More

    ‘ರಾಜ್ಯದಲ್ಲಿರುವುದು ಶನಿ ಸರ್ಕಾರ, ಇದು ತೊಲಗೋದನ್ನೇ ಜನ ಕಾಯ್ತಿದಾರೆ’

    ಬಾಗಲಕೋಟೆ: ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಬಡವರು, ಜನ ಸಾಮಾನ್ಯರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮವನ್ನೂ ನೀಡಿಲ್ಲ. ಇದೊಂದು ಶನಿ ಸರ್ಕಾರ. ಯಾವಾಗ ತೊಲಗುತ್ತದೆ ಎಂದು ಜನರು ಕಾಯುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

    ನಗರದ ಚರಂತಿಮಠದಲ್ಲಿ ಸೋಮವಾರ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕೇಂದ್ರ, ರಾಜ್ಯ ಸರ್ಕಾರಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಶಾಸಕರ, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿಗೆ ಅನುದಾನ ನೀಡಿ ಅಂತ ಅಧಿವೇಶನದಲ್ಲಿ ಬೊಬ್ಬೆ ಹೊಡೆದರೂ ಬಿಡಿಗಾಸು ಬಿಡುಗಡೆ ಮಾಡುತ್ತಿಲ್ಲ. ಜನರ ಕಲ್ಯಾಣಕ್ಕೆ ಅನುದಾನ ನೀಡುತ್ತಿಲ್ಲ. ಇದೊಂದು ಹೊತ್ತಾಳ ಸರ್ಕಾರ ಎಂದು ಉತ್ತರ ಕರ್ನಾಟಕ ಭಾಷೆ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಜನರ ಬದುಕು ದುರ್ಬರಗೊಂಡಿದೆ. ಬಿಜೆಪಿ ನಾಯಕರಿಗೆ ಉತ್ತಮ ಆಡಳಿತ ನೀಡಲು ಬರಲ್ಲ ಎನ್ನುವುದು ಸಾಬೀತಾಗಿದೆ. ಇದರ ಪರಿಣಾಮ ಪಂಜಾಬ್ ರಾಜ್ಯದಲ್ಲಿ ಬಿಜೆಪಿಗೆ ಮನೆಯಲ್ಲಿ ದೀಪ ಹಚ್ಚಿದ್ದಾರೆ. ಮುಂದಿನ ಪಂಚ ರಾಜ್ಯಗಳ ಚುನಾವಣೆಯಲ್ಲಿಯೂ ಬಿಜೆಪಿ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

    ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ 22 ಗ್ರಾಪಂಗಳ 4 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನು 4 ಗ್ರಾಪಂಗಳು ಬಹುಮತವಿದ್ದರೂ ಸಹ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ಮೀಸಲಾತಿ ಅದಲು, ಬದಲು ಮಾಡಲಾಗಿದೆ. ಆದರೆ, ಮತಕ್ಷೇತ್ರದ 300 ಗ್ರಾಪಂ ಸದಸ್ಯ ಸ್ಥಾನಗಳ ಪೈಕಿ 154 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ ಎಂದ ಅವರು, ಗ್ರಾಪಂ ಸದಸ್ಯರು ಮಹಾತ್ಮ ಗಾಂಧೀಜಿ ಕಂಡ ಕನಸು ನನಸು ಮಾಡಲು ಶ್ರಮಿಸಬೇಕು. ಗ್ರಾಮದಲ್ಲಿ ಸ್ವಚ್ಛತೆ, ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ 5 ವರ್ಷದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಗರಿಷ್ಠ 6 ಕೋಟಿ ರೂ. ಅನುದಾನ ಬರುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಪ್ರಗತಿಗೆ ಪಣತೊಡಬೇಕು ಎಂದರು.

    ಮಾಜಿ ಸಚಿವ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಜಿಪಂ ಸದಸ್ಯರಾದ ಕವಿತಾ ದಡ್ಡಿ, ಹಣಮವ್ವ ಕರಿಹೊಳಿ, ಮುಖಂಡರಾದ ನಾಗರಾಜ ಹದ್ಲಿ, ಎಸ್.ಎನ್.ರಾಂಪೂರ, ಚನ್ನವೀರ ಅಂಗಡಿ, ಹಾನಿಸಾಬ ದಂಡಿನ, ಕುತಬುದ್ದೀನ್ ಖಾಜಿ, ಬಸವಂತಪ್ಪ ಮೇಟಿ, ಶಶಿಕಾಂತ ಪೂಜಾರಿ ಇದ್ದರು.

    ನೂತನ ಗ್ರಾಪಂ ಸದಸ್ಯರು ಮತದಾರರ ವಿಶ್ವಾಸ, ಪ್ರೀತಿ ಉಳಿಸಿಕೊಳ್ಳಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬೇಕು. ಮುಧೋಳ ತಾಲೂಕಿನ ಶಿರೋಳ ಗ್ರಾಪಂ ಮಾದರಿ ಕೆಲಸ ಮಾಡುತ್ತಿದೆ. ಅಲ್ಲಿನ ಸದಸ್ಯರು ಗೌರವ ಧನ ಸಹ ಸ್ವೀಕರಿಸದೆ ಗ್ರಾಮದ ಅಭಿವೃದ್ಧಿಗೆ ಹೊಸ ಭಾಷೆ ಬರೆದಿದ್ದಾರೆ. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಆದರ್ಶ ಗ್ರಾಮ ಪಂಚಾಯಿತಿ ಮಾಡಬೇಕು.
    ಸುನೀಲಗೌಡ ಪಾಟೀಲ ವಿಧಾನ ಪರಿಷತ್ ಸದಸ್ಯ

    ಸೆಲ್ಫಿಗೆ ಫೋಸ್​ ಕೊಡಲು ಹೋಗಿ ಅಪ್ಪ ಮಗನ ಸಾವು!

    ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts