More

    ಬಣ್ಣದಾಟ-ಬಂಡಿ ಮೆರವಣಿಗೆ ನಿಷೇಧ

    ಬಾಗಲಕೋಟೆ: ಕೋವಿಡ-19 ಎರಡನೇ ಅಲೆ ಹಿನ್ನಲೆಯಲ್ಲಿ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹೋಳಿ ನಿಮಿತ್ತ ಮಾ.29 ರಿಂದ 31 ವರೆಗೆ ಮೂರು ದಿನಗಳ ಕಾಲ ಬಾಗಲಕೋಟೆ ನಗರದಲ್ಲಿ ಜರುಗಲಿರುವ ಬಣ್ಣದ ಆಟ ಹಾಗೂ ಬಣ್ಣದ ಬಂಡಿ ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

    ಹೋಳಿಗೆ ಧಾರ್ಮಿಕ ಪೂಜೆ ಹಾಗೂ ಸಾಂಪ್ರದಾಯಕ ಆಚರಣೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಮಾರ್ಗಸೂಚಿಗಳು ಅನ್ವಯವಾಗುತ್ತದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಹಾಗೂ ವಿಪತ್ತು ನಿರ್ವಹನಾ ಕಾಯ್ದೆ 2005 ರಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ.

    ಬಾಗಲಕೋಟೆ ನಗರದಲ್ಲಿ ಪ್ರತಿ ವರ್ಷ ಹೋಳಿ ಹಬ್ಬವನ್ನು ವಿಜೃಂಬನೆಯಿಂದ 3 ದಿನಗಳ ಕಾಲ ಅಚರಿಸುತ್ತಾ ಬರಲಾಗಿದೆ. ಕೋವಿಡ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಈ ಕುರಿತು ಮಾ.16 ರಂದು ಬಾಗಲಕೋಟೆ ಹೋಳಿ ಹಬ್ಬ ಆಚರಣೆಯ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಹಬ್ಬ ಆಚರಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಮಿತಿ ಮುಖಂಡರಿಗೆ ತಿಳಿಸಲಾಗಿತ್ತು. ಅದರಂತೆ ಮಾ.20 ರಂದು ಹೋಳಿ ಆಚರಣಾ ಸಮಿತಿಯ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಸದಸ್ಯರಾದ ಸಂಜೀವ ವಾಡಕರ, ಮಹಾಬಳೇಶ್ವರ ಗುಡಗುಂಟಿ ಸರಳವಾಗಿ, ಸಾಂಕೇತಿಕವಾಗಿ ಹೋಳಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಸೋಂಕು ನಿಯಂತ್ರಣಕ್ಕೆ ಸಹಕಾರಿ ನೀಡಿ ಸರಳವಾಗಿ ಹೋಳಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮನವಿ ಮಾಡಿದ್ದಾರೆ.

    ಮಾ. 23 ರಂದು ಶಾಂತತಾ ಸಭೆ
    ಬಾಗಲಕೋಟೆ: ಜಿಲ್ಲೆಯಲ್ಲಿ ಮಾ.28 ರಂದು ಆಚರಿಸಲ್ಪಡುವ ಹೋಳಿ ಹಬ್ಬದ ಕುರಿತು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಮಾ.23 ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶಾಂತತಾ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ರಾಜೇಂಧ್ರ ತಿಳಿಸಿದ್ದಾರೆ.



    ಬಣ್ಣದಾಟ-ಬಂಡಿ ಮೆರವಣಿಗೆ ನಿಷೇಧ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts