More

    ಭಾರತಕ್ಕೆ ಕಾದಿದೆಯಾ ಅಪಾಯ? ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚರ್ಚೆಯಾಗ್ತಿದೆ ಬಾಬಾ ವಂಗಾರ ಈ ಭವಿಷ್ಯವಾಣಿ

    ನವದೆಹಲಿ: 2022ನೇ ವರ್ಷ ಮುಗಿದು 2023ನೇ ಹೊಸ ವರ್ಷ ಬರುವುದಕ್ಕೆ ಇನ್ನು ಎರಡೇ ತಿಂಗಳು ಬಾಕಿ ಇದೆ. ಈ ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ಭವಿಷ್ಯಗಳು ಬಹು ಚರ್ಚಿತವಾಗಿವೆ. ಇವರು ನುಡಿದಿರುವ ಭವಿಷ್ಯಗಳಲ್ಲಿ ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು ಸೋವಿಯತ್​​ ಯೂನಿಯನ್​ ವಿಸರ್ಜನೆ ಸೇರಿದಂತೆ ಶೇ. 85 ರಷ್ಟು ಭವಿಷ್ಯವಾಣಿಗಳು ನಿಜವಾಗಿವೆ.

    ತಮ್ಮ ಜೀವನದ ಉದ್ದಕ್ಕೂ ವಂಗಾ ಬಾಬಾ ಅವರು ಸಾಕಷ್ಟು ಭವಿಷ್ಯಗಳು ನುಡಿದಿದ್ದು, ಅವುಗಳಲ್ಲಿ ಬಹುತೇಕ ಭವಿಷ್ಯಗಳು ನಿಜವಾಗಿವೆ. ಸುಮಾರು 111 ವರ್ಷಗಳ ಹಿಂದೆ 2022ನೇ ಇಸವಿ ಬಗ್ಗೆ ವಂಗಾ ಬಾಬಾ ಅವರು ನುಡಿದಿರುವ ಭಯಾನಕ ಭವಿಷ್ಯ ಮುಂದಿನ ಎರಡು ತಿಂಗಳಲ್ಲಿ ನಿಜವಾಗಬಹುದಾ ಎಂಬ ಆಂತಕ ಇದೀಗ ಎಲ್ಲರಲ್ಲೂ ಮನೆ ಮಾಡಿದೆ.

    ಇಲ್ಲಿಯವರೆಗೂ 2022ರ ಎರಡು ಭವಿಷ್ಯವಾಣಿಗಳು ನಿಜವಾಗಿವೆ. ಮೊದಲನೆಯದು ಆಸ್ಟ್ರೇಲಿಯಾದ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ಬಗ್ಗೆ ಹೇಳಿದ್ದರು. ವರದಿಯ ಪ್ರಕಾರ, ಆಸ್ಟ್ರೇಲಿಯಾದ ಪೂರ್ವ ಕರಾವಳಿಯು ಈ ವರ್ಷದ ಆರಂಭದಲ್ಲಿ ಅತಿಯಾದ ಮಳೆಯ ಪರಿಣಾಮವಾಗಿ ಗಮನಾರ್ಹವಾದ ಪ್ರವಾಹವನ್ನು ಕಂಡಿತು. ಎರಡನೆಯದು ಪ್ರಮುಖ ನಗರಗಳಲ್ಲಿ ಬರ ಮತ್ತು ನೀರಿನ ಕೊರತೆ ಇರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಈ ಮುನ್ಸೂಚನೆಯು ಪ್ರಸ್ತುತ ಯುರೋಪಿನಾದ್ಯಂತ ನಿಜವಾಗುತ್ತಿರುವಂತೆ ತೋರುತ್ತಿದೆ.

    ಭಾರತದ ವಿಚಾರವಾಗಿ ಬಂದರೆ, 2022ರಲ್ಲಿ ಮಿಡತೆ ದಾಳಿ ಮತ್ತು ಹಸಿವಿನ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು. 2022 ರಲ್ಲಿ ಪ್ರಪಂಚದಾದ್ಯಂತ ತಾಪಮಾನದ ಕುಸಿತದ ನಂತರ ಮಿಡತೆಗಳ ಏಕಾಏಕಿ ಹೆಚ್ಚಾಗುತ್ತದೆ. ಭಾರತವು ಮಾರಣಾಂತಿಕ ಮಿಡತೆ ದಾಳಿಯನ್ನು ಎದುರಿಸಲಿದೆ. ಮಿಡತೆಗಳಿಂದ ಬೆಳೆಗಳು ನಾಶವಾಗುವುದರಿಂದ ರಾಷ್ಟ್ರವ್ಯಾಪಿ ಕ್ಷಾಮಕ್ಕೆ ಕಾರಣವಾಗಬಹುದು ಎಂಬ ಭವಿಷ್ಯವಾಣಿ ನುಡಿಯಲಾಗಿದ್ದು, ಇನ್ನು ಎರಡು ತಿಂಗಳು ಬಾಕಿ ಇರುವಾಗ ಆಕೆಯ ಭವಿಷ್ಯ ನಿಜವಾಗುತ್ತದೋ ಇಲ್ಲವೋ ಕಾದು ನೋಡಬೇಕಿದೆ.

    ಖಗೋಳದಲ್ಲಿ ಅತಿದೊಡ್ಡ ಘಟನೆಯೊಂದು ನಡೆಯಲಿದೆ ಎಂದು ಬಾಬಾ ವಂಗಾ ಅವರು ಪ್ರತಿಪಾದಿಸಿದ್ದರು. 2023ರಲ್ಲಿ ಭೂಮಿಯ ಕಕ್ಷೆಯು ಕೆಲವು ರೀತಿಯಲ್ಲಿ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಘಟನೆಯಿಂದ ಭೂಮಿಯ ಮೇಲೆ ಹಲವಾರು ಬದಲಾವಣೆಗಳು ಉಂಟಾಗಿ, ದುರಂತಗಳು ಸಂಭವಿಸಬಹುದು. ಏಕೆಂದರೆ ಗ್ರಹಗಳ ಸಣ್ಣ ಹೊಂದಾಣಿಕೆಯು ಸಹ ಅನಗತ್ಯ ಮತ್ತು ಗಂಭೀರವಾದ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇದರ ಜೊತೆಗೆ 2028ರಲ್ಲಿ ಶುಕ್ರ ಗ್ರಹಕ್ಕೆ ಗಗನಯಾತ್ರಿ ಭೇಟಿ ನೀಡಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

    ಯಾರೀ ಬಾಬಾ ವಂಗಾ?
    ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದರು. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಅವರಿಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೆ ಜಗತ್ತಿನಲ್ಲಿ 51ನೇ ಶತಮನಾದವರೆಗೂ ಏನೇನು ಸಂಭವಿಸಲಿದೆ ಎನ್ನುವುದನ್ನು ಕಂಡುಕೊಂಡಿದ್ದರಂತೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ಸಂಭವಿಸಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾರೆ. ಅವರ ನಂಬಿಕೆ ಪ್ರಕಾರ 5079ಕ್ಕೆ ಜಗತ್ತಿನ ಅಂತ್ಯವಾಗಲಿದೆ.

    2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ‘ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ’ ಎಂದು ಆಕೆ 1989ರಲ್ಲಿ ನುಡಿದಿದ್ದರು. (ಏಜೆನ್ಸೀಸ್​)

    ಜೆಡಿಎಸ್ ಪಂಚರತ್ನ ಯಾತ್ರೆಗೆ ಚಾಲನೆ: ಕನಸಿನ ಯಾತ್ರೆಯ ಉದ್ದೇಶಗಳ ಬಗ್ಗೆ ಎಚ್​ಡಿಕೆ ವಿವರಿಸಿದ್ದು ಹೀಗೆ…

    ವಿವಾಹೇತರ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಂದು ನಾಟಕವಾಡಿದ ಪತ್ನಿ ಅರೆಸ್ಟ್​

    ಜೀವನದ ಅರ್ಥ ಸರಳ ರೀತಿಯಲ್ಲಿ ತಿಳಿಸುವ ಆಧ್ಯಾತ್ಮಿಕ ಕೇಂದ್ರ ಆರ್ಟ್ ಆಫ್ ಲಿವಿಂಗ್: ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts