More

    ಜನರ ಸಂಕಷ್ಟ ಚರ್ಚೆಗಿಲ್ಲ ಅವಕಾಶ : ಚುನಾವಣೆ ಆಯೋಗದ ವಿರುದ್ಧ ಬಿ.ಆರ್.ಪಾಟೀಲ್ ಕಿಡಿ



    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ತೀವ್ರ ಬರದಿಂದಾಗಿ ಆಳಂದ ತಾಲೂಕಿನ ೮೫ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಈ ಬಗ್ಗೆ ಚರ್ಚಿಸಿ ಸೂಚನೆ ನೀಡಲು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲು ಚುನಾವಣೆ ಆಯೋಗ ಅನುಮತಿ ನೀಡುತ್ತಿಲ್ಲ ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ದೂರಿದರು.
    ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಶಾಸಕರ ಅಧಿಕಾರ ಕಸಿದುಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ತಾಪಂ ಇಒ, ತಹಸೀಲ್ದಾರ್ ಸೇರಿ ಪ್ರಮುಖ ಅಧಿಕಾರಿಗಳು ಹೊಸಬರಾಗಿದ್ದು, ಅವರಿಗೆ ಕ್ಷೇತ್ರದ ಮಾಹಿತಿ ಇಲ್ಲ, ಜನರ ಪರಿಚಯವೂ ಇಲ್ಲ. ಅದ್ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಕುಡಿಯುವ ನೀರು ಮತ್ತು ಬರ ನಿರ್ವಹಣೆ ಬಗ್ಗೆ ಚರ್ಚಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದು, ಅನುಮತಿ ನೀಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಎರಡು ತಿಂಗಳು ಹೇಗೆ ಅಧಿಕಾರಿಗಳು ಪರಿಹಾರ ಒದಗಿಸುತ್ತಾರೆ? ಕ್ಷೇತ್ರದಲ್ಲಿ ೩೬ ಕೆರೆಗಳಿದ್ದು, ಸಾಲೇಗಾಂವ, ದಣ್ಣೂರು, ವೈಜಾಪುರ ಸೇರಿ ಕೆಲವೆಡೆ ನೀರಿದೆ. ಉಳಿದಂತೆ ಎಲ್ಲೆಡೆ ತೀವ್ರ ಕೊರತೆ ಇದೆ ಎಂದರು.
    ಅAತರ್ಜಲ ಬತ್ತಿದ್ದು, ಖಾಸಗಿಯವರ ಬಾವಿಯಿಂದ ನೀರು ಖರೀದಿಸಬೇಕಿದೆ. ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಸ್ಪಂದಿಸಲು ಆಗುತ್ತಿಲ್ಲ. ಆಳಂದ ಕ್ಷೇತ್ರದಲ್ಲಿ ೮೯ ಸಾವಿರ ಕಾರ್ಮಿಕರ ಪೈಕಿ ೩೪ ಸಾವಿರ ಕಾರ್ಮಿಕರಿಗೆ ನರೇಗಾ ಜಾಬ್ ಕಾರ್ಡ್ ಇದೆ. ೪೦೦೦ ಜನರಿಗೆ ಮಾತ್ರ ಉದ್ಯೋಗ ದೊರಕಿದೆ. ೧೦೦ ಹಳ್ಳಿಗಳಲ್ಲಿ ನರೇಗಾ ಕ್ರಿಯಾಯೋಜನೆಯೇ ಸಿದ್ಧಗೊಂಡಿಲ್ಲ ಎಂದು ಕಿಡಿಕಾರಿದರು.
    ಶಾಸಕನಾದ ನಂತರ ನಾಲ್ಕು ಟಾಸ್ಕ್ ಫೋರ್ಸ್ ಸಭೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿz್ದೆÃನೆ. ಇದೀಗ ಚುನಾವಣೆ ಬಂದಿದ್ದರಿAದ ಸಭೆ ನಡೆಸಲು ಆಗುತ್ತಿಲ್ಲ. ಚುನಾವಣೆ ಆಯೋಗ ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಪಾಟೀಲ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts