More

    ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ

    ಅಂಕಾರ: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೂ 28 ಸಾವಿರ ಸಾವು ಮತ್ತುಬ 6 ಸಾವಿರ ಕಟ್ಟಡಗಳು ನಾಶವಾಗಿವೆ. ಅದರಲ್ಲೂ ಟರ್ಕಿ, 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ನಲುಗಿ ಹೋಗಿದೆ. ಸಾವು-ನೋವುಗಳ ನಡುವೆ ಪವಾಡ ರೀತಿಯಲ್ಲಿ ಕೆಲ ಮಂದಿ ಬದುಕುಳಿಯುತ್ತಿರುವುದು ಮುಂದುವರಿದಿದೆ.

    ಕೆಲ ದಿನಗಳ ಹಿಂದಷ್ಟೇ ಆಗ ತಾನೇ ಜನಿಸಿದ ಹಾಗೂ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ ನವಜಾತ ಶಿಶುವನ್ನು ಭೂಕಂಪದ ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಲಾಯಿತು. ಆ ಮಗುವಿಗೆ ಸಿರಿಯಾ ಸರ್ಕಾರ ಅಯಾ ಎಂದು ಹೆಸರಿಟ್ಟಿದ್ದು, ಅದರ ಅರ್ಥ ಪವಾಡ.

    ಇದೀಗ ಎರಡು ತಿಂಗಳ ಮಗುವನ್ನು ನಿನ್ನೆಯಷ್ಟೇ (ಫೆ.11) ರಕ್ಷಣೆ ಮಾಡಲಾಗಿದೆ. ಟರ್ಕಿಯ ಹತಾಯ್​ ನಗರದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕ್ಕಿದ್ದ ಮಗುವನ್ನು ಭೂಕಂಪ ಸಂಭವಿಸಿದ 128 ಗಂಟೆಗಳ ಬಳಿಕ ರಕ್ಷಣೆ ಮಾಡಲಾಗಿದೆ. ನಿಜಕ್ಕೂ ಮಗು ಬದುಕುಳಿದಿರುವುದು ಪವಾಡವೇ ಸರಿ. ಮಗು ಬದುಕುಳಿದಿದ್ದನ್ನು ನೋಡಿದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

    ಭೂಕಂಪ ಸಂಭವಿಸಿ ಒಂದು ವಾರ ಸಮೀಪಿಸಿದರೂ ಇನ್ನೂ ರಕ್ಷಣಾ ಕಾರ್ಯ ನಡೆಯುತ್ತಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಹೆಪ್ಪುಗಟ್ಟುವ ಹವಾಮಾನದ ಹೊರತಾಗಿಯೂ ಲಕ್ಷಾಂತರ ಜನರು ಸಹಾಯವನ್ನು ಎದುರು ನೋಡುತ್ತಿದ್ದಾರೆ. ಭೂಕಂಪ ಉಂಟಾದ 5 ದಿನಗಳ ಬಳಿಕ ರಕ್ಷಿಸಲ್ಪಟ್ಟವರಲ್ಲಿ ಎರಡು ವರ್ಷದ ಹೆಣ್ಣು ಮಗು, 6 ತಿಂಗಳ ಗರ್ಭಿಣಿ ಮತ್ತು 70 ವರ್ಷ ಅಜ್ಜಿಯು ಸೇರಿದ್ದಾರೆ.

    ಸೋಮವಾರ (ಫೆ.6) 7.8 ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪವು, ಟರ್ಕಿ ಮತ್ತು ಸಿರಿಯಾದಾದ್ಯಂತ ಹಲವಾರು ಭೀಕರತೆಯನ್ನು ಸೃಷ್ಟಿ ಮಾಡಿದೆ. ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ. 2003ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ 31 ಸಾವಿರ ಮಂದಿ ಅಸುನೀಗಿದ್ದರು.

    ಸದ್ಯದ ಮಾಹಿತಿ ಪ್ರಕಾರ ಟರ್ಕಿಯಲ್ಲಿ 24,617 ಮಂದಿ ಮೃತಪಟ್ಟಿದ್ದರೆ, ಸಿರಿಯಾದಲ್ಲಿ 3500 ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್​)

    ಬಾರದ ಆಂಬ್ಯುಲೆನ್ಸ್​… ತಂದೆಯನ್ನು ತಳ್ಳುಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದ 6 ವರ್ಷದ ಬಾಲಕ

    ರವೀಂದ್ರ ಕೌಶಿಕ್ ಬಯೋಪಿಕ್!; ಭಾರತದ ನಂಬರ್ 1 ಗೂಢಚಾರಿ ಕುರಿತ ಸಿನಿಮಾ

    ದಶಪಥ ಹೆದ್ದಾರಿ, ಪ್ರಧಾನಿ ಮೋದಿ ಶಹಬಾಸ್​ಗಿರಿ; ಸಿಎಂ ಬೊಮ್ಮಾಯಿ ಟ್ವೀಟ್​ಗೆ ಪ್ರತಿಕ್ರಿಯೆ, ಡಬಲ್ ಎಂಜಿನ್ ಸರ್ಕಾರದ ಚಮತ್ಕಾರ ಎಂದು ಬಣ್ಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts