More

    ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಟೆಸ್ಟಿಂಗ್ ಉದ್ಘಾಟನೆ

    ಬಾಗಲಕೋಟೆ: ನವನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜು, ಕುಮಾರೇಶ್ವರ ಆಸ್ಪತ್ರೆಯಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮೊಲಿಕ್ಯುಲರ್ ಮೈಕ್ರೊಬಯಾಲಜಿ ಲ್ಯಾಬರೋಟರಿ (ಔಉಇಖಿಔಅ್ಕ ಐಇ್ಕಆಐಔಎ್ಗ ಔಅಆಣ್ಕಅಣ್ಕ್ಗ) ಭಾನುವಾರ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಚಾಲನೆ ನೀಡಿದರು.

    ಕೋವಿಡ್ ಸೋಂಕು ಈ ಲ್ಯಾಬನಲ್ಲಿ ಆರ್‌ಟಿಪಿಸಿಆರ್, ಟ್ರೂ ನೆಟ್ ಮೂಲಕ ಪರೀಕ್ಷೆ ನಡೆಸಬಹುದು. ಒಂದು ದಿನಕ್ಕೆ 1500 ಟೆಸ್ಟ್‌ಗಳನ್ನು ಮಾಡು ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಕಿಡ್ನಿ ವೈಫಲ್ಯದ ರೋಗಿಗೆ ಇನ್ನೊಬ್ಬರು ಕಿಡ್ನಿ ಧಾನಮಾಡುವಾಗ ನಡೆಸುವ ಎಚ್.ಎಲ್.ಎ. ಮ್ಯಾಚಿಂಗ್ ಪರೀಕ್ಷೆ ಕೂಡಾ ಇಲ್ಲಿ ಮಾಡಲಾಗುತ್ತದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕು ಶೀಘ್ರಗತಿಯಲ್ಲಿ ಪರೀಕ್ಷೆಸುವಲ್ಲಿ ಇದು ಸಹಕಾರಿಯಾಗಿದೆ. 24 ಗಂಟೆಗಳ ಸೇವೆ ಒದಗಿಸಲಿದೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶಟ್ಟರ ಮತ್ತು ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ, ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶಟ್ಟರ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಸಿಇಒ ಟಿ ಭೂಬಾಲನ್, ಡಿಎಚ್‌ಒ ಡಾ.ಅನಂತ ದೇಸಾಯಿ, ಕುಮಾರೇಶ್ವರ ಆಸ್ಪತ್ರೆಯ ಡೀನ್ ಡಾ.ಟಿ.ಎಂ.ಚಂದ್ರಶೇಖರ, ಡಾ.ಎಸ್.ಎಸ್.ಸೊಲಬನ್ನವರ, ಡಾ.ಶ್ರೀರಾಮ ಕೋರಾ, ಡಾ.ಸಂಜೀವ ಕೊಳಗಿ, ಡಾ.ಅಶೋಕ ಡೋರ್ಲೆ, ಡಾ.ಆಶಾಲತಾ ಮಲ್ಲಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts