More

    ಬಜೆಟ್​ ಬಿಡುಗಡೆ ಆಗದ ಹಿನ್ನೆಲೆ: ಅಬಕಾರಿ ಇಲಾಖೆ ಸಿಬ್ಬಂದಿಗೆ ವೇತನ ವಿಳಂಬ

    ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಸಂಪನ್ಮೂಲ ತಂದುಕೊಡುವ ಅಬಕಾರಿ ಇಲಾಖೆಯ ಸಿಬ್ಬಂದಿಗೆ ಮೂರ್ನಾಲ್ಕು ವರ್ಷಗಳಿಂದ ನಿಗದಿತ ಸಮಯದಲ್ಲಿ ವೇತನವಾಗುತ್ತಿಲ್ಲ. ಖಜಾನೆ 2ರ ತಂತ್ರಾಂಶ ಗೊಂದಲ, ಬಜೆಟ್​ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ವೇತನ ವಿಳಂಬದಿಂದಾಗಿ ಆರ್ಥಿಕ ನಿರ್ವಹಣೆಗೆ ಇಲಾಖೆ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ.

    2023-24ನೇ ಸಾಲಿನಲ್ಲಿ ಇಲಾಖೆ, ಸರ್ಕಾರಕ್ಕೆ 34,100 ಕೋಟಿ ರೂ.ಆದಾಯ ತಂದುಕೊಟ್ಟಿದೆ. ಪ್ರತಿ ತಿಂಗಳು ಸರ್ಕಾರಕ್ಕೆ ಸರಾಸರಿ 2,500 ಕೋಟಿ ರೂ. ಮದ್ಯ ಮಾರಾಟದಿಂದ ಆದಾಯ ಬರುತ್ತಿದೆ. ಆದರೆ, ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ನೀಡಲು ಬಜೆಟ್​ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿಯೂ ಖಜಾನೆ 2ರ ತಂತ್ರಾಂಶ ಗೊಂದಲ,ಸರ್ವರ್​ ಸಮಸ್ಯೆಯಿಂದ ವೇತನ ವಿಳಂಬವಾಗುತ್ತಿದೆ. ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು (ಎಚ್​ಆರ್​ಎಂಎಸ್​) ಖಜಾನೆ-1ರಿಂದ ಖಜಾನೆ -2ರ ತಂತ್ರಾಂಶಕ್ಕೆ ಈಗಾಗಲೇ ವರ್ಗಾಯಿಸಲಾಗಿದೆ. ಈ ಕಾರಣಕ್ಕೆ ಸಮಸ್ಯೆ ಉದ್ಬವಿಸಿದೆ. ಇದಕ್ಕೂ ಮುನ್ನ ಖಜಾನೆ 1ರಲ್ಲಿ ಬಿಲ್​ಗಳನ್ನು ತಯಾರಿಸಿ ಖಜಾನೆಗೆ ಸಲ್ಲಿಸಿದ್ದಾಗ ವೇತನಯಾಗುತ್ತಿತ್ತು. ಆದರೆ ಇದೀಗ, ಬಿಲ್​ ತಯಾರಿಕೆ, ಬಿಲ್​ಗಳನ್ನು ಖಜಾನೆಗೆ ಸಲ್ಲಿಸುವುದು, ಜಮೆ, ಸಂದಾಯ, ಠೇವಣಿ ನಿರ್ವಹಣೆಯನ್ನು ಖಜಾನೆ2 ತಂತ್ರಾಂಶದ ಮೂಲಕವೇ ನಿರ್ವಹಿಸಲಾಗುತ್ತಿದೆ.

    ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನವಾಗಿ ಈಗಾಗಲೇ ಎರಡು ವಾರ ಕಳೆದಿದೆ. ಆದರೆ, ಅಬಕಾರಿ ಇಲಾಖೆಯ ಸಿಬ್ಬಂದಿಗೆ ಪ್ರತಿ ತಿಂಗಳು ಮೂರನೇ ವಾರದಲ್ಲಿ ವೇತನ ಬರುತ್ತಿದೆ. ಚುನಾವಣೆ ಸೇರಿ ಇಲಾಖೆ ಇತರೆ ಕಾರ್ಯ ಮಾಡುತ್ತಿದ್ದೇವೆ. ಎರಡೆರಡು ಕಡೆಯ ಕೆಲಸದಿಂದ ಮಾನಸಿಕವಾಗಿ ಬಳಲುವಂತಾಗಿದೆ. ಸೂಕ್ತ ಸಮಯದಲ್ಲಿ ವೇತನ ಸಿಗದೆ ಬಾಡಿಗೆ ಕಟ್ಟಲು, ಕಂತು ಪಾವತಿ ಸೇರಿ ಕುಟುಂಬ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

    ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದ ರೈತರು!

    ಪ್ರತಿ ಬಾರಿಯೂ ಬಜೆಟ್​ ರಿಲೀಸ್​ ಆಗುತ್ತಿಲ್ಲ
    ಜಂಟಿ ಆಯುಕ್ತರು, ಉಪ ಆಯುಕ್ತರು, ಉಪ ನಿರ್ದೇಶಕರು, ಹಿರಿಯ ಲೆಕ್ಕಾಧಿಕಾರಿಗಳು, ಹಿರಿಯ ಆಂತರಿಕ ಪರಿಶೋಧಕರು, ಅಧೀಕ್ಷಕರು, ರಾಸಾಯನಿಕ ತಜ್ಞರು, ಉಪ ಅಧೀಕ್ಷಕರು, ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವೀತಿಯ ದರ್ಜೆ ಸಹಾಯಕರು, ಅಬಕಾರಿ ರಕ್ಷಕರು ಹಾಗೂ ವಾಹನ ಚಾಲಕರು ಸೇರಿ ಇಲಾಖೆಯ ಎಲ್ಲ ನೌಕರರ ವೇತನವು ಖಜಾನೆ&2ರಲ್ಲಿ ಆಗುತ್ತಿದೆ. ಹೆಡ್​ ವೈಸ್​ ಬಜೆಟ್​ ರಿಲೀಸ್​ಯಾಗುತ್ತಿದ್ದು, ಮೆಡಿಕಲ್​ ಅಲ್ಲೋವನ್ಸ್​ ಹೆಡ್​, ಡಿಡಿ ಅಲ್ಲೋವೆನ್ಸ್​ ಹೆಡ್​, ಸ್ಟಾಪ್​ ಪೇ ಹೆಡ್​ ಸೇರಿ 4 ಹೆಡ್​ನಲ್ಲಿ ಹಣ ಬಿಡುಗಡೆಯಾಗುತ್ತದೆ. ಆದರೆ, ಈ ನಾಲ್ಕು ಹೆಡ್​ನಲ್ಲಿ ನೌಕರರಿಗೆ ವೇತನ ಆಗುವಷ್ಟು ಬಜೆಟ್​ ರಿಲೀಸ್​ ಮಾಡದೆ ಕೆಲ ಹೆಡ್​ನಲ್ಲಿ ಹಣ ಹಾಕಿ ಇನ್ನೂ ಕೆಲ ಹೆಡ್​ನಲ್ಲಿ ಖಾಲಿ ಇಡುತ್ತಿದ್ದಾರೆ. ಈ ಕ್ರಮದಿಂದ ವೇತನ ಬಿಲ್​ ಪಾಸ್​ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇದ್ದರೂ ಕ್ರಮಕೈಗೊಳ್ಳುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts