More

    ಶಿಕ್ಷಕರ ಪಾತ್ರವನ್ನು ತಂತ್ರಜ್ಞಾನ ತುಂಬಲಾರದು

    ಬಾಗಲಕೋಟೆ: ಕೋವಿಡ್ ಎನ್ನುವ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಇದರ ಬಿಸಿ ತಟ್ಟಿದೆ ಎಂದು ಬಾದಾಮಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಜಿ.ಜಿ. ಹಿರೇಮಠ ಹೇಳಿದರು.

    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲಿಕೆಯಲ್ಲಿ ಹೊಸ ವಿಧಾನಗಳು, ಸವಾಲುಗಳು ಮತ್ತು ಅವಕಾಶಗಳು ಕುರಿತು ಒಂದು ದಿನದ ರಾಜ್ಯಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಕ್ಷಣದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಒಂದು ಹಂತಕ್ಕೆ ಬಂದಿದ್ದೇವೆ. ಹಲವಾರು ತಂತ್ರಜ್ಞಾನವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಬಳಸಿಕೊಂಡಿದ್ದೇವೆ. ಆದರೆ, ತಂತ್ರಜ್ಞಾನ ಶಿಕ್ಷಕರಂತೆ ಕಾರ್ಯನಿರ್ವಹಿಸಲಾರದು ಎಂದರು.

    ಇಂದಿನ ಕಲಿಕೆಯಲ್ಲಿ ನಾವೀಣ್ಯತೆಯ ಅವಶ್ಯಕತೆ ಇದೆ. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಸಾಂಪ್ರದಾಯಿಕ ಶಿಕ್ಷಣಕ್ಕೆ ಬದಲಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರು. ಆರಂಭದ ಹಂತದಲ್ಲಿ ಇದು ಕಠಿಣವಾದರೂ ಇಂದು ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ಆದರೆ ಶಿಕ್ಷಕನ ಪಾತ್ರವನ್ನು ತಂತ್ರಜ್ಞಾನ ಎಂದೂ ತುಂಬಲಾರದು ಎಂದರು.

    ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಹಲವಾರು ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ತಾಂತ್ರಿಕತೆಯಿಂದ ಮನುಷ್ಯನ ಜಾಗವನ್ನು ಯಂತ್ರಗಳು ಆಕ್ರಮಿಸಿವೆ. ಹಾಗೆ ಶಿಕ್ಷಕನ ಪಾತ್ರದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಅತಿಕ್ರಮಿಸಿವೆ. ಸವಾಲನ್ನು ಅವಕಾಶವಾಗಿ ಹೇಗೆ ಪರಿವರ್ತನೆ ಮಾಡಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಸರಡಗಿ ವಂದಿಸಿದರು. ಎಂ.ಪಿ. ಬಡಿಗೇರ ನಿರೂಪಿಸಿದರು.

    ಶ್ವೇತಾ ಪಾಟೀಲ ಪ್ರಥಮ
    ಉತ್ತಮ ಪ್ರಬಂಧ ಮಂಡನೆಯಲ್ಲಿ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶ್ವೇತಾ ಪಾಟೀಲ ಪ್ರಥಮ, ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶ್ರೇಯಾ ಚನಾಳ ದ್ವಿತೀಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಓಲೆಕಾರ ತೃತೀಯ ಸ್ಥಾನ ಪಡೆದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts