More

    ಮತ್ತೆ ಬಿಡುಗಡೆಯಾಗುತ್ತಿದೆ ರಜನಿಕಾಂತ್​ ಅಭಿನಯದ ‘ಬಾಬಾ’; ಯಾಕೆ ಗೊತ್ತಾ?

    ಚೆನ್ನೈ: 20 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ರಜನಿಕಾಂತ್​ ಅಭಿನಯದ ‘ಬಾಬಾ’. ನಾಸ್ತಿಕನೊಬ್ಬ ಆಧ್ಯಾತ್ಮಿಕತೆಯತ್ತ ವಾಲುವ ಈ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗೆ ನೋಡಿದರೆ, ಆ ಕಾಲಕ್ಕೆ ಬಹುನಿರೀಕ್ಷಿತ ಚಿತ್ರವಾಗಿತ್ತು ‘ಬಾಬಾ’. ಏಕೆಂದರೆ, ‘ಭಾಷಾ’ ಮತ್ತು ‘ಅಣ್ಣಾಮಲೈ’ನಂತಹ ಸೂಪರ್​ ಹಿಟ್​ ಚಿತ್ರಗಳ ನಂತರ ನಿರ್ದೇಶಕ ಸುರೇಶ್​ ಕೃಷ್ಣ ಮತ್ತು ರಜನಿಕಾಂತ್​ ಈ ಚಿತ್ರದಲ್ಲಿ ಒಂದಾಗಿದ್ದರು. ಆದರೆ, ಈ ಚಿತ್ರ ಗೆಲ್ಲಲಿಲ್ಲ.

    ಇದನ್ನೂ ಓದಿ: ‘ಕಾಳಿ’ಗೆ ಬಂದರು ಸಪ್ತಮಿ ಗೌಡು; ಜನವರಿಯಿಂದ ಚಿತ್ರೀಕರಣ ಪ್ರಾರಂಭ

    ಈಗ 20 ವರ್ಷಗಳ ನಂತರ ‘ಬಾಬಾ’ ಚಿತ್ರವು ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಇವತ್ತಿನ ಹೊಸ ತಂತ್ರಜ್ನಾನದಲ್ಲಿ ಮತ್ತೊಮ್ಮೆ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಗೆದ್ದ ಚಿತ್ರಗಳನ್ನು ಮರುಬಿಡುಗಡೆ ಮಾಡುವುದು ಸಹಜ. ಆದರೆ, ಸೋತ ಚಿತ್ರವೊಂದನ್ನು ಮತ್ತೆ ಬಿಡುಗಡೆ ಮಾಡುತ್ತಿರುವುದು ಆಶ್ಚರ್ಯ ತರಿಸಬಹುದು.

    ಇಷ್ಟಕ್ಕೂ ಈ ಚಿತ್ರ ಮರುಬಿಡುಗಡೆಯಾಗುತ್ತಿರುವುದು ಏತಕ್ಕೆ ಎಂದು ನಿರ್ದೇಶಕ ಸುರೇಶ್​ ಕೃಷ್ಣ ಉತ್ತರಿಸಿದ್ದಾರೆ. ‘ರಜನಿಕಾಂತ್​ ಈ ಚಿತ್ರವನ್ನು ಮರುಬಿಡುಗಡೆ ಮಾಡೋಣ ಎಂದಾಗ ನನಗೂ ಈ ಪ್ರಶ್ನೆ ಬಂದಿತ್ತು. ಈ ಕುರಿತು ಅವರನ್ನು ಪ್ರಶ್ನಿಸಿದಾಗ, ಚಿತ್ರ ನೋಡುವುದಕ್ಕೆ ಹೇಳಿದರು. ಬಹಳ ವರ್ಷಗಳ ನಂತರ ಚಿತ್ರವನ್ನು ಮತ್ತೊಮ್ಮೆ ನೋಡಿದೆ. ಖುಷಿಯಾಯಿತು. ಈಗಿನ ಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡಿದರೆ ವರ್ಕ್​ ಆಗಬಹುದು ಎಂಬುದು ರಜನಿಕಾಂತ್​ ಅವರ ಅಭಿಪ್ರಾಯ. ಅದರಲ್ಲೂ ಈಗ ಫ್ಯಾಂಟಸಿ ಚಿತ್ರಗಳ ಟ್ರೆಂಡ್​ ನಡೆಯುತ್ತಿದೆ. ‘ಕಾಂತಾರ’, ‘ಕಾರ್ತಿಕೇಯ’ದಂತಹ ಚಿತ್ರಗಳು ಗೆಲ್ಲುತ್ತಿವೆ. ಇಂಥ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ಗೆಲ್ಲಬಹುದು ಎಂಬುದು ಅವರ ಅಭಿಪ್ರಾಯ. ಅದೇ ಕಾರಣಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು

    ಸದ್ಯ ಚಿತ್ರದ ರೀಮಾಸ್ಟರಿಂಗ್​ ಕೆಲಸಗಳು ನಡೆಯುತ್ತಿದ್ದು, ಮುಂದಿನ ತಿಂಗಳು ಎಲ್ಲ ಕೆಲಸಗಳು ಮುಗಿಯುವ ಸಾಧ್ಯತೆ ಇದೆ. ಆ ನಂತರ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

    ನಾವು ಯಾರು ಅವರ ಬಗ್ಗೆ ಕಾಮೆಂಟ್​ ಮಾಡುವುದಕ್ಕೆ? ರಶ್ಮಿಕಾ ಬಗ್ಗೆ ಪ್ರಮೋದ್​ ಶೆಟ್ಟಿ ಪ್ರಶ್ನೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts