More

    ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ತೆಗೆದುಹಾಕುವೆ

    ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಅಂಟಿಕೊಂಡಿರುವ ‘ಹಿಂದುಳಿದ ಕ್ಷೇತ್ರ’ ಎನ್ನುವ ಹಣೆಪಟ್ಟಿ ತೆಗೆದುಹಾಕುವುದೇ ನನ್ನ ಗುರಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ 8 ಲಕ್ಷ ರೂ. ಶಾಸಕರ ನಿಯಲ್ಲಿ ರಸ್ತೆಯ ಎರಡೂ ಬದಿಗೆ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿ ಯಿಂದ ವಂಚಿತವಾಗಿದೆ. ಬೆಳಗಾವಿ ನಗರದ ಮಗ್ಗುಲಲ್ಲೇ ಇದ್ದರೂ, ಸರ್ಕಾರದಿಂದ ನಿರೀಕ್ಷಿತ ಸೌಲಭ್ಯ ಸಿಗುತ್ತಿರಲಿಲ್ಲ. ಹಾಗಾಗಿ ‘ಹಿಂದುಳಿದ ಕ್ಷೇತ್ರ’ ಎಂದೇ ಕರೆಯಲಾಗುತ್ತಿದೆ. ನಾನು ಶಾಸಕಿಯಾದ ಬಳಿಕ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಅಭಿವೃದ್ಧಿ ಕೈಗೊಂಡು, ಮಾದರಿ ಕ್ಷೇತ್ರವನ್ನಾಗಿಸಬೇಕು ಎಂದು ಯೋಚಿಸಿದ್ದೆ. ನಿಮ್ಮ ಆಶೀರ್ವಾದದಿಂದ ಶಾಸಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸರ್ಕಾರಕ್ಕೆ ಹೆಚ್ಚಿನ ಒತ್ತಡ ಹಾಕಿ ಅನುದಾನ ತರುತ್ತಿದ್ದೇನೆ ಎಂದು ತಿಳಿಸಿದರು.

    ನನ್ನ ವಿಚಾರವಾಗಿ ಯಾರು ಏನೇ ಹೇಳಿದರೂ, ಕ್ಷೇತ್ರದ ಜನರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ. ಜನರ ನೆಮ್ಮದಿಯಲ್ಲೇ ನಾನೂ ನೆಮ್ಮದಿ ಕಾಣುತ್ತೇನೆ. ನಿಮ್ಮ ಮುಖದಲ್ಲಿ ಶಾಶ್ವತವಾಗಿ ನಗು ಕಾಣುವುದೇ ನನ್ನ ಆಶಯ ಎಂದು ಹೆಬ್ಬಾಳ್ಕರ್ ಹೇಳಿದರು. ತಾಪಂ ಸದಸ್ಯ ನಿಲೇಶ ಚಂದಗಡಕರ್, ಗ್ರಾಪಂ ಸದಸ್ಯರಾದ ಕಲ್ಲಪ್ಪ ರಾಮಚಣ್ಣವರ, ಶಹಬಾಜ್ ಶೇಖ್, ಪರಶುರಾಮ ಬಾಗಣ್ಣವರ, ಶೀತಲ ಜಕ್ಕಣ್ಣವರ, ಚಂದ್ರಕಾಂತ ಧರೆಣ್ಣವರ, ವಿಠ್ಠಲ ಕುರುಬರ, ರಾಕೇಶ ಬುರುಡ, ರಮಣ ರಾಮಚಣ್ಣವರ, ಮನೋಜ ಕಾಚುಗೋಳ, ಇಂದ್ರಜಿತ ಕಾಚುಗೋಳ, ಅರ್ಜುನ ಕಾಂಬಳೆ, ವಿವೇಕ ಕಾಚುಗೋಳ, ಮಹೇಶ ಸಂಗೆಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts