More

    ಚೊಚ್ಚಲ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ಗೆ ಚಾಲನೆ ; ತಂಡ ಖರೀದಿಸಿದ ಪಿ.ವಿ.ಸಿಂಧು, ಜ್ವಾಲಾ ಗುಟ್ಟಾ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು
    ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಚೊಚ್ಚಲ ಗ್ರಾೃಂಡ್ ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ ಭಾರತದ ಅಗ್ರ ಷಟ್ಲರ್‌ಗಳಾದ ಪಿವಿ ಸಿಂಧು, ಕೆ. ಶ್ರೀಕಾಂತ್, ಸಾಯಿ ಪ್ರಣೀತ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ಹಾಗೂ ಎಚ್‌ಎಸ್ ಪ್ರಣಯ್ ಉಪಸ್ಥಿತಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಿಂದ ಉತ್ತೇಜನಗೊಂಡು ರಾಜ್ಯ ಮಟ್ಟದಲ್ಲೂ ಲೀಗ್ ಆರಂಭಿಸಲಾಗಿದೆ. ಈ ಎಂಟು ಜನ ಸ್ಟಾರ್ ಷಟ್ಲರ್‌ಗಳು 8 ತಂಡಗಳಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಬೆಂಗಳೂರು ನಗರ ಹಾಗೂ ಮಾಜಿ ಆಟಗಾರ್ತಿ ಜ್ವಾಲಾ ಗುಟ್ಟಾ ಬಂಡಿಪುರ ಟಸ್ಕರ್ಸ್‌ ತಂಡದ ಸಹ-ಮಾಲೀಕತ್ವವನ್ನು ಹೊಂದಿದ್ದಾರೆ.
    ಮಲ್ನಾಡ್ ಫಾಲ್ಕನ್ಸ್ ತಂಡಕ್ಕೆ ಚಿರಾಗ್ ಶೆಟ್ಟಿ, ಬಂಡಿಪುರ ಟಸ್ಕರ್ಸ್‌ ತಂಡಕ್ಕೆ ಜ್ವಾಲಾ ಗುಟ್ಟಾ, ಮೈಸೂರು ಪ್ಯಾಂಥರ್ಸ್‌ ತಂಡಕ್ಕೆ ಸಾತ್ವಿಕ್‌ಸಾಯಿರಾಜ್, ಕೊಡವ ಟೈಗರ್ಸ್‌ ತಂಡಕ್ಕೆ ಅಶ್ವಿನಿ ಪೊನ್ನಪ್ಪ, ಮಂಡ್ಯ ತಂಡಕ್ಕೆ ಸಾಯಿ ಪ್ರಣೀತ್, ಎಚ್‌ಎಸ್ ಪ್ರಣಯ್ ತಂಡಕ್ಕೆ ಕೆಜಿಎಫ್ ವೋಲ್ಸ್ ಹಾಗೂ ಮಂಗಳೂರು ಶಾರ್ಕ್ಸ್ ತಂಡಕ್ಕೆ ಕೆ.ಶ್ರೀಕಾಂತ್ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    * ಲೀಗ್ ಮಾದರಿ: ರೌಂಡ್-ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ ನಾಲ್ಕು ತಂಡಗಳು ಡಬಲ್ ಎಲಿಮಿನೇಷನ್ (ಸೆಮೀಸ್) ಹಂತಕ್ಕೇರಲಿವೆ. ಪ್ರತಿ ಹಣಾಹಣಿಯಲ್ಲಿ 5 ಪಂದ್ಯಗಳಿರುತ್ತವೆ. ಪುರುಷರ, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಒಳಗೊಂಡಿರುತ್ತದೆ.

    * ಸೂಪರ್ ಮ್ಯಾಚ್:
    ಪಂದ್ಯಕ್ಕೆ ಹೆಚ್ಚು ರೋಚಕತೆ ಮೂಡಿಸುವ ಸಲುವಾಗಿ ‘ಸೂಪರ್ ಮ್ಯಾಚ್’ವೊಂದನ್ನು ಅಳವಡಿಸಲಾಗಿದೆ. ಪುರುಷರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಆಟಗಾರನೊಬ್ಬ 7 ಅಂಕ ಮುಟ್ಟಿದ ಬಳಿಕ ತಂಡದಲ್ಲಿರುವ ಮತ್ತೋರ್ವ ಆಟಗಾರನ್ನು ಕೂಡಿಕೊಂಡು ಡಬಲ್ಸ್ ಮುಂದುವರಿಸುವುದು, 14 ಪಾಯಿಂಟ್ಸ್ ಮುಟ್ಟಿದ ಬಳಿಕ ಮಹಿಳಾ ಆಟಗಾರ್ತಿ ಸೇರಿಸಿಕೊಂಡು ಮೂವರು ಷಟ್ಲರ್ ಆಟ ಮುಂದುವರಿಸಬೇಕು. 21 ಪಾಯಿಂಟ್ಸ್ ತಲುಪಿದ ತಂಡ ವಿಜೇತವಾಗಲಿದೆ.

    * ಮುಂದಿನ ವಾರ ಆಟಗಾರರ ಹರಾಜು
    ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಆವರಣದಲ್ಲಿ ಜುಲೈ 1ರಿಂದ 10ರವರೆಗೆ ಲೀಗ್ ನಡೆಯಲಿದೆ. ಪ್ರತಿ ತಂಡದಲ್ಲೂ 10 ಆಟಗಾರರು ಇರಲಿದ್ದು, ಕನಿಷ್ಠ 5 ಕರ್ನಾಟಕದ ಆಟಗಾರರಿರುವುದು ಕಡ್ಡಾಯ. ಉಳಿದಂತೆ 2 ವಿದೇಶಿ ಹಾಗೂ ಮೂವರು ಮಹಿಳಾ ಷಟ್ಲರ್‌ಗಳು ಇರಲಿದ್ದಾರೆ. ಟೂರ್ನಿ ಒಟ್ಟು 60 ಲಕ್ಷ ರೂ. ಬಹುಮಾನ ಹೊಂದಿದ್ದು, ವಿಜೇತ ತಂಡ 24 ಲಕ್ಷ ರೂ. ರನ್ನರ್‌ಅಪ್ ತಂಡ 12 ಲಕ್ಷ ರೂ. ಗಳಿಸಲಿದೆ. ಟ್ರೋಫಿ ಹಾಗೂ ತಂಡಗಳ ಜೆರ್ಸಿಯನ್ನು ಇದೇ ವೇಳೆ ಅನಾವರಣಗೊಳಿಸಲಾಗುತ್ತಿದೆ. ಲೀಗ್‌ನಲ್ಲಿ ಆಡಲು 400 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದು, ಮುಂದಿನ ವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts