More

    ರಾಮ ಮಂದಿರವಲ್ಲ, ಅದು ಆರ್​ಎಸ್ಎಸ್ ಮಂದಿರ: ವಿವಾದದ ಕಿಡಿ ಹೊತ್ತಿಸಿದ ಪಿಎಫ್​ಐ ಮುಖಂಡ

    ಬೆಂಗಳೂರು: ‘ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವುದು ಶ್ರೀರಾಮ ಮಂದಿರ ಅಲ್ಲ, ಅದು ಆರ್​ಎಸ್ಎಸ್ ಮಂದಿರ. ಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನೂ ಕೊಡಬೇಡಿ’ ಎಂದು ಹೇಳವ ಮೂಲಕ ಮಂಗಳೂರಿನ ಪಿಎಫ್​ಐನ ಜನರಲ್​ ಸೆಕ್ರೆಟರಿ ಹನೀಸ್​ ಅಹಮದ್​ ವಿವಾದದ ಕಿಡಿ ಹೊತ್ತಿಸಿದ್ದಾರೆ.

    ಮಂಗಳೂರಿನ ಉಳ್ಳಾನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪಿಎಫ್​ಐ(ಪಾಪುಲರ್ ಫ್ರಂಟ್ ಆಫ್ ಇಂಡಿಯಾ)ನ ಹನೀಸ್​ ಅಹಮದ್​​, ಆರ್​ಎಸ್​ಎಸ್​ ಆ್ಯಂಟಿ ಹಿಂದು ಸಂಘಟನೆ. ಹಿಂದು ಮತ್ತು ಮುಸ್ಲಿಂ ನಡುವೆ ದ್ವೇಷ ಇಲ್ಲ. ಇರೋದು ಆರ್​ಎಸ್​ಎಸ್​ ಮತ್ತು ಮುಸ್ಲಿಂ ನಡುವೆ. ದೇಶದಲ್ಲಿರುವ ಆರ್​ಎಸ್​ಎಸ್​ ಕ್ಯಾನ್ಸರ್​ ಇದ್ಹಾಗೆ. ಅದು ವಾಸಿ ಆಗೋದಿಲ್ಲ. ಹಿಂದು v/s ಪಿಎಫ್​ಐ ಅಲ್ಲ, ಆರ್​ಎಸ್​ಎಸ್​ v/s ಮುಸ್ಲಿಂ. ಆರ್​ಎಸ್​ಎಸ್​ ನಾಯಕರನ್ನ ಗುರುತಿಸಿ ಇಟ್ಟುಕೊಳ್ಳಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

    ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿ ಜಾಗವನ್ನ ಬಿಟ್ಟುಕೊಡಿ ಎಂದಿದ್ರು. ಜಾಗ ಬಿಟ್ಟುಕೊಟ್ಟಾಯ್ತು. ಆದ್ರೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಇನ್ನೂ ಕೂಡ ಮುಸ್ಲಿಂರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ್ಯಂಟಿ ಹಿಂದು ಸಂಘಟನೆ ನಮ್ಮದ್ದಲ್ಲ. ಆರ್​ಎಸ್​ಎಸ್​ ಆ್ಯಂಟಿ ಹಿಂದು ಸಂಘಟನೆ. ಪಿಎಫ್ಐ​ನ ದುಶ್ಮನ್​ ಏನೇ ಇದ್ರೂ ಆರ್​ಎಸ್​ಎಸ್​ ಎಂದು ಹನೀಸ್​ ಅಹಮದ್​​ ಹೇಳಿದ್ದಾರೆ.

    ರಾಮ ಮಂದಿರವಲ್ಲ, ಅದು ಆರ್​ಎಸ್ಎಸ್ ಮಂದಿರ: ವಿವಾದದ ಕಿಡಿ ಹೊತ್ತಿಸಿದ ಪಿಎಫ್​ಐ ಮುಖಂಡಹಿಂದು-ಮುಸ್ಲಿಂ ನಡುವೆ ಸಮಸ್ಯೆ ಇಲ್ಲ. ಇರೋದು ಆರ್​ಎಸ್​ಎಸ್​ ಮತ್ತು ಮುಸ್ಲಿಂ ನಡುವೆ. ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಯಾರಾದರೂ ಬಂದರೆ ಮುಸ್ಲಿಂನ ಯಾರೊಬ್ಬರೂ ಒಂದು ರೂಪಾಯಿಯನ್ನೂ ಕೊಡಬೇಡಿ. ಅದು ರಾಮ ಮಂದಿರ ಅಲ್ಲ, ಅದು ಆರ್​ಎಸ್​ಎಸ್​ ಮಂದಿರ ಎಂದು ಕಿಡಿಕಾರಿದ್ದಾರೆ.

    ಪಿಎಫ್​ಐ ಸಂಘಟನೆಯು ಆರ್​ಎಸ್​ಎಸ್​ ನಾಯಕರ ಗುರುತು ಇಟ್ಟುಕೊಂಡು ಏನು ಮಾಡಲು ಹೊರಟಿದೆ. ಇಂತಹ ಪ್ರಚೋದನಾಕಾರಿ ಹೇಳಿಕೆ ಕೊಡುತ್ತಾ ದೇಶದಲ್ಲಿ ಶಾಂತಿ ಕದಡುತ್ತಿರುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೂಗು ಎಲ್ಲೆಡೆ ಕೇಳಿ ಬಂದಿದೆ.

    ಇನ್ನು ಪಿಎಫ್​ಐ ಮುಖಂಡರ ವಿವಾದಾತ್ಮಕ ಹೇಳಿಕೆ ಕುರಿತು ಆಕ್ರೋಶ ಹೊರಹಾಕಿರುವ ಗೃಹ ಸಚಿವ ಬಸವರಾಜ ಬೊಮ್ಮಾಯ, ಪಿಎಫ್​ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ. ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆ ಇದು. ಆರ್​ಎಸ್ಎಸ್ ಸಂಘಟನೆ ದೇಶಭಕ್ತಿಯ ಪ್ರತೀಕ. ರಾಮ ಮಂದಿರ ನಿರ್ಮಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ ಪಿಎಫ್​ಐ ನಾಯಕರು ಮಾತನಾಡಿರುವುದು ಆಕ್ಷೇಪಾರ್ಹ. ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್​ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    Photos| ರಾಜ್ಯದಲ್ಲಿ ಆಲಿಕಲ್ಲು ಮಳೆ! ಮಂಜು ಹೊದ್ದು ಮಲಗಿವೆ ಹಲವು ಗ್ರಾಮಗಳು

    3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

    ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts