More

    ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ ; ಆರೂವರೆ ವರ್ಷದ ಬಾಲಕಿಗೆ ಬ್ಲೂ ಬೇಬಿ ಸಿಂಡ್ರೋಮ್

    ತುಮಕೂರು: ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಆರೂವರೆ ವರ್ಷದ ಬಾಲಕಿಗೆ ಸಿದ್ಧಾರ್ಥ ಅಡ್ವಾನ್ಸ್ ್ಡ ಹಾರ್ಟ್ ಸೆಂಟರ್‌ನಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.

    ಬ್ಲೂ ಬೇಬಿ ಸಿಂಡ್ರೋಮ್‌ನೊಂದಿಗೆ ಜನಿಸಿದ್ದ ಬಾಲಕಿಯ ಹೃದಯದಲ್ಲಿ ಹುಟ್ಟಿನಿಂದಲೇ ದೋಷವಿದ್ದು, ಆಮ್ಲಜನಕಯುಕ್ತ ರಕ್ತವನ್ನು ಪ್ರತ್ಯೇಕಿಸಲು ಹೃದಯಕ್ಕೆ ಸಾಧ್ಯವಾಗುತ್ತಿರಲಿಲ್ಲ. ರಕ್ತ ಶ್ವಾಸಕೋಶಕ್ಕೆ ಹೋಗಿ ಶುದ್ಧಿಯಾಗಿ ಮರಳಿ ಹೃದಯಕ್ಕೆ ಬಂದು ರಕ್ತನಾಳದ ಮೂಲಕ ಸಂಚರಿಸುತ್ತಿರಲಿಲ್ಲ. ಅಂದರೆ ಶುದ್ಧ ರಕ್ತ ಹಾಗೂ ಅಶುದ್ಧ ರಕ್ತ (ಡೀ ಆಕ್ಸಿಜೆನೇಟೆಡ್ ರಕ್ತ )ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರ ಪರಿಣಾಮವಾಗಿ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಿಂದ ಹೊರಬರಲು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಗು ಆರೋಗ್ಯವಾಗಿದ್ದು ಈಗ ಶೇ.95ರಷ್ಟು ಆಮ್ಲಜನಕ ಪೂರೈಕೆಯಾಗುತ್ತಿದ್ದು ಸಾಮಾನ್ಯ ಸ್ಥಿತಿಗೆ ತಲುಪಿದೆೆ.

    5 ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆ: ಹೃದಯ, ಶ್ವಾಸಕೋಶ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನ ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದ್ದು, 5 ಗಂಟೆಗಳ ದೀರ್ಘ ಕಾಲ ಸಿದ್ಧಾರ್ಥ ಅಡ್ವಾನ್ಸ್ ್ಡ ಹಾರ್ಟ್‌ಸೆಂಟರ್ ಹಾಗೂ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ನೇತೃತ್ವದ ತಂಡವು ಶಸ್ತ್ರಚಿಕಿತ್ಸೆ ನಡೆಸಿತು. ಪಾಲಕರ ಮನವಿ ಮೇರೆಗೆ ಶಸ್ತ್ರಚಿಕಿತ್ಸೆಗೊಳಪಟ್ಟ ಮಗುವಿನ ಹೆಸರು ಬಹಿರಂಗಪಡಿಸಿಲ್ಲ.
    ತುಮಕೂರು ನಗರದಲ್ಲಿ ವಾಸಿಸುತ್ತಿರುವ ಆರೂವರೆ ವರ್ಷದ ಬಾಲಕಿಗೆ ತಾಯಿ ಇಲ್ಲ. ಅತ್ಯಂತ ಸಂಕೀರ್ಣವಾಗಿದ್ದ ಹೃದಯ ಶಸ್ತ್ರ ಚಿಕಿತ್ಸೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ಮಾಡಿದ್ದು, ಬಾಲಕಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಸಫಲವಾಗಿದೆ ಎಂದು ಸಾಹೇ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಿದ್ಧಾರ್ಥ ಅಡ್ವಾನ್ಸ್ ್ಡ ಹಾರ್ಟ್‌ಸೆಂಟರ್‌ನ ಡಾ.ತಮೀಮ್ ಅಹಮದ್, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಿಇಒ ಪಿ.ಕೆ.ಡಾ.ದೇವದಾಸ್, ಪ್ರಾಂಶುಪಾಲ ಡಾ.ಎ.ಜಿ.ಶ್ರೀನಿವಾಸಮೂರ್ತಿ, ಹಾರ್ಟ್‌ಸೆಂಟರ್ ಸಿಇಒ ಡಾ. ಪ್ರಭಾಕರ್ ಇದ್ದರು.

    ವೈದ್ಯರ ತಂಡ: ಡಾ.ತಮೀಮ್ ಅಹಮದ್ ನೇತೃತ್ವದ ಡಾ.ಅಬ್ದುಲ್, ಡಾ.ವಾಸುದೇವ್ ಬಾಬು, ಡಾ. ತಹೂರ್, ಡಾ.ನವೀನ್, ಡಾ.ಸುರೇಶ್, ಡಾ. ಆಶಿತ ಕಾಮತ್, ಡಾ. ನಾಗಾರ್ಜುನ, ವಿವೇಕ್, ಜಾನ್, ಡಾ.ನಿಕಿತಾ ಹಾಗೂ ತಾಂತ್ರಿಕ ಸಿಬ್ಬಂದಿ ತಂಡ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸಫಲವಾಗಿದೆ.

    ಬ್ಲೂ ಬೇಬಿ ಸಿಂಡ್ರೋಮ್?: ಹಿಮೋಗ್ಲೋಬಿನ್ ಎಂಬ ರಕ್ತ ಪ್ರೋಟೀನ್ ದೇಹದಾದ್ಯಂತ ಆಮ್ಲಜನಕದ ಸಾಗಣೆಗೆ ಕಾರಣವಾಗಿದೆ. ರಕ್ತವು ಆಮ್ಲಜನಕ ಸಾಗಿಸಲು ಸಾಧ್ಯವಾಗದಿದ್ದಲ್ಲಿ, ಇದು ಆಮ್ಲಜನಕದ ಕೊರತೆ ಉಂಟುಮಾಡಲಿದ್ದು, ಮಗುವಿನ ಚರ್ಮವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಮೆಥೆಮೊಗ್ಲೋಬಿನೆಮಿಯಾ, ಬ್ಲೂ ಬೇಬಿ ಸಿಂಡ್ರೋಮ್ ಎಂದು ಕರೆಯುತ್ತಾರೆ. ತುಟಿಗಳು, ಉಗುರು ಸೇರಿ ತೆಳ್ಳನೆಯ ಚರ್ಮವನ್ನು ಹೊಂದಿರುವ ಭಾಗಗಳಲ್ಲಿ ನೀಲಿ ಛಾಯೆ ಹೆಚ್ಚು ಗೋಚರಿಸುತ್ತದೆ. ವಿಶೇಷವಾಗಿ ಕಲುಷಿತ ನೀರು ಕುಡಿಯುವುದರಿಂದ ಈ ರೋಗ ಕಾಣಿಸಿಕೊಳ್ಳಲಿದೆ.

    ಇದೊಂದು ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲು. ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಗುವು ಸಂಪೂರ್ಣವಾಗಿ ಆರೋಗ್ಯವಾಗಿದೆ. ತುಮಕೂರಿನಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದೇ ಹಾರ್ಟ್ ಸೆಂಟರ್ ಇಲ್ಲದೆ ಇರುವುದನ್ನು ಗಮನಿಸಿ ವರ್ಷದ ಹಿಂದೆ ಹಾರ್ಟ್ ಸೆಂಟರ್ ತೆರೆಯಲಾಗಿದ್ದು, ಇದು ಸಾರ್ಥಕವೆನಿಸಿದೆ.
    ಡಾ.ಜಿ.ಪರಮೇಶ್ವರ್, ಅಧ್ಯಕ್ಷ, ಸಿದ್ದಾರ್ಥ ಶಿಕ್ಷಣ ಸಂಸ್ಥೆ

    ಆ.6ರಂದು ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹಾರ್ಟ್ ಸೆಂಟರ್‌ನಲ್ಲಿ ಈವರೆಗೆ 27ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆ, 50ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಅಂಜಿಯೋಗ್ರಾಮ್ ಸೇರಿ ಇದುವರೆಗೂ 300ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ.
    ಡಾ.ತಮೀಮ್ ಅಹಮದ್, ಸಿದ್ಧಾರ್ಥ ಅಡ್ವಾನ್ಸ್ ್ಡ ಹಾರ್ಟ್ ಸೆಂಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts