More

    ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿದೆ

    ಬಾಗಲಕೋಟೆ: ಬಿಜೆಪಿ ನೂತನ ಪದಾಧಿಕಾರಿಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪಕ್ಷದ ಸಂಘಟನೆ ಜತೆಗೆ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಶಿವಾನಂದ ಜೀನ್‌ದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ನಗರದ ಬಿಜೆಪಿ ಬೂತ್‌ಮಟ್ಟದ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ಗ್ರಾಮ ಪಂಚಾಯಿತಿ, ಪಿಕೆಪಿಎಸ್, ನಗರ ಸ್ಥಳೀಯ ಸಂಸ್ಥೆಯಿಂದ ಕೇಂದ್ರದವರೆಗೆ ಎಲ್ಲ ಹಂತದಲ್ಲಿಯೂ ಇಂದು ಬಿಜೆಪಿ ಪಕ್ಷವು ಅಧಿಕಾರದ ಚುಕ್ಕಾಣೆ ಹಿಡಿದಿದೆ. ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೀಗಾಗಿ ಪಕ್ಷದ ನೂತನ ಪದಾಧಿಕಾರಿಗಳು ಜನರಿಗೆ ಬಿಜೆಪಿ ಕೈಗೊಂಡಿರುವ ಸುಧಾರಣೆ, ಯೋಜನೆಗಳ ಬಗ್ಗೆ ಜನರಿಗೆ ತಲುಪಿಸಬೇಕು ಎಂದರು.

    ಬಾಗಲಕೋಟೆ ನಗರಸಭೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಹಿಂದಿನ ಅವಧಿಯಲ್ಲಿ ಬಿಜೆಪಿ ಅಧಿಕಾರವಿರುದ್ದರು ಸಹ ರಾಜ್ಯದಲ್ಲಿ ಬೇರೆ ಸರ್ಕಾರ ಆಡಳಿತ ಇತ್ತು. ಇದರಿಂದ ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗದೆ ಪರದಾಡುವಂತಾಯಿತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಟೀಕಿಸಿದರು.

    ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿದೆ. ವಂಶಪಾರಂಪರಿಕವಾಗಿ ಅಧಿಕಾರ ನೀಡುವ ಸಂಪ್ರದಾಯ ಇಲ್ಲಿ ಅವಕಾಶವಿಲ್ಲ. ಬೂತಮಟ್ಟದ ಕಾರ್ಯಕರ್ತರು ಸರ್ಕಾರ, ಪಕ್ಷದ ದೊಡ್ಡ ಹುದ್ದೆಗೆ ಅಲಂಕರಿಸಿದ್ದಾರೆ. ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವ ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರೇ ಇದಕ್ಕೆ ಉತ್ತಮ ಉದಾಹರಣೆ ಎಂದರು.

    ಈ ಸಂದರ್ಭದಲ್ಲಿ ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ಲಮಾಣಿ, ಜಿ.ಪಂ ಸದಸ್ಯ ರಂಗನಗೌಡ ಗೌಡರ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಘಟಕದ ಅಧ್ಯಕ್ಷ ಬಸವರಾಜ ಅವರಾಧಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ಮುಖಂಡರಾದ ಅಶೋಕ ಲಾಗಲೋಟಿ, ಅಶೋಕ ಲಿಂಬಾವಳಿ, ಈರಪ್ಪ ಐಕೂರ, ರಾಜು ರೇವಣಕರ, ಜಯಂತಿ ಕುರಂದವಾಡ, ಗುಂಡು ಸಿಂಧೆ, ಶಿವಾನಂದ ಟವಳಿ, ಜ್ಯೋತಿ ಭಜಂತ್ರಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts