More

    ರೈಲಿಗೆ ಸಿಲುಕಿ ಮತ್ತೆ ಐದು ಎಮ್ಮೆಗಳ ಸಾವು

    ಸುರತ್ಕಲ್: ಕೋಡಿಕೆರೆ ಬಳಿ ರೈಲು ಡಿಕ್ಕಿಯಾಗಿ ಎಮ್ಮೆ ಕೋಣಗಳ ಮಾರಣಹೋಮ ಮುಂದುವರಿದಿದೆ. ಶುಕ್ರವಾರ ರಾತ್ರಿ ರೈಲು ಡಿಕ್ಕಿಯಾಗಿ ಮತ್ತೆ ಐದು ಎಮ್ಮೆಗಳು ಮೃತಪಟ್ಟಿವೆ. ಈ ಪೈಕಿ ನಾಲ್ಕು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಗಾಯಗೊಂಡಿದ್ದ ಒಂದು ಎಮ್ಮೆ ಬಳಿಕ ಮೃತಪಟ್ಟಿತು. ಕಳೆದ ವಾರ ಇದೇ ರೀತಿ 14 ಎಮ್ಮೆಗಳು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದವು.

    ಸ್ಥಳಕ್ಕೆ ಉಪಮೇಯರ್ ವೇದಾವತಿ, ಪಾಲಿಕೆ ಸದಸ್ಯ ವರುಣ್ ಚೌಟ, ಹಿಂದು ಜಾಗರಣಾ ವೇದಿಕೆ ಪ್ರಮುಖರಾದ ಪುಷ್ಪರಾಜ್ ಕುಳಾಯಿ, ಭರತ್ ಜನತಾ ಕಾಲನಿ, ಕಿರಣ್ ಕಾಲನಿ, ದೀಕ್ಷಿತ್ ಚಿತ್ರಾಪುರ, ಬಿಜೆಪಿ ಪ್ರಮುಖರಾದ ಯೋಗೀಶ್ ಸನಿಲ್ ಕುಳಾಯಿ ಮೊದಲಾದವರು ಭೇಟಿಯಿತ್ತರು. ಸಂಘಟನೆ ಹಿತೈಷಿಯೊಬ್ಬರು ಜೆಸಿಬಿ ಒದಗಿಸಿದ್ದು ರೈಲ್ವೆ ಅಧಿಕಾರಿಗಳು ಸಹಕಾರದಿಂದ ದಫನ ಮಾಡಲಾಯಿತು. ಘಟನೆ ಕಾರಣ ರೈಲು ಹಳಿ ಪ್ರದೇಶ ರಕ್ತಸಿಕ್ತವಾಗಿತ್ತು

    ಹಲವು ದೂರು: ಕುಳಾಯಿ ಕೋಡಿಕೆರೆ ಬಳಿ ಬೀಡಾಡಿ ಕೋಣ, ಎಮ್ಮೆಗಳಿಂದ ಕೃಷಿಗೆ ಹಾನಿ ಬಗ್ಗೆ ಸ್ಥಳೀಯರು ಶಾಸಕರು, ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೂ ದೂರು ನೀಡಲಾಗಿತ್ತು. ವಿಜಯವಾಣಿ ಫೋನ್ ಇನ್‌ನಲ್ಲೂ ದೂರು ನೀಡಲಾಗಿತ್ತು. ಯಾರೂ ನೆರವಿಗೆ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದರು. ಬಳಿಕ ಕುಳಾಯಿ ಬಳಿ ಸಾವಿರಾರು ರೂ. ವ್ಯಯಿಸಿ ತಮ್ಮ ಕೃಷಿ ಪ್ರದೇಶಕ್ಕೆ ಮುಳ್ಳುಬೇಲಿ ಹಾಕಿಸಿಕೊಂಡಿದ್ದರು. ಇವುಗಳ ಕಾಟದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಕುಳಾಯಿ ಬಳಿ ಶುಕ್ರವಾರ ರಾತ್ರಿಯೂ ತೋಟಗಳಿಗೆ ಎಮ್ಮೆಗಳು ದಂಡು ದಾಳಿ ನಡೆಸಿ ಬಾಳೆಗಿಡ ಇತ್ಯಾದಿ ಹಾನಿಪಡಿಸಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ದೀಪಕ್, ರಾಘವೇಂದ್ರ

    ಕಾದಿದೆ ಅಪಾಯ: ಈ ಪ್ರದೇಶದಲ್ಲಿ ಇನ್ನೂ 20ರಿಂದ 30 ಎಮ್ಮೆ, ಕೋಣಗಳು ಈ ಭಾಗದಲ್ಲಿ ಸುತ್ತಾಡುತ್ತಿವೆ. ರೈಲು ಮಾರ್ಗವಿರುವ ಕಾರಣ ಇವುಗಳಿಗೆ ಅಪಾಯ ಕಾದಿದೆ. ಇವುಗಳನ್ನು ಸಂಘಟನೆಗಳ ನೆರವಿನಿಂದ ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಬೇಕು ಎಂದು ಮಾಜಿ ಉಪಮೇಯರ್ ವೇದಾವತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts