More

    ಹುರಳಿಕುಪ್ಪಿಯಲ್ಲಿ ಅಯೋಧ್ಯೆ ಯಾತ್ರಿಕರಿಗೆ ಸನ್ಮಾನ

    ಸವಣೂರ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಿಂದಾಗಿ ದೇಶದ ಜನರಲ್ಲಿ ಭಾವನಾತ್ಮಕ ಬದಲಾವಣೆ ಕಾಣುತ್ತಿದೆ ಎಂದು ನ್ಯಾಯವಾದಿ ಗುಡ್ಡನಗೌಡ ಅಂದಾನಿಗೌಡ್ರ ತಿಳಿಸಿದರು.

    ತಾಲೂಕಿನ ಹುರಳಿಕುಪ್ಪಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಅಯೋಧ್ಯೆ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ರಾಷ್ಟ್ರದ ಪ್ರತಿ ಪ್ರಜೆಯಲ್ಲೂ ಧಾರ್ವಿುಕ ಭಾವನೆ ಜಾಗೃತಿ ಮೂಡಿಸುವ 500 ವರ್ಷಗಳ ಹೋರಾಟಕ್ಕೆ ಈಗ ಜಯ ದೊರೆತಿದೆ. ಕೇವಲ ರಾಷ್ಟ್ರದಲ್ಲಿ ಅಲ್ಲದೆ, ವಿಶ್ವದ ಇತರೆ ರಾಷ್ಟ್ರಗಳಲ್ಲಿಯೂ ಸರ್ವ ಧರ್ಮೀಯರು ರಾಮನ ಮಂದಿರ ಉದ್ಘಾಟನೆಯಿಂದ ಸಂತಸ ಪಡುತ್ತಿದ್ದಾರೆ. ಭಾರತ ಅಭಿವೃದ್ಧಿಯತ್ತ ದಾಪುಗಲು ಇಟ್ಟಿದೆ ಎಂದರು.

    ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ತೆರಳುವ ಯಾತ್ರಿಕರನ್ನು ಗ್ರಾಮಸ್ಥರು ಬೀಳ್ಕೊಡುವ ಮೂಲಕ ನಮ್ಮಲ್ಲಿ ಮತ್ತಷ್ಟು ಧಾರ್ವಿುಕ ಭಾವನೆ ಹೆಚ್ಚುವಂತೆ ಮಾಡಿದ್ದಾರೆ.

    ವೇ.ಮೂ. ಈರಯ್ಯ ಹಿರೇಮಠ ಅವರು ಯಾತ್ರಿಕರಿಗೆ ಸನ್ಮಾನಿಸಿ ಶುಭ ಹಾರೈಸಿದರು.

    ಬಸವರಾಜ ಇಂಗಳಗಿ, ಕಿರಣ ಮನ್ನಂಗಿ, ಪ್ರಭುಗೌಡ ಅಂದಾನಿಗೌಡ್ರ, ಈರಯ್ಯ ಹಿರೇಮಠ, ದಾನಯ್ಯ ಹಿರೇಮಠ, ವೀರನಗೌಡ ಬಸನಗೌಡ್ರು, ಕೆವಿಜಿ ಬ್ಯಾಂಕ್ ಮ್ಯಾನೇಜರ್ ಶಿವರಾಂ, ಎಸ್. ನವೀನ, ಪ್ರಶಾಂತ ಕುಮಾರ ಕೆ., ಹನುಮಂತ ಕಲಾದಗಿ, ಎಸ್. ಎಸ್. ಪಾಟೀಲ, ಸಿ. ಎಸ್. ಪಾಟೀಲ, ಪುಟ್ಟಣ್ಣ ಮಣಕವಾಡ, ಮಂಜುನಾಥ ಇಂಗಳಗಿ, ಫಕೀರೇಶ ಪೂಜಾರ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts