More

    ವರ್ಷದ ಆರಂಭದಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಎರಡು ಭಯಾನಕ ಭವಿಷ್ಯವಾಣಿಗಳು!

    ಸೋಫಿಯಾ: 2023ನೇ ವರ್ಷ ಮುಗಿದು 2024ನೇ ಹೊಸ ವರ್ಷ ಆರಂಭವಾಗಿ ಒಂದು ವಾರ ಮುಕ್ತಾಯವಾಗಿದೆ. ಅಷ್ಟರಲ್ಲೇ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯಗಳಲ್ಲಿ ವರ್ದ ಆರಂಭದಲ್ಲೇ ಎರಡು ಭವಿಷ್ಯ ನಿಜವಾಗಿವೆ.

    ಹೌದು, ಬಾಂಬಾ ವಂಗಾ ನುಡಿದ ಹಲವು ಭವಿಷ್ಯಗಳಲ್ಲಿ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ನುಡಿದ ಭವಿಷ್ಯವೂ ಒಂದು. ಅವರು ಹೇಳಿದಂತೆ ಹೊಸ ವರ್ಷದ ಆರಂಭದಲ್ಲೇ ಸೂರ್ಯೋದಯದ ನಾಡು ಜಪಾನ್​ 7.6 ತೀವ್ರತೆಯ ಪ್ರಬಲ ಭೂಕಂಪಕ್ಕೆ ನಲುಗಿತು. ಸರಣಿ ಭೂಕಂಪನಗಳಿಂದ ಸುನಾಮಿ ಭೀತಿ ಆವರಿಸಿದ್ದಲ್ಲದೆ, ಭೂಕಂಪನಕ್ಕೆ ನೂರಾರು ಮಂದಿ ಬಲಿಯಾದರು. ಸುಮಾರು 200ಕ್ಕೂ ಅಧಿಕ ಮಂದಿ ಕಣ್ಮರೆ ಸಹ ಆದರು.

    ಇದಲ್ಲದೆ, ಅಮೆರಿಕದ ಫ್ಲೊರಿಡಾ ರಾಜ್ಯದ ಮೈಮಿ ಮಾಲ್​ ಮೇಲೆ ಏಲಿಯನ್​ ಲ್ಯಾಂಡ್​ ಆದ ಸುದ್ದಿಯು ಹರಿದಾಡುತ್ತಿದೆ. ಏಲಿಯನ್​ ಬಗ್ಗೆಯೂ ಬಾಬಾ ವಂಗಾ ಅವರು ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಮಾಲ್‌ನಲ್ಲಿ 10 ಅಡಿ ಎತ್ತರದ ಅನ್ಯಗ್ರಹ ಸುತ್ತಾಡುತ್ತಿದೆ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಅಲ್ಲಿಗೆ ಜಮಾಯಿಸಿದ್ದರು. ಅಲ್ಲದೆ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆದರೆ, ವಿಡಿಯೋ ಅಧಿಕೃತತೆ ಖಚಿತವಾಗಿಲ್ಲ. ಈ ಎರಡೂ ಘಟನೆಗಳ ಮೂಲಕ ಬಾಬಾ ವಂಗಾ ನುಡಿದಿದ್ದ ಅನೇಕ ಭವಿಷ್ಯಗಳಲ್ಲಿ ಎರಡು ಭವಿಷ್ಯಗಳು ನಿಜವಾದಂತಿದೆ.

    ಯಾರೀ ಬಾಬಾ ವಂಗಾ?
    ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

    ಅನೇಕ ಭವಿಷ್ಯಗಳು ನಿಜವಾಗಿವೆ
    ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

    5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ
    ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2023ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ, 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಆಕೆಯ ಭವಿಷ್ಯದ ಭವಿಷ್ಯವಾಣಿಗಳು ಸೇರಿವೆ.

    2024ಕ್ಕೆ ಸಂಬಂಧಿಸಿದಂತೆ ಬಾಬಾ ವಂಗಾ ನುಡಿರುವ ಇತರೆ ಭವಿಷ್ಯವಾಣಿಗಳು ಈ ಕೆಳಕಂಡಂತಿದೆ.
    1. ಮುಂದಿನ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಸಹ ದೇಶವಾಸಿಯಿಂದಲೇ ಹತ್ಯೆಯ ಪ್ರಯತ್ನ ನಡೆಯಲಿದೆಯಂತೆ.
    2. ಯುರೋಪ್​ನಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಲಿವೆ ಮತ್ತು “ದೊಡ್ಡ ದೇಶ”ವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸಲಿದೆ.
    3. ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಲಿವೆಯಂತೆ.
    4. ಮುಂದಿನ ವರ್ಷ ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
    5. ಸೈಬರ್ ದಾಳಿಗಳು ಹೆಚ್ಚಾಗುತ್ತವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸುಧಾರಿತ ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ, ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟುಮಾಡಲಿದೆಯಂತೆ.
    6. 2024ರಲ್ಲಿ ಆಲ್ಝೈಮರ್ (ಮರೆವಿನ ಕಾಯಿಲೆ) ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಲಭ್ಯವಾಗಲಿವೆಯಂತೆ.
    7. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

    ಇದಿಷ್ಟು 2024ರಲ್ಲಿ ನಡೆಯಲಿದೆಯಂತೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ‘ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ’ ಎಂದು ಆಕೆ 1989ರಲ್ಲಿ ನುಡಿದಿದ್ದರು. 2021 ಮತ್ತು 2022 ಹಾಗೂ 2023ರಲ್ಲೂ ಬಾಬಾ ವಾಂಗಾರ ಕೆಲ ಭವಿಷ್ಯಗಳು ನಿಜವಾಗಿವೆ. ಇದೀಗ 2024ರಲ್ಲಿ ಘಟಿಸಲಿರುವ ಅನಾಹುತಗಳ ಬಗ್ಗೆ ಬಾಂಬಾ ವಾಂಗಾ ನುಡಿದಿರುವ ಭವಿಷ್ಯವಾಣಿ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಪುಟಿನ್​ ಹತ್ಯೆ ಯತ್ನದಿಂದ ಭೀಕರ ನೈಸರ್ಗಿಕ ವಿಕೋಪಗಳವರೆಗೆ! 2024ಕ್ಕೆ ಬಾಬಾ ವಂಗಾರ 7 ಭವಿಷ್ಯವಾಣಿಗಳಿವು…

    ಹಳೆಯ ಟಿವಿ ಬಿಡಿ ಭಾಗಗಳನ್ನು ಬಳಸಿ ರಚಿಸಿದ ರಾಮ ಮಂದಿರದ ಕಲಾಕೃತಿ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts