More

  ಸಾಲಬಾಧೆ ತಾಳದೆ ಬಡ್ನಿ ಗ್ರಾಮದ ರೈತ ಆತ್ಮಹತ್ಯೆ

  ಸವಣೂರ: ಸಾಲ ಬಾಧೆ ತಾಳದೆ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಡ್ನಿ ಗ್ರಾಮದಲ್ಲಿ ನಡೆದಿದೆ.

  ಬಡ್ನಿ ಗ್ರಾಮದ ಮಲ್ಲಪ್ಪ ಬಸಪ್ಪ ಶೆರೇವಾಡ (38) ಆತ್ಮಹತ್ಯೆ ಮಾಡಿಕೊಂಡ ರೈತ. 2 ಎಕರೆ ಕೃಷಿ ಭೂಮಿ ಹೊಂದಿರುವ ಮಲ್ಲಪ್ಪ, ಕೃಷಿ ಚಟುವಟಿಕೆಗಾಗಿ ಸವಣೂರ ಕೆವಿಜಿ ಬ್ಯಾಂಕ್​ನಲ್ಲಿ 2 ಲಕ್ಷ ರೂಪಾಯಿ ಸಾಲ ಮಾಡಿದ್ದ. ಎರಡು ವರ್ಷಗಳಿಂದ ಸರಿಯಾಗಿ ಬೆಳೆ ಬಾರದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆಯಿಂದ ನ. 10ರಂದು ಮನೆಯಿಂದ ಹೊರ ಹೋಗಿದ್ದ ಮಲ್ಲಪ್ಪ, ಚಿಲ್ಲೂರಬಡ್ನಿ ಗ್ರಾಮದ ಶಂಕ್ರಪ್ಪ ಮೇಟಿ ಅವರ ತೋಟದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಮಧ್ಯಾಹ್ನ ಬಾವಿಯಲ್ಲಿ ಶವ ಪತ್ತೆಯಾಗಿದೆ. ಮೃತನ ಪತ್ನಿ ಶವ ಗುರುತಿಸಿದ್ದಾಳೆ. ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಪ್ಪನಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts