More

    ಪಾಲಕ್​ ಸೊಪ್ಪು ಅಂದುಕೊಂಡ ಜನರಿಗೆ ಕಾದಿತ್ತು ಶಾಕ್​; ನಶೆಯಲ್ಲಿ ಮುಳುಗಿದ 200ಕ್ಕೂ ಹೆಚ್ಚು ಜನ..!

    ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ಪಾಲಕ್​ ಸೊಪ್ಪು ಎಂದುಕೊಂಡು ಜನ ಸಲಾಡ್​ ಮಾಡಿಕೊಂಡು ಈ ಸೊಪ್ಪನ್ನು ತಿಂದಿದ್ದಾರೆ. ನಂತರ ಆಗಿದ್ದು ಘೋರ ದುರಂತ! ಜನ ಅಸಲಿಗೆ ತಿಂದಿದ್ದು ಒಂದು ರೀತಿಯ ಕಳೆ ಗಿಡದ ಎಲೆಗಳನ್ನು. ಇದರಿಂದ ಜನರು ತೀವ್ರವಾದ ಭ್ರಮೆಗಳಿಗೆ ಒಳಗಾಗಿದ್ದು ಇದರ ಎಫೆಕ್ಟ್​ ಬಹುತೇಕ ಅತಿಯಾಗಿ ನಶೆ ಮಾಡಿದ ರೀತಿಯಲ್ಲೇ ಇದೆ. ಈ ಗಿಡವನ್ನು ಗುರುತಿಸುವುದೇ ‘ನಾರ್ಕೋಟಿಕ್​ ಪ್ಲಾಂಟ್​’ ಎಂದು!

    ಆಗಿದ್ದೇನು?
    ಇದು, ಕೊಯ್ಲು ಮಾಡುವಾಗ ಪಾಲಕ್​ ಸೊಪ್ಪಿನ ಜೊತೆಗೆ ತಪ್ಪಿ ಸೇರಿಕೊಂಡಿದ್ದು ಮಾರುಕಟ್ಟೆ ತಲುಪಿದೆ. ಇದರಿಂದಾಗಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಸಲಿಗೆ ಅಲ್ಲಿನ ಜನರು ತಿಂದದ್ದು ಥಾರ್ನ್​ ಆ್ಯಪಲ್​ ಎನ್ನುವ ಕಳೆ ಗಿಡವನ್ನು.

    ಏನಿದು ಥಾರ್ನ್​​ ಆ್ಯಪಲ್?
    ಜಿಮ್ಸನ್‌ವೀಡ್ ಎಂದೂ ಕರೆಯಲ್ಪಡುವ ಥಾರ್ನ್​ ಆ್ಯಪಲ್​ (ಡಾಟುರಾ ಸ್ಟ್ರಾಮೋನಿಯಂ), ಸನ್ನಿ, ಗೊಂದಲ, ಭ್ರಮೆಗಳು, ಮಸುಕಾದ ದೃಷ್ಟಿ, ಕೆಂಪು ಮುಖ, ತ್ವರಿತ ಹೃದಯ ಬಡಿತ ಮತ್ತು ಒಣ ಬಾಯಿ ಮತ್ತು ಚರ್ಮದಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಈ ಗಿಡವನ್ನು ಮುಟ್ಟುವುದರಿಂದ ಕೆಲವರಿಗೆ ಚರ್ಮರೋಗ, ತಲೆನೋವು ಮತ್ತು ವಾಕರಿಕೆ ಉಂಟಾಗುತ್ತದೆ. 

    ಡಿಸೆಂಬರ್ 18 ರ ಹೊತ್ತಿಗೆ, ನ್ಯೂ ಸೌತ್ ವೇಲ್ಸ್, ವಿಕ್ಟೋರಿಯಾ ಮತ್ತು ಕ್ವೀನ್ಸ್‌ಲ್ಯಾಂಡ್‌ನಾದ್ಯಂತ 190 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ, ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹುಪಾಲು ಜನರು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts