More

    ಮಂಡ್ಯದಲ್ಲಿ ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ! 30 ವರ್ಷ ದಾಟಿದ್ರೂ ಮದ್ವೆಯಾಗದ ಹಿನ್ನೆಲೆ ದೇವರ ಮೊರೆ

    ಮಂಡ್ಯ: ಒಂದು ಹೆಣ್ಣಿಗೆ ಒಂದು ಗಂಡು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಇಂದು ಎಷ್ಟೋ ಯುವಕರಿಗೆ ಮದುವೆ ಆಗಲು ಒಂದು ಹೆಣ್ಣು ಸಿಗದೇ ಪರದಾಡುತ್ತಿದ್ದಾರೆ. ವಯಸ್ಸು ದಾಟಿ ಬಿಳಿಗೂದಲೂ ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು ಸಹ ನಮ್ಮ ನಡುವೆ ಇದ್ದಾರೆ. ಇದೀಗ ತಮಗೆ ವಧುವನ್ನು ಕರುಣಿಸಪ್ಪಾ ಅಂತಾ ಬ್ರಹ್ಮಚಾರಿಗಳೆಲ್ಲ ದೇವರ ಮೊರೆ ಹೋಗಿದ್ದಾರೆ.

    ಈ ಅಪರೂಪದ ಸಂಗತಿಗೆ ಸಕ್ಕರೆ ನಾಡು ಮಂಡ್ಯ ಸಾಕ್ಷಿಯಾಗಿದೆ. ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಎಂಬ ಶೀರ್ಷಿಕೆಯೊಂದಿಗೆ ಅವಿವಾಹಿತರು ಪಾದಯಾತ್ರೆ ಮೂಲಕ ಮಾದಪ್ಪನ ದರ್ಶನಕ್ಕೆ ಹೊರಡಲಿದ್ದಾರೆ. 30 ವರ್ಷ ದಾಟಿದರು ಇನ್ನೂ ಮದುವೆಯಾಗದ ಹಿನ್ನೆಲೆ ದೇವರ ಮೊರೆ ಹೋಗುತ್ತಿದ್ದಾರೆ.

    ಶೀಘ್ರ ವಧು ಸಿಗಲೆಂದು ಪ್ರಾರ್ಥಿಸಿ 200ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಇದೇ ಫೆ.23 ರಂದು ಮಂಡ್ಯದ ಕೆಎಂ ದೊಡ್ಡಿಯಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಯುವಕರು ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಪಯಣ ಬೆಳೆಸಲಿದ್ದಾರೆ. ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೇಗಾಲ ಹಾಗೂ ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟವನ್ನು ಯುವಕರು ತಲುಪಲಿದ್ದಾರೆ.

    ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ಆಯೋಜಕರಿಂದ 3 ಷರತ್ತು ಹಾಕಲಾಗಿದೆ. ಮೊದಲನೆಯದು ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಎರಡನೆಯದು ವಿವಾಹಿತರಿಗೆ ಪಾದಾಯಾತ್ರೆಯಲ್ಲಿ ಅವಕಾಶ ಇಲ್ಲ ಮತ್ತು ಮೂರನೆಯದು ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಗೆ ಬರುವಂತಿಲ್ಲ.

    ಅವಿವಾಹಿತರನ್ನು ಸಂಘಟಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಶಿವಪ್ರಸಾದ್ ಹಾಗೂ ವೆಂಕಟೇಶ್ ಎಂಬುವರ ನೇತೃತ್ವದಲ್ಲಿ ಈ ಬ್ರಹ್ಮಚಾರಿಗಳ ಪಾದಯಾತ್ರೆಯನ್ನು ಆಯೋಜನೆ ಮಾಡಲಾಗಿದೆ. ಈ ಪಾದಾಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಫೆ.15ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. (ದಿಗ್ವಿಜಯ ನ್ಯೂಸ್​)

    ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ

    ಬಾರದ ಆಂಬ್ಯುಲೆನ್ಸ್​… ತಂದೆಯನ್ನು ತಳ್ಳುಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದ 6 ವರ್ಷದ ಬಾಲಕ

    ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಬ್ರೆಡ್​ ಪ್ಯಾಕೆಟ್​ನಲ್ಲಿ ಜೀವಂತ ಇಲಿ ಕಂಡು ಗ್ರಾಹಕ ಶಾಕ್​! ಕಂಪನಿ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts