More

    ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ

    ಬೆಂಗಳೂರು: ಶೂಗಳಿಂದ ಕೆಟ್ಟ ವಾಸನೆ ಬರುವುದು ಸಾಮಾನ್ಯವಾಗಿದೆ. ಬಿಸಿಲಿನ ದಿನಗಳು ಮತ್ತು ಹೇರಳವಾದ ಬೆವರುವಿಕೆಯ ದಿನಗಳಲ್ಲಿ ಶೂಗಳಿಂದ ಬರುವ ವಾಸನೆ ಬರುತ್ತದೆ. ಮತ್ತು ಈ ಕೆಟ್ಟ ವಾಸನೆಯನ್ನು ಹೊಗಲಾಡಿಸಲು ಅನುಸರಿಸಬೇಕಾದ ನೈಸರ್ಗಿಕ ಸಲಹೆಗಳು ಯಾವುವು ಎಂಬುದನ್ನು ಈಗ ತಿಳಿಯೋಣ.

    ಶೂಗಳಿಂದ ದರ್ವಾಸನೆ ಬರುತ್ತಿದ್ದರೆ ಈ ಸರಳ ಮಾರ್ಗವನ್ನು ಅನುಸರಿಸಿದರೆ ನಿಮ್ಮ ಬೂಟುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ನಿಮ್ಮ ಪಾದಗಳನ್ನು ಸಹ ಸ್ವಚ್ಛವಾಗಿಟ್ಟುಕೊಂಡರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

    ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ

    1) ಬೂಟುಗಳನ್ನು ತೊಳೆಯುವಾಗ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು, ಶೂ ಒಣಗಿದ ನಂತರ ವಾಸನೆ ಬರುವುದಿಲ್ಲ

    2) ರಾತ್ರಿ ಶೂಗಳನ್ನು ಬಿಟ್ಟ ನಂತರ ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಹಾಕಿ. ಇದು ಶೂ ಒಳಗಿನ ಬೆವರಿನ ವಾಸನೆ, ಸೂಕ್ಷ್ಮಾಣುಗಳನ್ನು ಹೀರಿಕೊಳ್ಳುತ್ತದೆ.

    3) ಬೂಟುಗಳನ್ನು ಬಿಚ್ಚಿದ ನಂತರ ಅದರಲ್ಲಿ ಎರಡು ಕರ್ಪೂರದ ಬಿಲ್ಲೆಗಳನ್ನು ಹಾಕಿ. ಹೀಗೆ ಮಾಡುವುದರಿಂದ ಕರ್ಪೂರದ ಬಿಲ್ಲೆಗಳು ಶೂಗಳಿಂದ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತವೆ.

    4) ಶೂಗಳನ್ನು ಧರಿಸುವ ಮೊದಲು 10 ನಿಮಿಷಗಳ ಕಾಲ ಅಡಿಗೆ ಸೋಡಾ ನೀರಿನಲ್ಲಿ ಪಾದಗಳನ್ನು ಇರಿಸಿ. ಹೀಗೆ ಮಾಡುವುದರಿಂದ ಪಾದಗಳಿಂದ ಬರುವ ಬೆವರು ಮತ್ತು ದುರ್ವಾಸನೆ ಕಡಿಮೆಯಾಗುತ್ತದೆ.

    ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ

    5) ಅರ್ಧ ಬಕೆಟ್ ಉಗುರುಬೆಚ್ಚಗಿನ ನೀರು ಮತ್ತು ವಿನೆಗರ್‌ನಲ್ಲಿ ಪಾದಗಳನ್ನು 15 ನಿಮಿಷಗಳ ಕಾಲ ಇರಿಸಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡಿದರೆ ನಿಮ್ಮ ಪಾದಗಳಿಂದ ದುರ್ವಾಸನೆ ದೂರವಾಗುತ್ತದೆ.

    ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ

    6) ಶೂನಿಂದ ವಾಸನೆ ಬರುತ್ತೆ ಎನ್ನುವವರು ಕಾಲಿಗೆ ಡಿಯೋಡರೆಂಟ್ ಹಾಕಬಹುದು. ಇದ್ರಿಂದ ವಾಸನೆ ಕಡಿಮೆಯಾಗುತ್ತದೆ. ಆದ್ರೆ ಒಳ್ಳೆ ಕಂಪನಿಯ ಡಿಯೋ ಬಳಸಲು ಮರೆಯಬೇಡಿ.

    ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ

    7) ಶೂ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆಗಾಗ ಶೂ ತೊಳೆಯುತ್ತಿರಿ. ಹಾಗೆ ಪ್ರತಿ ದಿನ ಸಾಕ್ಸ್ ಕ್ಲೀನ್ ಮಾಡಿ. ಶೂ ತೊಳೆಯುತ್ತಿದ್ದರೆ ಅದು ಫ್ರೆಶ್ ಆಗಿರುತ್ತದೆ. ಇದ್ರಿಂದ ವಾಸನೆ ತಡೆಯಬಹುದು.

    ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts