More

    ಸರ್ಕಾರಿ ಅಧಿಕಾರಿ ಮನೆಯಲ್ಲಿ ಲಕ್ಷ ಲಕ್ಷ ನಿಷೇಧಿತ ನೋಟು ಪತ್ತೆ

    ಬಾಗಲಕೋಟೆ: ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ನಾಲ್ಕು ವರ್ಷ ಕಳೆದರೂ ಸರ್ಕಾರಿ ಅಧಿಕಾರಿ ಮನೆಯಲ್ಲಿ ಲಕ್ಷ ಲಕ್ಷಗಟ್ಟಲೇ ಬ್ಯಾನ್ ಆಗಿರುವ ನೋಟುಗಳು ಪತ್ತೆ ಆಗಿರುವುದು ಅಚ್ಚರಿ ಮೂಡಿಸಿದೆ.

    ಬಾಗಲಕೋಟೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ಅಶೋಕ ತೋಪಲಕಟ್ಟಿ ಅವರ ನಿವಾಸ, ಕಚೇರಿ ಮತ್ತು ಗ್ಯಾಸ್ ಏಜೆನ್ಸಿ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ನಡೆಸಿದ ದಾಳಿ ವೇಳೆ ನಿಷೇಧಿತ 500 ಹಾಗೂ 1000 ರೂ. ಮುಖಬೆಲೆಯ 5,15,500 ರೂ. ಸಿಕ್ಕಿವೆ.

    ಬಾಗಲಕೋಟೆಯ ವಿದ್ಯಾಗಿರಿಯ 8ನೇ ಕ್ರಾಸ್‌ನಲ್ಲಿರುವ ಇಂಜಿನಿಯರ್ ಅಶೋಕ ಅವರ ನಿವಾಸ ಹಾಗೂ ಪತ್ನಿ ಹೆಸರಿನಲ್ಲಿ ನವನಗರದ ಸೆಕ್ಟರ್ ನಂ. 17ರಲ್ಲಿರುವ ಗ್ಯಾಸ್ ಏಜೆನ್ಸಿ ಹಾಗೂ ಕರ್ತವ್ಯ ನಿರ್ವಹಿಸುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

    ದಾಳಿ ವೇಳೆ ಇಂಜಿನಿಯರ್ ಮನೆಯಲ್ಲಿ 64.53 ಲಕ್ಷ ರೂ. ಮೌಲ್ಯದ 1241 ಗ್ರಾಂ ಚಿನ್ನಾಭರಣ, 5.54 ಲಕ್ಷ ರೂ. ಮೌಲ್ಯದ 8568 ಗ್ರಾಂ ಬೆಳ್ಳಿ ವಸ್ತುಗಳು, 5,18,775 ರೂ. ಹೊಸ ಕರೆನ್ಸಿ ನೋಟುಗಳು ಹಾಗೂ 5,15,500 ರೂ. ನಿಷೇಧಿತ ನೋಟುಗಳು ದೊರೆತಿವೆ.

    ಬೆಳಗಾವಿ ಉತ್ತರ ವಲಯದ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿಎಸ್ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಎಸಿಬಿ ಠಾಣೆಯ ಸಮೀರ ಮುಲ್ಲಾ ಹಾಗೂ ಸಿಬ್ಬಂದಿ ಸೇರಿ ಧಾರವಾಡ, ಬಾಗಲಕೋಟೆ ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts