More

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..

    ಬೆಂಗಳೂರು: ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಅಕ್ಷರಶಃ ಹಬ್ಬದ ಕಳೆ. ಮಕ್ಕಳಿಂದ ಹಿಡಿದು ಯುವಕರು, ಹಿರಿಯರೆಲ್ಲರ ಮೊಗದಲ್ಲಿ ಏನೋ ಒಂದು ಖುಷಿ, ದಾವಂತ ಮತ್ತು ಕುತೂಹಲ. ಆ ಕೌತುಕಕ್ಕೆ ಕಾರಣವಾಗಿದ್ದು, ‘ವಿಜಯಾನಂದ’ ಚಿತ್ರದ ಆಡಿಷನ್!

    ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆ, ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ವಣಕ್ಕಿಳಿದಿರುವುದು ಗೊತ್ತಿರುವ ಸಂಗತಿ. ಚೊಚ್ಚಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಆಡಿಷನ್​ನಲ್ಲಿ ಸಾವಿರಾರು ಕಲಾವಿದರು ಆಗಮಿಸಿ ಪ್ರತಿಭೆ ಪ್ರದರ್ಶಿಸಿದರು.

    ಆಡಿಷನ್ ಎದುರಿಸಿದ 3 ಸಾವಿರ ಅಭ್ಯರ್ಥಿಗಳು

    ‘ವಿಜಯಾನಂದ’ ಚಿತ್ರದ ಕಲಾವಿದರ ಆಯ್ಕೆಯ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಬೆಳಗ್ಗೆ 10ರಿಂದ ಆರಂಭವಾದ ಆಡಿಷನ್ ಪ್ರಕ್ರಿಯೆ ಸಂಜೆ 6 ಗಂಟೆ ವರೆಗೂ ನಡೆಯಿತು. ಬರೋಬ್ಬರಿ 3ಸಾವಿರದಷ್ಟು ಅಭ್ಯರ್ಥಿಗಳು ಆಡಿಷನ್ ಎದುರಿಸಿದರು. ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ಸುತ್ತಲಿನ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಿಂದಲೂ ನಟನಾ ಆಕಾಂಕ್ಷಿಗಳು ಆಗಮಿಸಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದರು.

    ಮಕ್ಕಳಿಗೆ ಪ್ರತ್ಯೇಕ ಆಡಿಷನ್

    ‘ವಿಜಯಾನಂದ’ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳ ಜತೆಗೆ ಮಕ್ಕಳ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಹಾಗಾಗಿ ಆಡಿಷನ್​ನಲ್ಲಿ ಕೇವಲ ವಯಸ್ಕರಷ್ಟೇ ಅಲ್ಲ ಮಕ್ಕಳ ಕಲರವವೂ ಜೋರಾಗಿತ್ತು. ಗುರುರಾಜ್ ಕಲ್ಯಾಣ ಮಂಟಪದ ಮುಖ್ಯ ಸಭಾಂಗಣದಲ್ಲಿ ಯುವಕರು, ವಯಸ್ಕರರು ಮತ್ತು 70ರ ಆಸುಪಾಸಿನವರಿಗೆ ಅವಕಾಶ ನೀಡಿದರೆ, ಅದೇ ಕಟ್ಟಡದೊಳಗಿನ ಮತ್ತೊಂದು ಸಭಾಂಗಣದಲ್ಲಿ ನೂರಾರು ಪುಟಾಣಿಗಳು ನಟನೆ ಮೂಲಕವೇ ಗಮನ ಸೆಳೆದರು.

    ‘ಕನ್ನಡ ಚಿತ್ರೋದ್ಯಮಕ್ಕೆ ನಿಮಗೆ ಸ್ವಾಗತ’

    ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ‘ವಿಜಯಾನಂದ’ ಚಿತ್ರದ ನಿರ್ವಪಕರಾದ ಆನಂದ ಸಂಕೇಶ್ವರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆಗೆ ಉಭಯಕುಶಲೋಪರಿ ವಿಚಾರಿಸಿದರು. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ವಪಕ ಎನ್.ಎಮ್ ಸುರೇಶ್ ಆನಂದ ಸಂಕೇಶ್ವರ ಅವರನ್ನು ವಾಣಿಜ್ಯ ಮಂಡಳಿಗೆ ಮತ್ತು ಚಿತ್ರೋದ್ಯಮಕ್ಕೆ ಸ್ವಾಗತಿಸಿ, ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಸಾರಾ ಗೋವಿಂದು, ‘ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ವಿಆರ್​ಎಲ್ ಸಂಸ್ಥೆ ಅಡಿ ಇಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಸಂಸ್ಥೆಯಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಬರಲಿ. ಕನ್ನಡ ಚಿತ್ರೋದ್ಯಮಕ್ಕೆ ಈ ಸಂಸ್ಥೆಯಿಂದ ಅಪಾರ ಕೊಡುಗೆ ಸಿಗಲಿ’ ಎಂದರು.

    ಮಳೆಯಿದ್ದರೂ ಕುಂದದ ಉತ್ಸಾಹ

    ಚಿತ್ರದ ನಾಯಕ ನಿಹಾಲ್ ಮತ್ತು ನಿರ್ದೇಶಕಿ ರಿಷಿಕಾ ಶರ್ಮ ಬೆಳಗ್ಗೆ 10ಕ್ಕೆ ಕ್ಯಾಮರಾಗಳಿಗೆ ಪೂಜೆ ಸಲ್ಲಿಸಿ ಆಡಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಿಷನ್ ಶುರುವಾಗುತ್ತಿದ್ದಂತೆ ಮಳೆರಾಯನೂ ಅದೇ ರೀತಿ ತನ್ನ ವರಸೆ ಆರಂಭಿಸಿದ್ದ. ಆದರೆ, ಮಳೆಯಿಂದ ಉತ್ಸಾಹ ಮಾತ್ರ ಕುಂದಲಿಲ್ಲ. ಮಳೆಯ ನಡುವೆಯೇ ಸಾಕಷ್ಟು ಆಕಾಂಕ್ಷಿಗಳು ಹಾಗೂ ಆಸಕ್ತರು ಸರದಿಯಲ್ಲಿ ಬಂದು ಕರೊನಾ ನಿಯಮಾವಳಿಗಳನ್ನು ಪಾಲಿಸಿ ನಟನೆಯನ್ನು ಪ್ರದರ್ಶಿಸಿದರು.

    ಮುಂದಿನ ವಾರ ಆಡಿಷನ್ ಫಲಿತಾಂಶ

    ಹುಬ್ಬಳ್ಳಿಯಲ್ಲಿನ ಆಡಿಷನ್​ನಲ್ಲಿ ಭಾಗವಹಿಸಿದ ಮೂರೂವರೆ ಸಾವಿರ ಜನರ ಪೈಕಿ 60 ಮಂದಿಯ ಹೆಸರನ್ನು ಈಗಾಗಲೇ ಅಂತಿಮ ಮಾಡಿ, ಅವರಿಗೆ ಕರೆ ಮಾಡಿ ಶೂಟಿಂಗ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಇದೀಗ ಬೆಂಗಳೂರಿನಲ್ಲಿ ನಡೆದ ಆಡಿಷನ್ ಫಲಿತಾಂಶ ಮುಂದಿನ ವಾರ ಹೊರಬೀಳಲಿದೆ.

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ಹುಬ್ಬಳ್ಳಿ ಯಲ್ಲಿ ನಡೆಸಿದ ಆಡಿಷನ್​ಗೆ ದೊಡ್ಡ ಪ್ರತಿಕ್ರಿಯೆ ಸಿಕಿತ್ತು. ಇದೀಗ ಬೆಂಗಳೂರಿನಲ್ಲಿಯೂ ಅದರಲ್ಲೂ ಮಳೆಯಿದ್ದರೂ, ನಿರೀಕ್ಷೆಗೂ ಮಿರಿ ಅಪಾರ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ, ಆಡಿಷನ್ ಯಶಸ್ವಿಗೊಳಿಸಿದ್ದಾರೆ. ಇದೇ ತಿಂಗಳು ಹುಬ್ಬಳ್ಳಿಯಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ. ಅದಾದ ಬಳಿಕ ಶೂಟಿಂಗ್ ಸಹ ಶುರುವಾಗಲಿದೆ.

    | ಆನಂದ ಸಂಕೇಶ್ವರ ಎಂಡಿ, ವಿಆರ್​ಎಲ್ ಸಮೂಹ ಸಂಸ್ಥೆಗಳು

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..‘ಟ್ರಂಕ್’ ಬಳಿಕ ಇದು ನನ್ನ ಎರಡನೇ ಸಿನಿಮಾ. ದೊಡ್ಡ ಮಟ್ಟದಲ್ಲಿಯೇ ನಿರ್ವಣವಾಗುತ್ತಿರುವುದರಿಂದ, ಅಷ್ಟೇ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಈಗಾಗಲೇ ಚಿತ್ರೀಕರಣಪೂರ್ವ ಕೆಲಸಗಳು ಮುಗಿದಿವೆ. ಕಲಾವಿದರ ಆಯ್ಕೆ ಪ್ರಕ್ರಿಯೆಯೂ ಕೊನೇ ಹಂತದಲ್ಲಿದೆ. ಸಣ್ಣ ಸಣ್ಣ ಪಾತ್ರದಲ್ಲಿಯೂ ಜೀವ ಇರುವುದರಿಂದ ಅಚ್ಚುಕಟ್ಟಾಗಿಯೇ ಆಯ್ಕೆ ಮಾಡುತ್ತಿದ್ದೇವೆ. ಹುಬ್ಬಳ್ಳಿ ಆಡಿಷನ್​ನಲ್ಲಿ ಸಿಕ್ಕ ಸ್ಪಂದನೆ ಇಲ್ಲಿಯೂ ಸಿಕ್ಕಿರುವುದು ಖುಷಿ ನೀಡಿದೆ.

    | ರಿಷಿಕಾ ಶರ್ಮ ನಿರ್ದೇಶಕಿ

    ಆಡಿಷನ್ ಕಳೆ ಹೆಚ್ಚಿಸಿದ ಆನಂದ ಸಂಕೇಶ್ವರರ ಭೇಟಿ

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..
    ವಿಜಯಾನಂದ ಚಿತ್ರದ ತಂಡದೊಂದಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ. ನಾಯಕ ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ವ, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಭರತ್ ಬೋಪಣ್ಣ, ಪ್ರಭು ಇದ್ದರು.

    ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್​ನ ಮಾಲೀಕರಾದ ಆನಂದ ಸಂಕೇಶ್ವರ ಅವರು ಶನಿವಾರ ನಡೆದ ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ, ಆಗಮಿಸಿದ ಸಾವಿರಾರು ಕಲಾವಿದರೊಂದಿಗೆ ಬೆರೆತರು. ಯುವ ಕಲಾವಿದರ ವೇದಿಕೆ ಪ್ರದರ್ಶನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಇದೇ ವೇಳೆ ಕೆಲವರು ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಅವರು, ‘ಲಾಜಿಸ್ಟಿಕ್ ಉದ್ಯಮ ಸವಾಲಿನ ಉದ್ಯಮ. ಈಗೆಲ್ಲ ಇಂಟರ್​ನೆಟ್ ಕಾಲದಲ್ಲಿದ್ದೇವೆ. ಆಗ ಅದ್ಯಾವುದೂ ಇಲ್ಲದ ಹೊತ್ತಿನಲ್ಲಿ ಕೇವಲ ಒಂದು ಲಾರಿಯಿಂದ ಆರಂಭವಾದ ಈ ಪ್ರಯಾಣ ಇದೀಗ ಈ ಹಂತಕ್ಕೆ ಬಂದು ನಿಂತಿದೆ. ತಂದೆಯವರ ಈ ಸಾಧನೆ ಈಗಾಗಲೇ ಹಲವರಿಗೆ ಸ್ಪೂರ್ತಿಯಾಗಿದೆ. ಆ ಸ್ಪೂರ್ತಿಯ ಕಥೆ ಮತ್ತು ಸಾಧನೆಯ ಹಿಂದಿನ ಶ್ರಮವನ್ನು ಬಯೋಪಿಕ್ ಮೂಲಕ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ನಡೆದ ಆಡಿಷನ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಇಲ್ಲಿನ ಆಡಿಷನ್​ಗೆ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ್ದೀರಿ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ನಟನಾಕಾಂಕ್ಷಿಗಳಿಗೆ ಅಭಿನಂದನೆ ತಿಳಿಸಿದರು.

    ಪ್ರತಿಭಾನ್ವಿತರಿಗೆ ಸಂಸ್ಥೆಯ ಮುಂದಿನ ಚಿತ್ರಗಳಲ್ಲಿ ಅವಕಾಶ

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ಒಂದು ಸಿನಿಮಾಕ್ಕೆ ಈ ಮಟ್ಟದ ಆಡಿಷನ್ ಬೇಕಾ ಎಂದೆನಿಸಬಹುದು. ಆದರೆ, ಇದರ ಹಿಂದಿನ ಉದ್ದೇಶ ಮಾತ್ರ ದೊಡ್ಡ ಮಟ್ಟದಲ್ಲಿದೆ. ಅದನ್ನು ಸ್ವತಃ ವಿಜಯಾನಂದ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮ ವಿವರಣೆ ನೀಡಿದ್ದಾರೆ. ‘ಹುಬ್ಬಳ್ಳಿಯಲ್ಲಿ ಈಗಾಗಲೇ 3500ಕ್ಕೂ ಅಧಿಕ ಮಂದಿ ಆಡಿಷನ್​ನಲ್ಲಿ ಭಾಗವಹಿಸಿದ್ದರು. ಅದರಲ್ಲಿ 60 ಜನರ ಪಟ್ಟಿ ಸಿದ್ಧಮಾಡಿ ಇಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿನ ಈ ಆಡಿಷನ್​ನಲ್ಲಿ 3000 ಸನಿಹ ನಟನಾ ಆಕಾಂಕ್ಷಿಗಳು ಆಗಮಿಸಿದ್ದಾರೆ. ಒಟ್ಟಾರೆ ಈ ಆಡಿಷನ್​ನಲ್ಲಿ ಟ್ಯಾಲೆಂಟ್ ತೋರಿಸಿದ ಪ್ರತಿಯೊಬ್ಬರಿಗೂ ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್​ನಲ್ಲಿ ಅವಕಾಶ ಸಿಗಲಿದೆ. ಈ ಸಿನಿಮಾ ಅಲ್ಲದಿದ್ದರೂ ಮುಂದಿನ ಸಿನಿಮಾಗಳಲ್ಲಿ ಆ ಪ್ರತಿಭಾನ್ವಿತರಿಗೆ ಅವಕಾಶ ಸಿಗಲಿದೆ’ ಎಂದರು.

    24ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಮುಹೂರ್ತ

    ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ‘ವಿಜಯಾನಂದ’ ತಂಡ ಕಲಾವಿದರ ಆಯ್ಕೆಯ ಕೊನೇ ಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೆ ಇದೇ 24ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ. ಅಲ್ಲಿಂದ ಮುಂದಿನ ಐದಾರು ತಿಂಗಳಲ್ಲಿ ಸಮರೋಪಾದಿಯಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಹುಬ್ಬಳ್ಳಿ, ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..

    ವಿಜಯಾನಂದ ಚಿತ್ರದ ಆಡಿಷನ್ ನಿಜಕ್ಕೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಚಿಣ್ಣರಿಂದ ವಯೋವೃದ್ಧರವರೆಗೂ ಸಾವಿರಾರು ಮಂದಿ ಆಗಮಿಸಿ ತಮ್ಮ ಕಲಾಪ್ರತಿಭೆಯನ್ನು ಅನಾವರಣ ಮಾಡಿದರು. ಏಕಪಾತ್ರಾಭಿನಯ, ಪೌರಾಣಿಕ ಸಂಭಾಷಣೆ.. ಹೀಗೆ ತಮ್ಮದೆ ವಿಶೇಷ ಕಲೆಯನ್ನು ಎಲ್ಲರ ಸಮ್ಮುಖದಲ್ಲಿ ಪ್ರದರ್ಶಿಸಿದರು. ಆ ಆಡಿಷನ್​ನ ಒಂದಷ್ಟು ಫೋಟೋಗಳು ಇಲ್ಲಿವೆ…

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ.. ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ.. ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ರಿಶಿಕಾ ನಿರ್ದೇಶಕಿ, ನಿಹಾಲ್ ನಾಯಕ…

    ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಮತ್ತು ‘ಟ್ರಂಕ್’ ಸಿನಿಮಾ ನಿರ್ದೇಶಿಸಿದ ರಿಶಿಕಾ ಶರ್ಮ ಈ ಬಯೋಪಿಕ್​ನ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ವಿಜಯಾನಂದ’ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಪ್ರತಿಭೆ ನಿಹಾಲ್ ರಜಪೂತ್ ಬಣ್ಣಹಚ್ಚಲಿದ್ದಾರೆ. ರಿಶಿಕಾ ನಿರ್ದೇಶನದ ‘ಟ್ರಂಕ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿಹಾಲ್, ಈ ಹಿಂದೆ ‘ಚೌಕ’ ಸಿನಿಮಾದಲ್ಲಿಯೂ ನಟಿಸಿದ್ದರು. ರಂಗಭೂಮಿಯಲ್ಲಿಯೂ ಪಳಗಿ ‘ಭಾರತಿ’, ‘ಗಂಗಾ’ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

    ಪಳಗಿದ ತಾಂತ್ರಿಕ ವರ್ಗ

    ಮಲಯಾಳಂ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ತೆಲುಗಿನಲ್ಲಿ ಕೆಲಸ ಮಾಡಿದ ಅನುಭವ ಇರುವ ಗೋಪಿ ಸುಂದರ್ ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ‘ಕಡಲ ತೀರದ ಭಾರ್ಗವ’ ಮತ್ತು ‘ಮಹಿರಾ’ ಖ್ಯಾತಿಯ ಕೀರ್ತನ್ ಪೂಜಾರಿ ಛಾಯಾಗ್ರಹಣ, ಸಂಕಲನಕಾರರಾಗಿ ಹೇಮಂತ್ ಕುಮಾರ್ ಡಿ, ನೃತ್ಯ ನಿರ್ದೇಶಕ ಇರ್ವನ್ ಸರ್ದಾರಿಯಾ, ಕಲಾ ಎಕ್ಸಿಕ್ಯೂಷನ್ ವಸಂತ್ ಕುಲಕರ್ಣಿ, ರಘು ನಿಡುವಳ್ಳಿ ಸಂಭಾಷಣೆ ಜವಾಬ್ದಾರಿ ಹೊತ್ತಿದ್ದಾರೆ.

     

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ನಟನೆಯಲ್ಲಿ ಆಸಕ್ತಿ ಇರುವುದರಿಂದ ಮಗಳನ್ನು ಆಡಿಷನ್​ಗೆ ಕರೆತಂದಿದ್ದೇನೆ. ಒಂದಷ್ಟು ಡೈಲಾಗ್​ಗಳನ್ನು ಪ್ರಾಕ್ಟಿಸ್ ಮಾಡಿದ್ದಾಳೆ. ವಿಜಯ ಸಂಕೇಶ್ವರ ಅವರ ಬಗ್ಗೆ ತಿಳಿದುಕೊಂಡಿದ್ದೇವೆ. ಅವರ ಯಶಸ್ಸಿನ ಕಥೆಯೇ ರೋಚಕ. ಈ ಚಿತ್ರದ ಭಾಗವಾಗುವ ಭರವಸೆಯಲ್ಲಿದ್ದೇವೆ.

    | ಸಮೀಕ್ಷಾ ಪೋಷಕರು

     

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ಈ ಹಿಂದೆ ಹಲವು ಆಡಿಷನ್​ಗಳನ್ನು ಎದುರಿಸಿದ್ದೆ. ಅವೆಲ್ಲವೂ ಒಂದು ಕೋಣೆಗೆ ಸೀಮಿತವಾಗಿದ್ದವು. ಇದೀಗ ‘ವಿಜಯಾನಂದ’ ಚಿತ್ರದ ಆಯ್ಕೆ ಪ್ರಕ್ರಿಯೆಯೇ ವಿಶೇಷವಾಗಿದೆ. ಸಭಾಂಗಣದಲ್ಲಿ ಎಲ್ಲರ ಸಮ್ಮುಖದಲ್ಲಿ ನಮ್ಮ ಪ್ರತಿಭೆ ಹೊರಹಾಕಿದ್ದು, ಖುಷಿ ನೀಡಿದೆ. ಆಯ್ಕೆ ಆಗುತ್ತೇನೆಂಬ ಭರವಸೆ ಇದೆ.

    | ಪವನ್ ಡಿ ಆಡಿಷನ್ ಅಭ್ಯರ್ಥಿ

     

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..ನನ್ನ ಮಗಳು ಈಗಾಗಲೇ ಗಂಟುಮೂಟೆ ಸಿನಿಮಾದಲ್ಲಿ ನಟಿಸಿದ್ದಾಳೆ. ಇದೀಗ ವಿಜಯಾನಂದ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೇವೆ. ಈ ಬೃಹತ್ ಅವಕಾಶ ನೀಡಿದ ವಿಜಯಾನಂದ ತಂಡಕ್ಕೆ ಧನ್ಯವಾದಗಳು. ಈ ಸಂಸ್ಥೆಯಿಂದ ಮತ್ತಷ್ಟು ಚಿತ್ರಗಳು ಬರಲಿ.

    | ಚೈತ್ರಾ ಪೋಷಕರು

     

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..
    ಆಡಿಷನ್​ನಲ್ಲಿ ಭಾಗಿಯಾದವರ ಹಾವಭಾವ

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..

    ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts