More

    ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಆಯುರ್ವೇದ ಔಷಧಿ

    ಬೆಂಗಳೂರು: ಆಯುರ್ವೇದ ಔಷಧ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಯುರ್ವೇದ ಕಂಪನಿಗಳು ಗಿಡಮೂಲಿಕೆಗಳು ಹಾಗೂ ಜೀವ ವೈವಿಧ್ಯಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಆಯುರ್ವೇದ ಔಷಧಿಗಳನ್ನು ನೀಡಬೇಕು ಎಂದು ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದ್ದಾರೆ.

    ಕರ್ನಾಟಕ ಜೀವವೈವಿಧ್ಯ ಮಂಡಳಿ ಬೆಂಗಳೂರಿನ ಅರಣ್ಯಭವನದಲ್ಲಿ ಆಯೋಜಿಸಿದ್ದ ಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ವೃತ್ತ ಪೂರ್ಣಗೊಳಿಸುವಿಕೆ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು.

    ಜನಸಾಮಾನ್ಯರ ರೋಗ ರುಜಿನುಗಳನ್ನು ವಾಸಿ ಮಾಡಲು ನಾಟಿ ವೈದ್ಯರು ಗಿಡಮೂಲಿಕೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಿ ಜನಸಾಮಾನ್ಯರಿಗೆ ನೀಡುತ್ತಾರೆ ಹೀಗಾಗಿ ಜೀವವೈವಿದ್ಯಗಳನ್ನು ಉಳಿಸಬೇಕು ಬೆಳೆಸಬೇಕು
    ಎಂದರು .

    ಜೀವ ವೈವಿಧ್ಯ ವ್ಯಾಪ್ತಿ ವಿಸ್ತಾರ ಬಹಳ ದೊಡ್ಡದಾಗಿದ್ದು‌ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಜೀವ ವೈವಿಧ್ಯಗಳ ರಕ್ಷಣೆಗೆ ಹಾಗೂ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಈ ಜೀವ ವೈವಿಧ್ಯಗಳ ಸಂರಕ್ಷಣೆಯನ್ನು ಮಾಡಲು ಹಾಗೂ ಬೆಳೆಸಲು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಅವರು ಜೀವ ವೈವಿಧ್ಯಗಳನ್ನು ಕಾನೂನು ವ್ಯಾಪ್ತಿಗೆ ತಂದಿದ್ದಾರೆ. ಪ್ರಕೃತಿ ಸಂಪತ್ತನ್ನು ಉಪಯೋಗಿಸುವ ಕಂಪನಿಗಳು ಅವುಗಳನ್ನು ಬೆಳೆಸುವುದಕ್ಕೂ ಗಮನಕೊಡಬೇಕು ಎಂದರು.‌ ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡೋಣ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು-ಹೆಚ್ಚು ಚರ್ಚೆಗಳು ಕಾರ್ಯಾಗಾರಗಳು ಆಗಬೇಕು ಎಂದು ಸಚಿವರು ಹೇಳಿದರು .

    ಜೀವ ವೈವಿಧ್ಯಗಳನ್ನು ಬೆಳೆಸುವಲ್ಲಿ ಹಾಗೂ ಸಂರಕ್ಷಿಸುವಲ್ಲಿ ಗ್ರಾಮ ಮತ್ತು ತಾಲೂಕು ಪಂಚಾಯಿತಿಗಳ ಜವಾಬ್ದಾರಿ ಹೆಚ್ಚಲಿ ಎಂಬ ದೃಷ್ಟಿಯಿಂದ ಇಂದು ಸಾಂಕೇತಿಕವಾಗಿ ಎಂಟು ತಾಲ್ಲೂಕು ಪಂಚಾಯಿತಿಗಳಿಗೆ ಚೆಕ್ ಗಳನ್ನು ವಿತರಿಸಲಾಯಿತು.

    ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ ಅನುರಾಧ ಮಾತನಾಡಿ, 25 ವರ್ಷಗಳ ಹಿಂದೆ ರಾಜ್ಯದಲ್ಲಿ ಶೇ‌. 49 ಅರಣ್ಯ ಪ್ರದೇಶವಿದ್ದು ಇದೀಗ ಶೇ.22ಕ್ಕೆ ಕುಸಿದಿದೆ. ದಟ್ಟ ಅರಣ್ಯಗಳು ಕಾಣೆಯಾಗಿವೆ ದಟ್ಟ ಅರಣ್ಯಗಳನ್ನು ಹುಡುಕುವ ಪರಿಸ್ಥಿತಿ ಬಂದಿದೆ ಎಂದರು. ಅರಣ್ಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸೇರಿ ಅರಣ್ಯ ಬೆಳೆಸುವುದಕ್ಕೆ ಒತ್ತು ನೀಡಬೇಕು. ಅರಣ್ಯ ಅಭಿವೃದ್ಧಿ ಮಂಡಳಿಯಲ್ಲಿ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಭಾರ ಆಗಿದ್ದು ಶಾಶ್ವತವಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

    ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ ಪ್ರಕೃತಿ ಸಂಪತ್ತನ್ನು ಬಳಸುವ ನಾವು ಅದನ್ನು ಮತ್ತೆ ನಿಸರ್ಗಕ್ಕೆ ವಾಪಸ್ ನೀಡಬೇಕು ಈಗಾಗಿ ಜೀವ ವೈವಿಧ್ಯಗಳನ್ನು ಬೆಳೆಸಬೇಕು ಹಾಗೂ ಉಳಿಸಬೇಕು ಎಂದರು.

    ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕುಮಾರ್ ಅರಣ್ಯ ಇಲಾಖೆಯ ಅಧಿಕಾರಿಗಳಾದ ವರ್ಮ, ಪುನಿತ್ ಪಾಠಕ್ ಮತ್ತಿತರ ಅಧಿಕಾರಿಗಳು ಹಾಗೂ ಔಷಧೀಯ ಕಂಪನಿಗಳ ಮುಖ್ಯಸ್ಥರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

    ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts