More

    VIDEO| ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಮದುವೆ ಹಿನ್ನಲೆಯಲ್ಲಿ ದಾಂಡಿಯಾ ನೃತ್ಯದ ಜತೆಗೆ ಅದ್ಧೂರಿ ಫೋಟೋಶೂಟ್​

    ಬಳ್ಳಾರಿ: ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಮದುವೆ ಮಾರ್ಚ್ 5ರಂದು ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಬಳ್ಳಾರಿ ನಿವಾಸದಲ್ಲಿ ಸೋಮವಾರ ಬೆಳ್ಳಂ ಬೆಳಗ್ಗೆ ದಾಂಡಿಯಾ ನೃತ್ಯದ ಜತೆಗೆ ಫೋಟೋಶೂಟ್ ನಡೆಯಿತು.

    ಫೋಟೋಶೂಟ್’ಗೆ ಅದ್ಧೂರಿ ಸೆಟ್ ಹಾಕಿ ಕುಟುಂಬದ ಅಪೂರ್ವ ಕ್ಷಣಗಳನ್ನು ಸೆರೆ ಹಿಡಿಯಲಾಯಿತು. ರಕ್ಷಿತಾಗೆ ವಿಶೇಷ ಉಡುಪು ಹಾಕಿಸಿ ಸಿನಿಮಾ ಸ್ಟೈಲ್’ನಲ್ಲಿ ವಿಭಿನ್ನವಾದ ಫೋಟೋಗಳನ್ನು ಕ್ಲಿಕ್ಕಿಸಲಾಯಿತು. ಈ ವೇಳೆ ಸಂಬಂಧಿಕರು ಭರ್ಜರಿ ದಾಂಡಿಯಾ ನೃತ್ಯ ಮಾಡಿ ಖುಷಿಪಟ್ಟರು. ಮಾಜಿ ಶಾಸಕ ಹಾಗೂ ಶ್ರೀರಾಮುಲು ಅಳಿಯ ಸುರೇಶ್ ಬಾಬು ಅವರು ಪತ್ನಿ ಜತೆ ಕೆಲ ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

    ಶ್ರೀರಾಮುಲು ಅವರು ತಮ್ಮ ಮಗಳ ಮದುವೆ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಅನೇಕ ರಾಜಕೀಯ ನಾಯಕರನ್ನು ಭೇಟಿ ಮಾಡಿ ಈಗಾಗಲೇ ಮದುವೆಗೆ ಆಹ್ವಾನಿಸಿದ್ದಾರೆ. ಮಾರ್ಚ್​ 5ರಂದು ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಲಿದೆ.

    https://www.instagram.com/p/B9OSD5Pn8h5/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts