More

    ಗೋಮಾತೆಗೆ ಪೂಜೆ ಸಲ್ಲಿಕೆ ಸರ್ಕಾರಕ್ಕೆ ಅಭಿನಂದನೆ

    ಬಾಗಲಕೋಟೆ: ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆ ಮಾಡಿದ ಹಿನ್ನಲೆಯಲ್ಲಿ ನಗರದ ಹೊಳೆ ಆಂಜನೇಯ ದೇವಸ್ಥಾನದ ಬಳಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಾಚರಣೆ ಮಾಡಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, 1964 ರಲ್ಲಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರು ಆಡಳಿತ ನಡೆಸಿದ ಸರ್ಕಾರಗಳು ಕಾಯ್ದೆಯನ್ನು ಹಲ್ಲು ಇಲ್ಲದ ಹಾವಿನಂತೆ ಮಾಡಿದ್ದವು. ಆದರೆ ಈಗ ಬಿಜೆಪಿ ಸರ್ಕಾರ ಅದನ್ನು ಗಟ್ಟಿಯಾಗಿ ಜಾರಿಗೊಳಿಸುವ ಮೂಲಕ ಗೋವಿಗೆ ಪೂಜ್ಯನೀಯ ಸ್ಥಾನವನ್ನು ನೀಡಿರುವುದು ಸಂತಸವಾಗಿದೆ ಎಂದರು.

    ಈ ವಿಧೇಯಕ ರಾಜ್ಯದಲ್ಲಿ ಜಾರಿಯಾದ ದಿನದಿಂದ ಗೋಹತ್ಯೆ ಮಾಡುವವರಿಗೆ 1 ಲಕ್ಷದಿಂದ ರೂ.50 ಸಾವಿರದವರೆಗೆ ದಂಡ, ಜೈಲು ಶಿಕ್ಷೆಯನ್ನು ವಿಸಲಾಗುತ್ತದೆ. ಈ ಕಾಯ್ದೆ ಜಾರಿಯಿಂದ ರೈತರ ಬದುಕಿಗೆ ಸುವರ್ಣ ಯುಗ ಆರಂಭವಾದಂತಾಯಿತು, ಇಡೀ ವಿಶ್ವದ ಬೆನ್ನಲುಬು ಮತ್ತು ಅಮೃತ ಕೊಡುವ ಗೋಮಾತೆಯನ್ನು ಎಲ್ಲರು ಸಂವಿಧಾನ ಮೂಲಕ ಗೌರವ ಸ್ಥಾನ ನೀಡಬೇಕು ಎಂದು ಹೇಳಿದರು.

    ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಂಗಣ್ಣ ಕುಪ್ಪಸ್ತ ಮಾತನಾಡಿ, ಗೋಮಾಂಸ ಭಕ್ಷಣೆ ಮಾಡಿ ಪ್ರಚೋದನೆ ಮಾಡುವವರಿಗೆ ಪಾಠ ಕಲಿಸಲು ಈ ಕಾಯ್ದೆಯನ್ನು ಗಟ್ಟಿಯಾಗಿ ಜಾರಿ ಮಾಡಬೇಕು. ಗೋಮಾಂಸ ರ್ತು ಮಾಡುವುದನ್ನು ನಿಲ್ಲಿಸಬೇಕು. ಗೋ ಹತ್ಯೆ ಮಾಡುವವರ ಕಾರ್ಖಾನೆ, ಕಟುಕರ ಮನೆಯನ್ನು ಬಂದ್ ಮಾಡಬೇಕು ಎಂದರು.

    ವಿದ್ಯಾಗಿರಿಯ ಕನ್ನೂರ ಮಠದ ವಿಶ್ವರಾಜೇಂದ್ರ ಶ್ರೀಗಳು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮುಖಂಡರಾದ ಅಶೋಕ ಲಿಂಬಾವಳಿ, ರಾಜು ರೇವಣಕರ, ರಾಜಶೇಖರ ಮುದೇನೂರ, ಶಂಕರ ಗಲಗ, ಬಸವರಾಜ ಕೊಡಗಲಿ, ಬಸವರಾಜ ಅವರಾದಿ, ಈರಪ್ಪ ಐಕೂರ, ಉಮೇಶ ಹಂಚಿನಾಳ, ವೀರಣ್ಣ ಹಳೇಗೌಡರ, ಶಿವಾನಂದ ಟವಳಿ, ರಾಮಣ್ಣ ಹೆರಕಣ್ಣವರ, ಬಸವರಾಜ ಹೆಬ್ಬಳ್ಳಿ, ಸುರೇಶ ಪವಾರ, ಶರಣಪ್ಪ ಕೆರೂರ, ಸಂಗಮೇಶ ಹಿತ್ತಲಮನಿ, ರವಿ ಧಾಮಜಿ, ಸವಿತಾ ಲೆಂಕೆಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts