದಾಸಿ ಮಹಿಳೆಯರ ಸಬಲೀಕರಣಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಮಗ್ರ ಕಾರ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ ಹೇಳಿದರು.

    ನವನಗರದ ಕಲಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯು ದೇವದಾಸಿ ಪು ನರ್‌ವಸತಿ ಯೋಜನೆ ಅಡಿಯಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರ ಹಾಗೂ ಮಾಜಿ ದೇವದಾಸಿ ಮಕ್ಕಳ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ದೇವದಾಸಿ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ದೇವದಾಸಿಯರಿಗೆ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಮಗ್ರ ಪ್ಯಾಕೇಜ್ ಅಗತ್ಯವಾಗಿದೆ ಎಂದರು.

    ದೇವದಾಸಿ ಮಕ್ಕಳು ಎಲ್ಲರಂತೆ ಶಿಕ್ಷಣ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ, ಪ್ರೋತ್ಸಾಹ, ಮಕ್ಕಳಿಗೆ ಮದುವೆ ಕಾರ್ಯಕ್ರಮಗಳು ಇದ್ದು. ಅದರ ಸದುಪಯೋಗ ಪಡೆದುಕೊಂಡು ಅನಿಷ್ಠ ಪದ್ಧತಿಯಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ದೇವದಾಸಿಯರಿಗೆ ಸರ್ಕಾರದಿಂದ ಭೂಮಿ ನೀಡುವ ಕೆಲಸವಾದಾಗ ಮಾತ್ರ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ. ಅಧಿಕಾರಿಗಳು ವಿವಿಧ ನಿಗಮದಿಂದ ದೊರೆಯುವ ಯೋಜನೆಗಳನ್ನು ಮಾಜಿ ದೇವಾಸಿಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದರು.

    ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಜ್ಯಾತ್ಯಾತೀತ, ಲಿಂಗಬೇದ, ಬಡತನ, ಶಿಕ್ಷಣ ಕೊರತೆಯಿಂದ ಸಮಾಜದ ತಳಸಮುದಾಯದವರಲ್ಲಿ ಮಾತ್ರ ದೇವದಾಸಿ ಮಹಿಳೆಯರನ್ನು ನಾವು ಕಾಣುತ್ತಿದ್ದೇವೆ. ಬಸವಾದಿ ಶರಣರ ಸಂದೇಶದಂತೆ ಎಲ್ಲರ ಜತೆಗೂಡಿ ಸಮಾಜದಲ್ಲಿ ಬದುಕುವಂತಾಗಬೇಕಾದರೆ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಮಠ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ, , ಜಿ.ಪಂ ಉಪಕಾರ್ಯದರ್ಶಿ ಎ.ಜಿ.ತೋಟದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಾಸ್ಮಿನ್ ಕಿಲ್ಲೆದಾರ ನಿರೂಪಿಸಿದರು.

    ದೇವದಾಸಿ ಮಕ್ಕಳು ಸಮಾಜದಲ್ಲಿ ಎಲ್ಲರಂತೆ ಬದುಕಲಿ ಎನ್ನುವ ದೃಷ್ಟಿಯಿಂದ ಮುದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಶ್ರಮಿಸಬೇಕು. ಜಿಲ್ಲೆಯ ದೇವದಾಸಿ ಮಕ್ಕಳಿಗೆ ವೃತ್ತಿಪರ ತರಬೇತಿ ಕೊಡಿಸುವ ಮೂಲಕ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಎಲ್ಲ ರೀತಿ ಕ್ರಮಕೈಗೊಳ್ಳಲಾಗುವುದು. ನೌಕರಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳ ಜತೆ ಚರ್ಚಿಸಲಾಗುವುದು.
    ಗಂಗೂಬಾಯಿ ಮಾನಕರ ಜಿ.ಪಂ ಸಿಇಒ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts