More

    ಸೂಕ್ತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿ

    ಬಾದಾಮಿ: ಇಲ್ಲಿನ ಅಗಸ್ತ್ಯತೀರ್ಥ ಹೊಂಡದ ದಂಡೆ ಮೇಲಿರುವ 96 ಮನೆಗಳ ಸ್ಥಳಾಂತರ ಹಾಗೂ ಪುನರ್ವಸತಿ ಕುರಿತಂತೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಅಲ್ಲಿನ ಸಂತ್ರಸ್ತರು 2013 ರಲ್ಲಿ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾನೂನಿನಂತೆ ಸ್ಥಳಾಂತರಗೊಳಿಸಲು ಆಗ್ರಹಿಸಿದರು.

    ಈ ವಿಷಯವಾಗಿ ಪುರಾತನ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ನಡೆದ ಸಂತ್ರಸ್ತರ ಸಭೆಯಲ್ಲಿ ಮೇಲಿನಂತೆ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ ಸಂತ್ರಸ್ತರು, ನಾವು ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಮತ್ತು ನಮಗೆ ಸರ್ಕಾರದ ಪುನರ್ವಸತಿ ನಿಯಮದಂತೆ ಸ್ಥಳಾಂತರ ಪ್ರಕ್ರಿಯೆ ನಡೆಯಬೇಕೆಂಬುದು ನಮ್ಮಲ್ಲೆರ ಆಶಯವಾಗಿದೆ. ನಾವುಗಳು ಸಭೆ ಸೇರಿ ನಿರ್ಣಯಿಸಿದಂತೆ ಸರ್ಕಾರಕ್ಕೆ ನಾವು ಸಹಕಾರ ನೀಡಲು ಸಿದ್ಧರಿದ್ದೇವೆ. ಆದರೆ, ನಮಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು.

    ಶೌಕತ್ ಸೌದಾಗಾರ ಮಾತನಾಡಿ, ಸಹಕಾರ ನೀಡುವ ಸದುದ್ದೇಶದಿಂದ ನಾವು ಬಾಂಡ್ ನೀಡಿದ್ದೇವೆ. ಅದನ್ನು ಸದುಪಯೋಗ ಪಡಿಸುವ ಬದಲು ನಮ್ಮ ಮೇಲೆ ಬ್ರಹ್ಮಾಸವಾಗಿ ಪ್ರಯೋಗಿಸಿ ನಮ್ಮನ್ನು ತೆರವುಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. 60ಕ್ಕೂ ಹೆಚ್ಚು ಜನರು ಬಾಂಡ್ ಮೇಲೆ ಒಪ್ಪಿಗೆ ನೀಡಿ ಸಹಕಾರ ನೀಡಿದ್ದೇವು. ಇನ್ನುಳಿದ ಜನರು ಒಪ್ಪಿಗೆ ಪತ್ರ ನೀಡುವವರಿದ್ದರು. ಆದರೆ ಅಷ್ಟರಲ್ಲಿಯೇ ಅಧಿಕಾರಿಗಳು ನಮ್ಮ ಮೇಲೆ ತಮ್ಮ ಅಧಿಕಾರದ ಗದ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

    ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಖಾಲಿ ಇರುವ ನಿವೇಶನಗಳನ್ನು ಸಂತ್ರಸ್ತರಿಗೆ ಕೊಡಿಸಲು ಶಾಸಕರಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ನಿವೇಶನಗಳನ್ನು ಪಡೆದು ಸ್ಥಳಾಂತರಗೊಳ್ಳಲು ನೀವು ಸಮ್ಮತಿಸಬೇಕೆಂದು ಕೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಸಮ್ಮತಿ ನೀಡಿದರು.

    ಗೌರಮ್ಮ ರಾಮದುರ್ಗ, ಅಬ್ದುಲ್ ಖಾಜಿ, ಶಾಬುದ್ದೀನ್ ಸೌದಾಗಾರ, ಡಾ.ವಿ.ವೈ.ಭಾಗವತ, ಸಾಯನಬ್ಬಿ ಮುಲ್ಲಾ, ಮಹಿಬೂಬ ಖಾಜಿ, ಹನುಮಂತ ರಜಪುತ, ಾರೂಕ್ ದೊಡಮನಿ, ಸಲೀಂ ಜಮಾದಾರ, ಸಿಕಂದರ ತಳಮುಸರಿ, ಅಬ್ದುಲ್‌ಗಾರ ಹೊಂಡದಕಟ್ಟಿ, ಸುಗ್ರಾಬಿ ಬಾಗವಾನ, ರಿಜ್ವಾನ ಜಮಖಾನೆ, ರಾಜೇಸಾಬ ಯಾದವಾಡ, ಪ್ರಕಾಶ ದೊಡಮನಿ, ಕಲಾವತಿ ಕುಲಕರ್ಣಿ, ನಾರಾಯಣಭಟ್ಟ ಜೋಶಿ, ವೆಂಕಟೇಶ ಕುಷ್ಟಗಿ, ಮಹ್ಮದಗೌಸ್ ಜಮಾದಾರ ಸೇರಿ ಸಂತ್ರಸ್ತ ಕುಟುಂಬದ ನೂರಾರು ಜನ ಭಾಗವಹಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts